ಹಾವೇರಿ: ಮುಂದಿನ 14-15 ತಿಂಗಳು ಜನರ ರಾಜಕಾರಣ ಮಾಡುತ್ತೇನೆ ಹೊರತು ಅಧಿಕಾರ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕೋವೀಡ್ ನಿಂದ ಮೃತರಾದವರಿಗೆ ರಾಣೆಬೆನ್ನೂರಿನಲ್ಲಿ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿ ನಿರಂತರವಾಗಿ ಚಾಲನೆ ಅಲ್ಲಿರುವ ಪ್ರಗತಿ ಚಕ್ರ. ಅಭಿವೃದ್ಧಿ ಕಂಡಾಗ ಜನರ ಗುಣಮಟ್ಟದಲ್ಲಿ ಬದಲಾವಣೆ ಆಗುತ್ತದೆ. ಎಲ್ಲ ವರ್ಗದ ಜನರ ಅಭಿವೃದ್ಧಿಯಿಂದ ಕಲ್ಯಾಣ ರಾಜ್ಯ ಆಗಲಿಕ್ಕೆ ಸಾಧ್ಯವಾಗಲಿದೆ ಎಂದರು.
ರಾಣೆಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು, ಇದರ ಸಮಗ್ರ ಅಭಿವೃದ್ಧಿ ಉತ್ತರ ಕರ್ನಾಟಕದ ಸಂಕೇತ ಆಗುತ್ತದೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲಿಗೆ ಸಿದ್ದತೆ ಮಾಡಿದ್ದು, ಮೂರು ಕೋಟಿ ವೆಚ್ಚದಲ್ಲಿ ಹೆಬ್ಬಾಗಿಲು ಮಾಡುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
2022 ರ ಫೆಬ್ರವರಿ ಒಳಗೆ ಯುವಕರಿಗೆ ಉದ್ಯೋಗ ಕೊಡುವ ನೀತಿ ತರುತ್ತೇವೆ, ಬೇರೆ ಬೇರೆ ಇಲಾಖೆಗಳನ್ನು ಒಂದುಗೂಡಿಸಿ ಉದ್ಯೋಗ ಕ್ರಾಂತಿ ಮಾಡುವ ಯೋಜನೆ ರೂಪಿಸುತ್ತಿದ್ದೇವೆ. ಸ್ಮರಣ ಶೀಲವಾಗಿರುವ ಸರ್ಕಾರ ನಮ್ಮದು,ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಮಾಡಿದ್ದೇವೆ . 2 ಲಕ್ಷ 40 ಸಾವಿರ ಮಕ್ಕಳಿಗೆ ಸಹಾಯ ಆಗಿದೆ.ಹಳ್ಳಿಯ ಹೆಣ್ಣು ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣ ಕುಂಠಿತವಾಗುತ್ತಿದೆ, ಇದನ್ನು ದಾಖಲೆಗಳಲ್ಲಿ ನಾನು ಕಂಡಿದ್ದೇನೆ. ಗ್ರಾಮೀಣ ಹೆಣ್ಣು ಮಕ್ಕಳಿಗೆ ವಿದ್ಯಾ ನಿಧಿ ವಿಸ್ತರಣೆ ಮಾಡಬೇಕು ಎಂದು ತಿರ್ಮಾನ ಮಾಡಿದ್ದೇವೆ. ಇದೊಂದು ಮುಂದೆ ದೊಡ್ಡ ಮಟ್ಟಕ್ಕೆ ಕ್ರಾಂತಿಕಾರಿಯಾದ ಯೋಜನೆ ಆಗಲಿದೆ ಎಂದರು.
ಜನರ ಪ್ರೀತಿ ಗಳಿಸಿ ನಾವು ಮಾಡಿರುವ ಕೆಲಸ ಮುಂದಿಟ್ಟು ನಿಮ್ಮ ಆಶಿರ್ವಾದ ಕೇಳುತ್ತೇವೆ ಎಂದರು.
ಅಕಾಲಿಕ ಮಳೆ ಬಂದಾಗ ಹಿಂದೆ ಬಿಳದೆ ರೈತರ ಕಷ್ಟಕ್ಕೆ ಭಾವಿಸಿದ್ದೇವೆ. ನಗರಕ್ಕೆ 1 ಲಕ್ಷ, ಗ್ರಾಮೀಣ ಭಾಗಕ್ಕೆ 4 ಲಕ್ಷ ಮನೆಗಳು ಮಂಜೂರಾಗಿವೆ. ಮುಂದಿನ ಒಂದುವರೆ ವರ್ಷದಲ್ಲಿ ದೊಡ್ಡ ಮಟ್ಟಕ್ಕೆ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ದೊಡ್ಡ ಸಂಕಲ್ಪ. ನಮ್ಮ ಅವಧಿಯಲ್ಲೆ ಪೂರ್ಣ ಆಗಬೇಕು.ಮುಂದಿನ ಅವಧಿಗೆ ಹೋಗಬಾರದು ಎಂದು ನಾನು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.ಜನರಿಗೆ ಹೇಳಿದ್ದನ್ನು ಮಾಡಿ ತೋರಿಸಬೇಕು ಎಂಬ ಆದೇಶ ಮಾಡಿದ್ದೇನೆ. ಪ್ರತಿ ತಿಂಗಳು ಇದನ್ನು ನಾನೇ ಖುದ್ದಾಗಿ ಸೂಪರ್ ವೈಸ್ ಮಾಡುತ್ತಿದ್ದೇನೆ ಎಂದರು.