ಸಿಲಿಗುರಿ: “ಪೌರತ್ವ ಕಾಯ್ದೆಯನ್ನು ಕೊರೊನಾ ಕಾರಣದಿಂದಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆಯಷ್ಟೆ. ಅದರ ಆತಂಕ ದೂರವಾದ ತಕ್ಷಣ ರ ಅದನ್ನು ಖಂಡಿತವಾಗಿ ಜಾರಿಗೆ ತರಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಟಿಎಂಸಿ ಪಕ್ಷ ಜನರನ್ನು ನಂಬಿಸಲು ಯತ್ನಿಸುತ್ತಿದೆ. ಆದರೆ, ನಾವು ಕಾಯ್ದೆಯನ್ನು ಖಂಡಿತ ಜಾರಿಗೊಳಿಸುತ್ತೇವೆ’ ಎಂದರು.
ಫ್ಲೋಟಿಂಗ್ ಔಟ್‌ಪೋಸ್ಟ್‌ಗೆ ಚಾಲನೆ: ನಾರ್ತ್ 24 ಪರಗಣ ಜಿಲ್ಲೆಯ ಸುಂದರ್‌ಬನ್ಸ್ ಪ್ರಾಂತ್ಯದಲ್ಲಿ ಹಿಂಗಲ್‌ಗಂಜ್‌ನಲ್ಲಿ ಅಮಿತ್ ಶಾ ಅವರು, ಬಿಎಸ್‌ಎಫ್ನ ತೇಲುವ ಗಡಿ ಔಟ್‌ಪೋಸ್ಟ್ ಸೇವೆಗೆ ಚಾಲನೆ ನೀಡಿದರು. ಬೋಟ್ ಆ್ಯಂಬುಲೆನ್ಸ್ ಸೇವೆಯನ್ನೂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಳನುಸುಳುವಿಕೆಯನ್ನು ಹಾಗೂ ಕಳ್ಳ ಸಾಗಣೆಯನ್ನು ತಡೆಗಟ್ಟಲು ರಾಜ್ಯ ಸರ್ಕಾ ರದ ನೆರವೂ ಅತ್ಯಗತ್ಯ ಎಂದರು.
7 ರಾಜ್ಯಗಳಿಗೆ ಭೇಟಿ: ಅಮಿತ್ ಶಾ ಅವರು ಮುಂದಿನ ಮೂರು ವಾರಗಳಲ್ಲಿ ಅಖಂಡ ದೇಶ ಪರ್ಯಟನೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಅವರು, ಅಸ್ಸಾಂ, ತೆಲಂಗಾಣ, ಕೇರಳ, ಉತ್ತರಾಖಾಂಡ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್‌ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಪೌರತ್ವ ಕಾಯ್ದೆ 2024ರ ಚುನಾವಣೆಗೆ ಬಿಜೆಪಿಯ ಅಸ್ತ್ರವಾಗಿದೆ. ಪಶ್ಚಿಮ ಬಂಗಾಳ ದಲ್ಲಿ ಕಾನೂನು ಉಲ್ಲಂ ಸು ವವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುತ್ತದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