Advertisement

ಏನೇ ಬೆಳವಣಿಗೆಯಾದರೂ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಂಡಿತಾ: ನಾರಾಯಣ್ ರಾಣೆ

11:24 AM Nov 14, 2019 | Mithun PG |

ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯ ಕುರಿತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಮಂಗಳವಾರ ರಾತ್ರಿಯಿಂದ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಗಿದೆ. ಆದರೇ ಬಿಜೆಪಿ ನಾಯಕ ನಾರಾಯಣ್ ರಾಣೆ “ಏನೇ ಅದರೂ ಬಿಜೆಪಿ ಅಧಿಕಾರಕ್ಕೇರವುದು ಖಂಡಿತಾ” ಎಂದು ಹೇಳಿರುವುದು ರಾಜಕೀಯ ವಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

Advertisement

ರಾಜ್ಯಸಭಾ ಸಂಸದರೂ ಆಗಿರುವ ರಾಣೆ, “ಹೊಸದಾಗಿ ಬಿಜೆಪಿ ಸರ್ಕಾರ ರಚಿಸಲು ನಾನು ಏನು ಬೇಕಾದರೂ ಮಾಡುತ್ತೇನೆ, ಆದರೆ ನಾನು ಹೇಗೆ ಎಂದು ಚರ್ಚಿಸುವುದಿಲ್ಲ” ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿ 145 ಶಾಸಕರ ಪಟ್ಟಿಯನ್ನು ತೋರಿಸಿದೆ, ಆದರೇ  ಖಾಲಿ ಕೈಗಳಿಂದ ರಾಜ್ಯಪಾಲರ ಬಳಿ ತೆರಳಿರಲಿಲ್ಲ. ರಾಜ್ಯದ ಜನರ ಕಲ್ಯಾಣದ ಬಗ್ಗೆ ಕಾಳಜಿ ಇದೆ.  ಆದರೇ ಸರ್ಕಾರ ರಚಿಸಲು ಶಿವಸೇನೆ ಸಹಕರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಸೇನೆ  ಅಧಿಕಾರ ಹಿಡಿಯಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು  ಕಾಂಗ್ರೆಸ್ ಮತ್ತು ಎನ್ ಸಿಪಿ  ಶಿವಸೇನವನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದೆ. ಆದ ಕಾರಣವೇ ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲಎಂದರು.

Advertisement

Udayavani is now on Telegram. Click here to join our channel and stay updated with the latest news.

Next