Advertisement

INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ

08:45 PM May 15, 2024 | Team Udayavani |

ಕೋಲ್ಕತಾ: ಇಂಡಿಯಾ ಒಕ್ಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಲು ತೃಣ ಮೂಲ ಕಾಂಗ್ರೆಸ್‌(ಟಿಎಂಸಿ) ಪಕ್ಷವು ಎಲ್ಲ ರೀತಿಯ ಬಾಹ್ಯ ಬೆಂಬಲ ನೀಡಲು ಸಿದ್ಧವಿದೆ. ಆದರೆ, ಬಂಗಾಳದಲ್ಲಿನ ಕಾಂಗ್ರೆಸ್‌ ಘಟಕ ಮತ್ತು ಎಡಪಕ್ಷಗಳು ಒಕ್ಕೂಟದ ಭಾಗವಾಗಿರುವಂತಿಲ್ಲ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ದೇಶದ ಶೇ.70ರಷ್ಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿರುವ ಬೆನ್ನಲ್ಲೇ ಕೇಂದ್ರದಲ್ಲಿ ಸರ್ಕಾರ ರಚನೆ ಕುರಿತಂತೆ ಮಮತಾ ಮಾತನಾಡಿದ್ದು, ಇಂಡಿಯಾ ಒಕ್ಕೂಟ ಸರ್ಕಾರದ ರಚಿಸಲು ಅಗತ್ಯವಾದ ಎಲ್ಲ ರೀತಿಯ ಬಾಹ್ಯ ಬೆಂಬಲವನ್ನೂ ನಾವು ನೀಡಲಿದ್ದೇವೆ. ಪಶ್ಚಿಮ ಬಂಗಾಳದ ನಮ್ಮ ತಾಯಂದಿರು, ಸಹೋದರಿಯರು, 100 ದಿನಗಳ ಉದ್ಯೋಗ ಯೋಜನೆ ಅನ್ವಯ ದುಡಿಯುವ ಕಾರ್ಮಿಕರಿಗೆ ತೊಂದರೆ ಆಗದಿರಲಿ ಎಂಬ ಆಶಯದೊಂದಿಗೆ ಒಕ್ಕೂಟಕ್ಕೆ ಬೆಂಬಲ ನೀಡಲು ಯೋಜಿಸಿದ್ದೇವೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಆದರೆ, ನಾವು ಬೆಂಬಲ ನೀಡುವುದು ಬಿಜೆಪಿ ಜತೆಗೆ ಕೈ ಜೋಡಿಸಿರುವ ಬಂಗಾಳದ ಕಾಂಗ್ರೆಸ್‌ ಮತ್ತು ಸಿಪಿಎಂನಿಂದ ಹೊರಗಿರುವ ಇಂಡಿಯಾ ಒಕ್ಕೂಟಕ್ಕೆ ಮಾತ್ರ ಎಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next