Advertisement
ಜಗದೀಶ್ ಶೆಟ್ಟರ್ 40 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ ವ್ಯಕ್ತಿ. ಅವರೊಬ್ಬ ಸಿದ್ದಾಂತವಾದಿ ಅಂದುಕೊಂಡಿದ್ದೆ, ಅವರ ತಂದೆ ಶಿವಪ್ಪ ಶೆಟ್ಟರ್ ಮೇಯರ್ ಆಗಿದ್ದರು. ಜನಸಂಘದಿಂದ ಬಂದವರಾಗಿದ್ದರು. ಈ ಪಕ್ಷದ ವಿಚಾರ ಸಿದ್ದಾಂತ ಅರ್ಥ ಮಾಡಿಕೊಂಡವರು. ಅವರ ತಂದೆ ರಾಜಕಾರಣಕ್ಕೆ ಬಂದಾಗ ನಾವು ಅಧಿಕಾರಕ್ಕೆ ಬರ್ತೇವೆ ಎಂಬ ಕನಸು ಕಂಡಿರಲಿಲ್ಲ. ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ ಅಂತಹ ಕಾಲ.ಅಧಿಕಾರ ಬಂದಾಗ ಬೇರೆ ಬೇರೆ ಪಕ್ಷದಿಂದ ಬಂದರು, ಕೆಲವರಿಗೆ ಅಧಿಕಾರ ಸಿಗಲಿಲ್ಲ ಬಿಟ್ಟು ಹೋದರು. ಅಧಿಕಾರಕ್ಕೆ ಬಂದವರು ಅಧಿಕಾರ ಸಿಗಲಿಲ್ಲ ಎಂದು ಹೋದರು ಅಂತಹವರ ಬಗ್ಗೆ ಮಾತನಾಡಲ್ಲ. ಆದರೆ ಶೆಟ್ಟರ್ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ. ಹುಬ್ಬಳ್ಳಿಯಲ್ಲಿ ತಿರಂಗ ಧ್ವಜದ ಹೋರಾಟ ಮಾಡಿದ್ದರು. ರಾಷ್ಟ್ರಧ್ವಜ ಹಾರಿಸುವವರೆಗೂ ಬಿಡಲಿಲ್ಲ ಹೋರಾಟ ಮಾಡಿದವರು ಎಂದು ಹೇಳಿದ್ದಾರೆ.
Related Articles
Advertisement
ಧರ್ಮೇಂದ್ರ ಪ್ರಧಾನ್ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ನನಗೆ ಪೋನ್ ಮಾಡಿದ್ದರು. ಅವರು ಪೋನ್ ಮಾಡಿದ 10ನಿಮಿಷಕ್ಕೆ ನಾನು ಪತ್ರ ಬರೆದೆ .ನತರ ನಿವೃತ್ತಿ ತೆಗೆದುಕೊಳ್ಳಬೇಕು ಅಂದಾಗ ಶೆಟ್ಟರ್ ಅವರ ಜೊತೆ ಮಾತನಾಡಿದ್ದೆ. ಟಿಕೆಟ್ ಕೊಡಬೇಕು ಅಂತ ಲಕ್ಷ ಲಕ್ಷ ಕಾರ್ಯಕರ್ತರು ಇದ್ದಾರೆ. ನಿನಗೆ ಏಕೆ ಟಿಕೆಟ್ ಕೊಡಬೇಕು. ಯಾರಿಗೆ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಹಿರಿಯರು ನಮಗಿಂತ ಬುದ್ದಿವಂತರು ಇದ್ದಾರೆ ಎಂದು ಹೇಳಿದ್ದಾರೆ.
ಲಕ್ಷ್ಮಣ ಸವದಿ ಸಂಘ ಪರಿವಾರದಿಂದ ಬಂದವರಲ್ಲ. ಹೀಗಾಗಿ ಅವರ ಬಗ್ಗೆ ನಾನು ಅಷ್ಟು ಮಾತನಾಡುವುದಿಲ್ಲ.ಶೆಟ್ಟರ್ ಸಂಘಪರಿವಾರದಿಂದ ಬಂದವರು.ಹೀಗಾಗಿ ಅವರು ಪಕ್ಷ ಬಿಟ್ಟಿದ್ದು ನೋವಾಯಿತು. ಅವರು ವಾಪಸ್ ಬಂದರೆ ಬಹಳ ಸಂತೋಷ, ಇಲ್ಲದಿದ್ದರೆ ನೋವಾಗುತ್ತದೆ.
ಸೀಟ್ ಕಳೆದುಕೊಂಡರೆ ನಮಗೇನು ಬೇಜಾರಿಲ್ಲ. ಈ ದೇಶ ಉಳಿಯಬೇಕು ಅಂತ ಅನೇಕರು ಬೆಂಬಲ ಕೊಡುತ್ತಿದ್ದಾರೆ. ಚುನಾವಣೆ ಹಿನ್ನಡೆ ಬಹಳ ದೊಡ್ಡದಲ್ಲ. ಎರಡು ಸೀಟ್ ಇದ್ದು ಅಧಿಕಾರಕ್ಕೆ ಬಂದ ಪಕ್ಷ ನಮ್ಮದು. ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿತು.ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ
ನಾನು ಚುನಾವಣ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ ಎಂದು ಈಶ್ವರಪ್ಪ ಹೇಳಿದ್ದಾರೆ.