Advertisement

ವಂದೇ ಭಾರತ್‌ ರೈಲು ಹಳಿ ಇಕ್ಕೆಲೆಯಲ್ಲಿ ಬೇಲಿ; ಪ್ರಾಣಿಗಳು ಬರದಂತೆ ತಡೆಯಲು ಕ್ರಮ

08:12 PM Oct 08, 2022 | Team Udayavani |

ನವದೆಹಲಿ: ಮುಂಬೈನಿಂದ ಗುಜರಾತ್‌ನ ಗಾಂಧಿನಗರ ವರೆಗೆ ವಂದೇ ಭಾರತ್‌ ರೈಲು ಸಂಚರಿಸುವ ಹಳಿಯ ಎರಡೂ ಬದಿಗಳಲ್ಲಿ ಬೇಲಿ ಹಾಕಲು ಪಶ್ಚಿಮ ರೈಲ್ವೇ ತೀರ್ಮಾನಿಸಿದೆ.

Advertisement

ಗುರುವಾರ (ಅ.6), ಶುಕ್ರವಾರ (ಅ.7) ಎಮ್ಮೆಗಳಿಗೆ ಹಾಗೂ ಹಸುವಿಗೆ ವಂದೇಭಾರತ್‌ ಸೆಮಿ ಹೈ ಸ್ಪೀಡ್‌ ರೈಲು ಡಿಕ್ಕಿ ಹೊಡೆದ ಬಳಿಕ ಈ ಚಿಂತನೆ ನಡೆಸಲಾಗಿದೆ.

ಶೀಘ್ರವೇ ಬೇಲಿ ಹಾಕುವ ಕಾಮಗಾರಿ ಆರಂಭವಾಗಲಿದ್ದು, 2024ರೊಳಗೆ ಸಂಪೂರ್ಣವಾಗಲಿದೆ ಎಂದು ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಹಳ್ಳಿ ಜನತೆಗೆ ಅರಿವು ಮೂಡಿಸಲು ಸ್ಥಳೀಯ ರೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಗ್ರಾಮಗಳ ಅಧ್ಯಕ್ಷರೊಂದಿಗೂ ಚರ್ಚಿಸಲು ಹೇಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಕ್ರವೇ ಜಾಮ್‌:
ಇದೇ ವೇಳೆ, ನವದೆಹಲಿಯಿಂದ ವಾರಾಣಸಿ ಹೊರಟಿದ್ದ ವಂದೇ ಭಾರತ್‌ ರೈಲಿನ ಚಕ್ರವೇ ಜಾಮ್‌ ಆದ ಪ್ರಕರಣ ಬೆಳಕಿಗೆ ಬಂದಿದೆ. ಶನಿವಾರ ರೈಲು ಉತ್ತರ ಪ್ರದೇಶದ ದನೌರ್‌ ಮತ್ತು ವಾಯರ್‌ ರೈಲ್ವೆ ನಿಲ್ದಾಣದ ಮಧ್ಯದಲ್ಲಿದ್ದ ಸಮಯದಲ್ಲಿ ಒಂದು ಬೋಗಿಯ ಚಕ್ರಗಳೇ ಜಾಮ್‌ ಆಗಿವೆ. ಪರಿಣತರ ಸಲಹೆಯಂತೆ ರೈಲನ್ನು 20ಕಿ.ಮೀ. ದೂರದ ಖುರ್ಜಾ ರೈಲು ನಿಲ್ದಾಣದವರೆಗೆ ಸಂಚರಿಸುವಂತೆ ಮಾಡಿ, ನಂತರ ಪ್ರಯಾಣಿಕರನ್ನು ಶತಾಬ್ದಿ ರೈಲಿನಲ್ಲಿ ವಾರಾಣಸಿಗೆ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next