Advertisement

ಒಂದೇ ದಿನ ರಿಲೀಸ್‌ ಆಗಲಿದೆಯೇ”ರಾಹುಕಾಲ ಗುಳಿಗ ಕಾಲ’; “ಇಂಗ್ಲೀಷ್‌’?

12:49 AM Jan 16, 2020 | Sriram |

ಕೋಸ್ಟಲ್‌ವುಡ್‌ನ‌ಲ್ಲಿ ಒಳ್ಳೊಳ್ಳೆ ಸಿನೆಮಾ ರಿಲೀಸ್‌ ಆಗುತ್ತಿದೆ ಎಂಬ ಸಂತೋಷದ ವಿಚಾರದ ಮಧ್ಯೆಯೇ, ಸೀಮಿತ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾತ್ರ ಇನ್ನೂ ನಿಂತಿಲ್ಲ ಎಂಬ ಅಪವಾದ ಇನ್ನೂ ದೂರವಾಗಿಲ್ಲ. ಒಂದೇ ದಿನದಂದು ಎರಡೆರಡು ಸಿನೆಮಾ ರಿಲೀಸ್‌ ಮಾಡುವ ಕಾಲ ಇನ್ನೂ ದೂರವಾಗಿಲ್ಲ. ಸದ್ಯ ಇಂತಹುದೇ ಬೆಳವಣಿಗೆಗೆ ಮತ್ತೆ ವೇದಿಕೆ ನಿರ್ಮಾಣವಾಗುತ್ತಿದೆ.

Advertisement

ಸದ್ಯದ ಮಾಹಿತಿ ಪ್ರಕಾರ “ರಾಹುಕಾಲ ಗುಳಿಗ ಕಾಲ’ ಹಾಗೂ “ಇಂಗ್ಲೀಷ್‌’ ಸಿನೆಮಾ ಎ. 3ರಂದು ತೆರೆಗೆ ಬರುವ ಸಿದ್ದತೆಯಲ್ಲಿದೆ. ಎರಡೂ ಚಿತ್ರತಂಡದವರು ಅದೇ ದಿನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖೀಸಿದ್ದಾರೆ. ಇನ್ನೂ ಅಂತಿಮ ತೀರ್ಮಾನದ ಪ್ರಕಟನೆ ಬರಬೇಕಿದೆ.

ಮೂಲಗಳ ಪ್ರಕಾರ, ಸದ್ಯ ಎರಡೂ ಚಿತ್ರತಂಡದ ನಿರ್ಮಾಪಕರು- ನಿರ್ದೇಶಕರು ಮುಂದಿನ ಕೆಲವೇ ದಿನದಲ್ಲಿ ಜತೆಯಾಗಿ ಕುಳಿತುಕೊಂಡು ಮಾತುಕತೆ ನಡೆಸಿ ಈ ಕುರಿತಂತೆ ಸೌಹಾರ್ದ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಮಾತುಕತೆ ಆದ ಬಳಿಕವಷ್ಟೇ ಎರಡೂ ಸಿನೆಮಾ ರಿಲೀಸ್‌ನ ಸ್ಪಷ್ಟ ಚಿತ್ರಣ ಲಭಿಸಲಿದೆ.

ಈ ಹಿಂದೆ “ಅಪ್ಪೆ ಟೀಚರ್‌’ ಹಾಗೂ “ತೊಟ್ಟಿಲು’ ಸಿನೆಮಾ ಒಂದೇ ದಿನ ರಿಲೀಸ್‌ ಆಗಿತ್ತು. ಬಳಿಕ “ಏರಾ ಉಲ್ಲೆರ್‌ಗೆ’ ಹಾಗೂ “ಮೈ ನೇಮ್‌ ಈಸ್‌ ಅಣ್ಣಪ್ಪೆ’

ಸಿನೆಮಾ ಕೂಡ ಒಂದೇ ದಿನ ರಿಲೀಸ್‌ ಆಗಿತ್ತು. ಪರಿಣಾಮವಾಗಿ ಕೋಸ್ಟಲ್‌ವುಡ್‌ನ‌ಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಇಂತಹುದೇ ಸಮಸ್ಯೆ ಮತ್ತೆ ಸೃಷ್ಟಿಯಾಗಬಾರದು ಎಂಬ ನಿಟ್ಟಿನಲ್ಲಿ ಇದೀಗ ಎರಡೂ ಚಿತ್ರತಂಡದವರು ಒಮ್ಮತದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

“ರಾಹುಕಾಲ
ಗುಳಿಗ ಕಾಲ’
ಜಲನಿಧಿ ಫಿಲಂಸ್‌ನವರ “ರಾಹುಕಾಲ ಗುಳಿಗಕಾಲ’ ಸಿನೆಮಾ ಬಿಡುಗಡೆಯ ಸಿದ್ದತೆಯಲ್ಲಿದೆ. ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ. ಅರ್ಜುನ್‌ ಕಾಪಿಕಾಡ್‌, ನವ್ಯತಾ ರೈ, ಅರವಿಂದ ಬೋಳಾರ್‌, ವಿಸ್ಮಯ ವಿನಾಯಕ್‌, ಚಂದ್ರಹಾಸ್‌ ಉಳ್ಳಾಲ್‌, ಸಂತೋಷ್‌ ಶೆಟ್ಟಿ, ಉಮೇಶ್‌ ಮಿಜಾರ್‌, ವಿಸ್ಮಯ ವಿನಾಯಕ್‌, ಮೈಮ್‌ ರಾಮ್‌ದಾಸ್‌ ಚಿತ್ರದಲ್ಲಿದ್ದಾರೆ.

