Advertisement

ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ಇಲ್ಲ: ಅಣ್ಣಾಮಲೈ

08:54 PM Apr 13, 2022 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

Advertisement

ಕಾಂಗ್ರೆಸ್‌ 40 ವರ್ಷಗಳಿಂದ ಹಿಂದಿ ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಲೇ ಬಂದಿದೆ ಎಂದು ಅವರು ದೂರಿದ್ದಾರೆ.

ಶಿಕ್ಷಣ, ಕೆಲಸದ ಉದ್ದೇಶಕ್ಕಾಗಿ ಬೇಕಾದರೆ ಹಿಂದಿ ಕಲಿಯಬಹುದು. ಆದರೆ, ಅದುವೇ ಕಡ್ಡಾಯ ಎಂದು ಹೇರಲಾಗದು.

ಇದನ್ನೂ ಓದಿ:ಯುಪಿಯಲ್ಲಿ ಶಾಂತಿಯುತ ರಾಮನವಮಿ: ಗಲಭೆಗಳಿಗೆ ಸ್ಥಳವಿಲ್ಲ ಎಂದ ಯೋಗಿ

ಭಾರತೀಯರು ಎನ್ನುವುದನ್ನು ಸಾಬೀತು ಮಾಡುವುದಕ್ಕಾಗಿ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

ಹಿಂದಿಯೇ ಪ್ರಧಾನ ಭಾಷೆಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿರಲಿಲ್ಲ ಎಂದು ಅಣ್ಣಾಮಲೈ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next