ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಚಾರ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಲ್ಲದೇ? ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬಳಿಕ ಈ ವಿಷಯದ ಬಗ್ಗೆ ಚರ್ಚೆ ಆರಂಭವಾಗಿದೆ. ಮುಂದೆ ಚುನಾವಣೆಯಲ್ಲಿ ಏನಾಗಬಹುದು ಎನ್ನುವುದನ್ನು ತಿಳಿದುಕೊಳ್ಳಲು ಹಿಂದೆ ಏನಾಗಿತ್ತು ಎಂದು ತಿರುಗಿ ನೋಡಿದರೆ ಉತ್ತರ ದೊರೆಯಬಹುದೇನೋ.
ಸ್ವಾತಂತ್ರಾÂನಂತರ ಭಾರತ ನಾಲ್ಕು ಪೂರ್ಣಪ್ರಮಾಣದ ಯುದ್ಧಗಳಲ್ಲಿ ಹೋರಾಡಿದೆ. 1948ರಲ್ಲಿ ಪಾಕ್ ವಿರುದ್ಧ, 1962ರಲ್ಲಿ ಚೀನಾ ವಿರುದ್ಧ, 1965 ಮತ್ತು 1971ರಲ್ಲಿ ಪಾಕಿಸ್ತಾನದ ವಿರುದ್ಧ. 1999ರಲ್ಲಿ ಕಾರ್ಗಿಲ್‌ನಲ್ಲೂ ಎರಡೂ ರಾಷ್ಟ್ರಗಳ ವಿರುದ್ಧ ಮಿಲಿಟರಿ ಹೋರಾಟ ನಡೆಯಿತಾದರೂ, ಅದು ಪೂರ್ಣಯುದ್ಧವಾಗಿರಲಿಲ್ಲ.
1962ರ ಚೀನಾ ವಿರುದ್ಧದ ಯುದ್ಧವನ್ನು ಹೊರತುಪಡಿಸಿದರೆ, ಉಳಿದೆಲ್ಲದರಲ್ಲೂ ಭಾರತವೇ ಗೆದ್ದಿದೆ. ಆದಾಗ್ಯೂ, ಈ ಯುದ್ಧಗಳ ಫಲಿತಾಂಶವು ಆಡಳಿತ ಪಕ್ಷಗಳ ಪರ ಕೆಲಸ ಮಾಡಿದಂತೇನೂ ಕಾಣಿಸುವುದಿಲ್ಲ. 1962 ಮತ್ತು 1967ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಭಾರತ ಒಂದು ಯುದ್ಧದಲ್ಲಿ ಗೆದ್ದರೆ (1965) ಇನ್ನೊಂದರಲ್ಲಿ ಸೋತಿತ್ತು(1962). ಎರಡೂ ಯುದ್ಧಗಳ ವೇಳೆಯೂ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್, ಎರಡೂ ಚುನಾವಣೆಗಳಲ್ಲೂ ಮತ ಮತ್ತು ಸೀಟ್ ಗಳಿಕೆಯಲ್ಲಿ ಹಾನಿ ಅನುಭವಿಸಿತು.
1971ರಲ್ಲಿ ನಡೆದ ಯುದ್ಧವು ಬಾಂಗ್ಲಾದೇಶದ ಉಗಮಕ್ಕೆ ಕಾರಣವಾಯಿತು. ಈ ಯುದ್ಧ ಭಾರತದ ಪಾಲಿಗಂತೂ ಅತ್ಯಂತ ಮಹತ್ವದ್ದಾಗಿತ್ತು. ಇಂದಿರಾ ಗಾಂಧಿಯವರಿಗೆ ಪಾಕ್ ವಿರುದ್ಧದ ಈ ಗೆಲುವು ಬಹಳ ಹೆಸರು ತಂದುಕೊಟ್ಟಿತಾದರೂ ಅದರಿಂದ ಮುಂದೆ ಅವರಿಗೇನೂ ರಾಜಕೀಯವಾಗಿ ಲಾಭವಾಗಲಿಲ್ಲ(ಬಹುಶಃ ತುರ್ತುಪರಿಸ್ಥಿತಿ ಹೇರಿದ್ದು ಇದಕ್ಕೆ ಕಾರಣವಿರಬಹುದು).
ಬಿಜೆಪಿ ನೇತೃತ್ವದ ಸರ್ಕಾರವಿರುವಾಗಲೇ ದೇಶವು ಕಾರ್ಗಿಲ್ ಯುದ್ಧಕ್ಕೆ ಸಾಕ್ಷಿಯಾಯಿತು. ಭಾರತ ಈ ಯುದ್ಧದಲ್ಲಿ ಯಶಸ್ವಿಯಾಗಿ, ಕಾರ್ಗಿಲ್ ಅನ್ನು ಮರುವಶಕ್ಕೆ ಪಡೆಯಿತು. ಇದಾದ ಕೆಲವೇ ತಿಂಗಳಲ್ಲಿ ಚುನಾವಣೆಗಳು ನಡೆದವು. ಆದಾಗ್ಯೂ 1999ರಲ್ಲಿ ಬಿಜೆಪಿಯೇ ಮತ್ತೂಮ್ಮೆ ಅಧಿಕಾರಕ್ಕೆ ಬಂದಿತಾದರೂ, ಅದರ ಸ್ಥಾನಗಳಲ್ಲಿ ಮಾತ್ರ ಏರಿಕೆಯಾಗಿರಲಿಲ್ಲ. 2016ರ ಸರ್ಜಿಕಲ್ ಸ್ಟ್ರೈಕ್ ನಂತರ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಪಡೆಯಿತು, ತದ ನಂತರದ ಚುನಾವಣೆಗಳಲ್ಲಿ ಅದು ಹಲವು ರಾಜ್ಯಗಳನ್ನು ಕಳೆದುಕೊಂಡಿತು. ಹೀಗಾಗಿ, ಈ ಬಾರಿಯ ಮಿಲಿಟರಿ ಯಶಸ್ಸು ಮೋದಿ ನೇತೃತ್ವದ ಬಿಜೆಪಿಗೆ ಯಾವ ಪ್ರಮಾಣದಲ್ಲಿ ಸಹಾಯ ಮಾಡಲಿದೆ ಎನ್ನುವುದು ಕುತೂ ಹಲದ ವಿಷಯ. ಈ ವಿಷಯದಲ್ಲಿ ಹಳೆಯ ಸಂಪ್ರದಾಯವೇ ಮುಂದುವರಿಯಲಿದೆಯೋ ಅಥವಾ ನಿಜಕ್ಕೂ ಬಿಜೆಪಿಗೆ ಲಾಭ ತರಲಿದೆಯೋ ಕಾದು ನೋಡಬೇಕಿದೆ.