ಬೆಂಗಳೂರು : ಮೇಕೆದಾಟು ಪಾದಯಾತ್ರೆಯ ಹೆಸರು ಬದಲಾಯಿಸಿರುವ ಕಾಂಗ್ರೆಸ್, ಅದಕ್ಕೆ ”ವಾಕ್ ಫಾರ್ ವಾಟರ್”(ನೀರಿಗಾಗಿ ನಡಿಗೆ) ಎಂದು ಬದಲಾಯಿಸಿದ್ದು,ಯಾರು ಏನೇ ಮಾಡಿದರೂ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಯಾಕೆ ಎನ್ನುತ್ತೀರಾ ? ನೀರಿಗಾಗಿ ನಡಿಗೆ. ಮೇಕೆದಾಟು ಪಾದಯಾತ್ರೆ ಹೆಸರು ಬದಲಾವಣೆ ಮಾಡಿಕೊಂಡು ನೀರಿಗಾಗಿ ನಡಿಗೆ ಮಾಡುತ್ತೇವೆ(ವಾಕ್ ಫಾರ್ ವಾಟರ್) ಎಂದರು.
ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆಗೂ ಮುನ್ನ ಕಾಂಗ್ರೆಸ್ ಹಗರಣಗಳ ಸತ್ಯದರ್ಶನ: ಕಾರಜೋಳ
9 ನೇ ತಾರೀಖಿನಂದು ಪಾದಯಾತ್ರೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಇಡೀ ರಾಜ್ಯದಲ್ಲಿ ಯಾರು ಓಡಾಡುವುದಿಲ್ಲವೇ ?ಬಿಜೆಪಿಯವರು ಯಾರು ಓಡಾಡುವುದಿಲ್ಲವೇ. ನಮ್ಮ ಮೇಲಿನ ಸಿಟ್ಟಿಗಾಗಿ ವರ್ತಕರು, ಡ್ರೈವರ್, ಬೀದಿ ವ್ಯಾಪಾರ ಮಾಡುವವರ ಕೊಲೆ ಮಾಡುತ್ತಿದ್ದಾರೆ .ನನ್ನ ಮೇಲೆ , ಸಿಎಲ್ ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದರು.
ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್ , ಮೋದಿ ಅವರು ರ್‍ಯಾಲಿ ಮಾಡಿದರು, ಅದಕ್ಕೇನು ಕೇಸು ? ನಾವು ರ್‍ಯಾಲಿ ಮಾಡುವುದಿಲ್ಲ, ಧರಣ ಮಾಡಿಸುವುದಿಲ್ಲ ನೀರಿಗಾಗಿ ನಡಿಗೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮೇಲಿನ ದ್ವೇಷದಿಂದ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಇದು ಬಿಜೆಪಿಯ ರೂಲ್ಸ್ ಹೊರತು ಸರಕಾರದ ರೂಲ್ಸ್ ಅಲ್ಲ ಎಂದು ಕಿಡಿ ಕಾರಿದರು. ಯಾರು ಏನೇ ಮಾಡಿದರೂ ಪಾದಯಾತ್ರೆ ನಿಲ್ಲುವುದಿಲ್ಲ. ಮಾಡಿಯೇ ಮಾಡುತ್ತೇವೆ ಎಂದರು.