Advertisement

ಮೋದಿ ನಿವೃತ್ತರಾದ ದಿನವೇ ರಾಜಕೀಯ ತೊರೆಯುವೆ: ಸಚಿವೆ ಸ್ಮ್ರತಿ ಇರಾನಿ

05:29 AM Feb 04, 2019 | udayavani editorial |

ಪುಣೆ : ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯದಿಂದ ನಿವೃತ್ತರಾದ ದಿನವೇ ನಾನು ರಾಜಕೀಯವನ್ನು ತೊರೆಯುವೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ. 

Advertisement

‘ಆದರೆ ಪ್ರಧಾನಿ ಮೋದಿ ಅವು ಇನ್ನೂ ಬಹಳಷ್ಟು ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವದು ಖಚಿತವಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಇರಾನಿ ಅವರು ಇಲ್ಲಿ ನಡೆದ ವರ್ಡ್ಸ್‌ ಕೌಂಟ್‌ ಉತ್ಸವದಲ್ಲಿ ಏರ್ಪಡಿಸಲಾಗಿದ್ದ ‘Scripting Her Story, From Star to Star Campaigner’ ಎಂಬ ವಿಷಯ ಕುರಿತಾದ ಚರ್ಚೆಯಲ್ಲಿ ಹೇಳಿದರು. 

‘ನೀವು ಈ ದೇಶದ ಪ್ರಧಾ ನ ಸೇವಕ ರಾಗುವುದನ್ನು (ಪ್ರಧಾನಿ ಆಗುವುದನ್ನು) ನಾವು ಯಾವಾಗ ಕಾಣುವೆವು’ ಎಂದು ಸಭಿಕರಲ್ಲಿ ಓರ್ವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಇಲ್ಲ, ಎಂದೂ ಇಲ್ಲ; ನಾನು ರಾಜಕೀಯಕ್ಕೆ ಬಂದಿರುವುದೇ ಪ್ರಭಾವೀ ಮತ್ತು ಜನಾಕರ್ಷಕ ನಾಯಕನ ಕೈಕೆಳಗೆ ಕೆಲಸ ಮಾಡಲು; ಅಂತೆಯೇ ನಾನು ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ನಾಯಕತ್ವದಡಿ ಕೆಲಸ ಮಾಡುವ ಅದೃಷ್ಟ ಪಡೆದೆ; ಹಾಗೆಯೇ ಈಗ ಮೋದಿ ಜೀ ನಾಯಕತ್ವದಡಿ ಕೆಲಸ ಮಾಡುವ ಅವಕಾಶ ನನಗೆ ಒದಗಿದೆ’ ಎಂದು ಹೇಳಿದರು. 

ಪ್ರಧಾನ ಸೇವಕ್‌ ಆಗಿರುವ ನರೇಂದ್ರ ಮೋದಿ ಅವರು ಯಾವಾಗ ರಾಜಕೀಯದಿಂದ ನಿವೃತ್ತಿ ಪಡೆಯುವ ನಿರ್ಧಾರ ಕೈಗೊಳ್ಳುತ್ತಾರೋ ಅಂದೇ ನಾನು ರಾಜಕೀಯವನ್ನು ತೊರೆಯುತ್ತೇನೆ’ ಎಂದು ಸಚಿವೆ ಇರಾನಿ ಹೇಳಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next