Advertisement

ಈ ಬಾರಿಯೂ “ಮಂಕಡ್‌’ರನೌಟ್‌ ಮಾಡುವೆ: ಅಶ್ವಿ‌ನ್‌

09:49 AM Jan 01, 2020 | mahesh |

ಹೊಸದಿಲ್ಲಿ: ಕಳೆದ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಕೂಟದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕರಾಗಿರುವ ರವಿಚಂದ್ರನ್‌ ಅಶ್ವಿ‌ನ್‌, ನಾನ್‌ ಸ್ಟ್ರೈಕರ್‌ನಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌ ಜಾಸ್‌ ಬಟ್ಲರ್‌ ಅವರನ್ನು “ಮಂಕಡ್‌’ ರನೌಟ್‌ ಮಾಡಿ ಟೀಕೆಗೆ ಗುರಿಯಾಗಿದ್ದರು.

Advertisement

ಆದರೆ ಅಶ್ವಿ‌ನ್‌ ಈ ಟೀಕೆಗಳಿಂದ ಆಘಾತಗೊಂಡಿಲ್ಲ. ಬದಲಾಗಿ ಈ ಬಾರಿಯ ಐಪಿಎಲ್‌ ವೇಳೆ ಬೌಲಿಂಗ್‌ ಮಾಡುವಾಗ ಎದುರಾಳಿ ಬ್ಯಾಟ್ಸ್‌ಮನ್‌ ಕ್ರೀಸ್‌ ತೊರೆದರೆ ಮಂಕಡ್‌ ರನೌಟ್‌ ಮಾಡುವುದಾಗಿ ಎಚ್ಚರಿಸಿದ್ದಾರೆ.

ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆಗೆ ನಡೆಸಿದ ನೇರ ಪ್ರಶ್ನೋತ್ತರ ವೇಳೆಯಲ್ಲಿ ಅಶ್ವಿ‌ನ್‌ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿ‌ನ್‌ ಬ್ಯಾಟ್ಸ್‌ಮನ್‌ ಕ್ರೀಸ್‌ ತೊರೆದರೆ ಮಂಕಡ್‌ ರನೌಟ್‌ ಮಾಡುವುದಾಗಿ ತಿಳಿಸಿದ್ದಾರೆ.

ಕಳೆದ ಐಪಿಎಲ್‌ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಬಟ್ಲರ್‌ ಅವರನ್ನು ಅಶ್ವಿ‌ನ್‌ ಮಂಕಡ್‌ ರನೌಟ್‌ ಮಾಡಿದ್ದರು. ಇದರ ವಿರುದ್ಧ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕ್ರಿಕೆಟ್‌ ನಿಯಮದ ಪ್ರಕಾರ ಅಶ್ವಿ‌ನ್‌ ಮಾಡಿರುವುದು ಸರಿಯೆಂದು ಅನಿಸಿದರೂ ಸಭ್ಯರ ಆಟ ಕ್ರಿಕೆಟ್‌ನಲ್ಲಿ ಓರ್ವ ತಂಡದ ನಾಯಕರಾಗಿ ಅಶ್ವಿ‌ನ್‌ ಅವರ ನಡವಳಿಕೆ ಪ್ರಶ್ನಿಸುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next