Advertisement
ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸ್ಥಿತಿ ಇದು. ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನೊಳ ಗೊಂಡ ಈ ಕ್ಷೇತ್ರದಲ್ಲಿ 19 ಮಂದಿ ಕಣದಲ್ಲಿದ್ದಾರೆ.
Related Articles
Advertisement
ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆ ಇದೆ. ಮರಿತಿಬ್ಬೇ ಗೌಡ ಹಾಗೂ ಕೀಲಾರ ಜಯರಾಂ ಅವರು ಜೆಡಿಎಸ್ ವೋಟು ಬ್ಯಾಂಕ್‌ನಿಂದ ಎಷ್ಟು ಮತಗಳನ್ನು ಸೆಳೆದು ಕಾಂಗ್ರೆಸ್ಸಿಗೆ ವರ್ಗಾಯಿಸಬಲ್ಲರು ಎಂಬ ಪ್ರಶ್ನೆ ಇದೆ. ಕಾಂಗ್ರೆಸ್‌ಗೆ ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖ ಎದುರಾಳಿಯಾಗಿದ್ದರೂ ರೈತ ಸಂಘ, ಪ್ರಗತಿಪರ ಸಂಘಟನೆಗಳ ಬೆಂಬಲಿತ ಹಾಗೂ ಬಿಎಸ್‌ಪಿ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿರುವುದು ಚಿಂತೆಗೀಡು ಮಾಡಿದೆ.
ಕಾಂಗ್ರೆಸ್ಸಿನ ಮಧು ಮಾದೇಗೌಡ ಪಕ್ಷದ ಸಾಂಪ್ರದಾಯಕ ಮತಗಳು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸು, ತಮ್ಮ ತಂದೆ ಮಾಜಿ ಸಂಸದ ಜಿ. ಮಾದೇಗೌಡರ ನಾಮಬಲವನ್ನು ನಂಬಿದ್ದಾರೆ. ಈ ಬಾರಿ 1.4 ಲಕ್ಷ ಮತದಾರರಿದ್ದಾರೆ.
ಕಾಂಗ್ರೆಸ್ ಗೆಲುವನ್ನೇ ಕಂಡಿಲ್ಲ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಜನಸಂಘ, ಬಿಜೆಪಿ, ಜನತಾ ಪರಿವಾರದ್ದೇ ಗೆಲುವು. ಕಾಂಗ್ರೆಸ್ ಜಯದ ಮುಖವನ್ನೇ ಕಂಡಿಲ್ಲ. ಈ ಹಿಂದೆ ಇದು ನೈಋತ್ಯ ಪದವೀಧರ ಕ್ಷೇತ್ರ. 1992ರಿಂದ ದಕ್ಷಿಣ ಪದವೀಧರ ಕ್ಷೇತ್ರವಾಗಿದೆ. ಕಾಲಕಾಲಕ್ಕೆ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು ಬದಲಾಗಿವೆ. ಈ ಕ್ಷೇತ್ರದಲ್ಲಿ 1968, 1974, 1980ರಲ್ಲಿ ಜನಸಂಘ, ಬಿಜೆಪಿಯ ಎ.ಕೆ.ಸುಬ್ಬಯ್ಯ ವಿಜಯ ಸಾಧಿಸಿದ್ದರು. ಜನತಾಪಕ್ಷದ ಎಂ.ಸತ್ಯನಾರಾಯಣರಾವ್ 1986ರಲ್ಲಿ ಜಯದ ನಗೆ ಬೀರಿದ್ದರು. ಬಿಜೆಪಿಯಿಂದ 1992ರಿಂದ ಬಿ.ಆರ್. ಕೃಷ್ಣಮೂರ್ತಿ ಗೆದ್ದರು. ಅವರ ನಿಧನದ ಬಳಿಕ 1997ರಲ್ಲಿ ಉಪ ಚುನಾವಣೆ ನಡೆದು ಬಿಜೆಪಿಯ ಗೋ. ಮಧುಸೂದನ್ ಜಯ ಸಾಧಿಸಿದರು. ಮಧುಸೂದನ್ ಅವರಿಗೆ ಮತ್ತೆ 1998ರಲ್ಲಿ ಗೆಲುವು. 2004ರಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, 2010ರಲ್ಲಿ ಬಿಜೆಪಿಯ ಮಧುಸೂದನ್, 2016ರಲ್ಲಿ ಜೆಡಿಎಸ್‌ನ ಶ್ರೀಕಂಠೇಗೌಡ ವಿಜಯದ ಮಾಲೆ ಧರಿಸಿದರು. ಎಲ್ಲ ಮತದಾರರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದೇನೆ. ಪದವೀಧರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಸದಾ ಪದವೀಧರರ ಧ್ವನಿಯಾಗಿರುತ್ತೇನೆ.
-ಮಧು ಜಿ.ಮಾದೇಗೌಡ, ಕಾಂಗ್ರೆಸ್ ಅಭ್ಯರ್ಥಿ 70 ಸಾವಿರ ಮತದಾರರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. ರಾಜ್ಯ ಸರಕಾರದಿಂದ ಪದವೀಧರರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಪ್ರಯತ್ನಿಸುತ್ತೇನೆ.
-ಮೈ.ವಿ. ರವಿಶಂಕರ್, ಬಿಜೆಪಿ ಅಭ್ಯರ್ಥಿ ಸರಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ನೌಕರರ ಬೇಡಿಕೆಗಳ ಈಡೇರಿಕೆಗೆ ಹೋರಾಡಿದ್ದೇನೆ. ಅವಕಾಶ ಕಲ್ಪಿಸಿ ಕೊಟ್ಟರೆ ಎಲ್ಲರನ್ನೂ ಒಟ್ಟುಗೂಡಿಸಿ ಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
-ಎಚ್.ಕೆ.ರಾಮು, ಜೆಡಿಎಸ್ ಅಭ್ಯರ್ಥಿ -ಕೂಡ್ಲಿ ಗುರುರಾಜ