ಮಾಸ್‌ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್‌.ಛಾಯಾಗ್ರಹಣ, ಸುರೇಶ್‌ ಸಂಕಲನದಲ್ಲಿ ತೊಡಗಿಸಿದ್ದಾರೆ. “ಪತ್ತೀಸ್‌ ಗ್ಯಾಂಗ್‌’ ಸಿನೆಮಾ ಮಾಡಿದ ತಂಡ ರಾಹುಕಾಲದಲ್ಲಿ ತೊಡಗಿಸಿಕೊಂಡಿದೆ. ಪತ್ತೀಸ್‌ ಗ್ಯಾಂಗ್‌ ಶೂಟಿಂಗ್‌ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್‌ ಕೂಡ ಮಾಡಲಾಗಿದೆ. ಈ ಸಿನೆಮಾದಲ್ಲಿ, ಶೂಟಿಂಗ್‌ ವೇಳೆಯಲ್ಲಿ ಒರಿಜಿನಲ್‌ ಗನ್‌ ಹಿಡಿದುಕೊಳ್ಳಲಾಗಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಇದೊಂದು ಮೊದಲ ಪ್ರಯತ್ನ.

“ಇಂಗ್ಲೀಷ್‌’
ಅಕೆ¾ ಮೂವೀಸ್‌ ಇಂಟರ್‌ನ್ಯಾಷನಲ್‌ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್‌- 22 ಕನ್ನಡ ಚಿತ್ರದ ನಿರ್ಮಾಪಕ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಿಸುತ್ತಿರುವ “ಇಂಗ್ಲೀಷ್‌’ ತುಳು ಸಿನೆಮಾ ಬಿಡುಗಡೆಯ ಸಿದ್ದತೆಯಲ್ಲಿದೆ.

ಎಕ್ಕಸಕ, ಪಿಲಿಬೈಲ್‌ ಯಮುನಕ್ಕ, ಅಮ್ಮೆರ್‌ ಪೊಲೀಸಾ ಮುಂತಾದ ಯಶಸ್ವಿ ಚಿತ್ರವನ್ನು ನಿರ್ದೇಶಿಸಿರುವ ಕೆ. ಸೂರಜ್‌ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಖ್ಯಾತ ನಟ ಅನಂತನಾಗ್‌ ಪ್ರಥಮ ಬಾರಿಗೆ ತುಳು ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಿನೆಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ, ಮನು ಶೇರಿಗಾರ್‌ ಸಂಕಲನ, ಮಣಿಕಾಂತ್‌ ಕದ್ರಿ ಸಂಗೀತ, ಸಾಹಿತ್ಯ ಶಶಿರಾಜ್‌ ಕಾವೂರು, ಅರ್ಜುನ್‌ ಲೂಯಿಸ್‌, ಡಿಸೈನ್‌ ದೇವಿ ರೈ, ಸಿನೆಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಕೆ. ಸೂರಜ್‌ ಶೆಟ್ಟಿ. ತಾರಾಗಣದಲ್ಲಿ ಪೃಥ್ವಿ ಅಂಬರ್‌, ನವ್ಯ ಪೂಜಾರಿ, ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್‌, ದೀಪಕ್‌ ರೈ ಪಾಣಾಜೆ, ರವಿರಾಮ ಕುಂಜ ಮುಂತಾದವರಿದ್ದಾರೆ.

ಮಾರ್ಚ್‌- 22 ಕನ್ನಡ ಚಿತ್ರದ ನಿರ್ಮಾಪಕ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಿಸುತ್ತಿರುವ “ಇಂಗ್ಲೀಷ್‌’ ತುಳು ಸಿನೆಮಾ ಬಿಡುಗಡೆಯ ಸಿದ್ದತೆಯಲ್ಲಿದೆ.

ಎಕ್ಕಸಕ, ಪಿಲಿಬೈಲ್‌ ಯಮುನಕ್ಕ, ಅಮ್ಮೆರ್‌ ಪೊಲೀಸಾ ಮುಂತಾದ ಯಶಸ್ವಿ ಚಿತ್ರವನ್ನು ನಿರ್ದೇಶಿಸಿರುವ ಕೆ. ಸೂರಜ್‌ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಖ್ಯಾತ ನಟ ಅನಂತನಾಗ್‌ ಪ್ರಥಮ ಬಾರಿಗೆ ತುಳು ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಿನೆಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ, ಮನು ಶೇರಿಗಾರ್‌ ಸಂಕಲನ, ಮಣಿಕಾಂತ್‌ ಕದ್ರಿ ಸಂಗೀತ, ಸಾಹಿತ್ಯ ಶಶಿರಾಜ್‌ ಕಾವೂರು, ಅರ್ಜುನ್‌ ಲೂಯಿಸ್‌, ಡಿಸೈನ್‌ ದೇವಿ ರೈ, ಸಿನೆಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಕೆ. ಸೂರಜ್‌ ಶೆಟ್ಟಿ. ತಾರಾಗಣದಲ್ಲಿ ಪೃಥ್ವಿ ಅಂಬರ್‌, ನವ್ಯ ಪೂಜಾರಿ, ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್‌, ದೀಪಕ್‌ ರೈ ಪಾಣಾಜೆ, ರವಿರಾಮ ಕುಂಜ ಮುಂತಾದವರಿದ್ದಾರೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next