Advertisement

ಬಿಜೆಪಿ ಇನ್ನೂ 5 ವರ್ಷ ಅಧಿಕಾರಕ್ಕೆ ಬಂದರೇ, ಅಸ್ಸಾಂ ಭದ್ರವಾಗುತ್ತದೆ : ಶಾ

06:16 PM Jan 24, 2021 | Team Udayavani |

ನವದೆಹಲಿ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಸ್ಸಾಂ ನಲ್ಲಿ ಇನ್ನೂ ಐದು ವರ್ಷಗಳು ಅಧಿಕಾರಕ್ಕೆ ಬಂದರೇ, ಗುಂಡುಗಳು, ಆಂದೋಲನಗಳು ಮತ್ತು ಪ್ರವಾಹದಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

Advertisement

“ಅಸ್ಸಾಂನಲ್ಲಿ ನಮಗೆ ಇನ್ನೂ ಐದು ವರ್ಷಗಳನ್ನು ನೀಡಿ, ನಾವು ಅಸ್ಸಾಂ ನ್ನು  ಗುಂಡುಗಳು, ಆಂದೋಲನಗಳು ಮತ್ತು ಪ್ರವಾಹದಿಂದ ಮುಕ್ತಗೊಳಿಸುತ್ತೇವೆ” ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮಾತ್ರ ಅಸ್ಸಾಂ ಅನ್ನು ಭ್ರಷ್ಟಾಚಾರ, ಭಯೋತ್ಪಾದನೆ, ಮಾಲಿನ್ಯ ಮುಕ್ತವಾಗಿಸುತ್ತದೆ” ಎಂದು ಪರೋಕ್ಷವಾಗಿ ಕಾಂಗ್ರೇಸನ್ನು ಶಾ ಕುಟುಕಿದರು.

ಕೊಕ್ರಜಾರ್ ‌ನಲ್ಲಿ ನಡೆದ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ (ಬಿಟಿಆರ್) ಒಪ್ಪಂದದ 1 ನೇ ವಾರ್ಷಿಕೋತ್ಸವದ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಶಾ, “ಅಸ್ಸಾಂನ ಎಲ್ಲಾ ಸಮುದಾಯಗಳ ರಾಜಕೀಯ ಹಕ್ಕುಗಳು, ಸಂಸ್ಕೃತಿ ಮತ್ತು ಭಾಷೆ ಬಿಜೆಪಿ ಸರ್ಕಾರದ ಅಡಿಯಲ್ಲಿ ಭದ್ರವಾಗಿದೆ” ಎಂದು ನುಡಿದರು.

ಓದಿ : ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದ ಶಾಸಕ ಯತ್ನಾಳ್

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next