ಕಾರವಾರ: ಸರಿಯಾದ ನಿರ್ದಿಷ್ಟ ರಾಜಕೀಯ ಸಮಯಕ್ಕೆ ಕಾಯುತ್ತಿದ್ದೆ. ಈಗ ಆ ಸಮಯ ಬಂದಿದೆ ಎಂದು ಜೆಡಿಎಸ್ ನಾಯಕ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ಮಾಡಿದರು.
ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಶಕ್ತಿ ತುಂಬುವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಒಳ್ಳೆಯ ಕೆಲಸ ಮಾಡಿದ್ದಾರೆ. ನನಗೆ ಅವರ ನಿರ್ಧಾರ ಖುಷಿ ತಂದಿದೆ. ಕುಮಾರಸ್ವಾಮಿ ಹೋರಾಟದ ಕಾರಣ ಡಿ.ಕೆ. ಶಿವಕುಮಾರ್ ಐದು ಗ್ಯಾರಂಟಿ ಹೇಗೆ ಜನರಿಗೆ ತಲುಪಿವೆ ಎಂದು ವೀಕ್ಷಿಸಲು ಕಮಿಟಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣ ಕುಮಾರಸ್ವಾಮಿ ಟೀಕೆ ಕಾರಣ ಎಂದರು.
ಕೆಲ ಕಾರಣದಿಂದ ಜೆಡಿಎಸ್ ನಿಂದ ದೂರ ಇದ್ದೆ. ಮೋದಿ ಅಭಿಮಾನಿಯಾಗಿದ್ದೆ. ದೇಶ ರಕ್ಷಣೆಗೆ ಮೋದಿ ಬೇಕು. ಪ್ಯಾಲೆಸ್ಟೈನ್ ಸಮಸ್ಯೆ ನೋಡಿದರೆ, ಮೋದಿ ಇಲ್ಲಿ ಮುಂದುವರಿಯಬೇಕು. ಕಳೆದ ಸಲ ಲೋಕಸಭೆಗೆ ನಿಂತಿದ್ದೆ. ಇರುವ ಒಂದೇ ತಿಂಗಳಲ್ಲಿ ಐದು ಲಕ್ಷ ಓಟು ಪಡೆದಿದ್ದೆ. ಈ ಸಲ ಆರು ತಿಂಗಳ ಸಮಯವಿದೆ. ನಾನು ಟಿಕೆಟ್ ಆಕಾಂಕ್ಷಿ. ಜೆಡಿಎಸ್ ಗೆ ಟಿಕೆಟ್ ಕೊಡುವ ಅವಕಾಶ ಬಂದರೆ ನಾನು ಅಭ್ಯರ್ಥಿ. ಆದರೆ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಇಲ್ಲಿ ಅಭ್ಯರ್ಥಿಯಾಗಲಿ. ಬಿಜೆಪಿಯಿಂದ ಅವರು ನಿಲ್ಲದೇ ಹೋದರೆ, ನಾನು ಅಭ್ಯರ್ಥಿ ಎಂದರು.
ಅನಂತ ಕುಮಾರ್ ಹೆಗಡೆ ಆರೋಗ್ಯದ ಬಗ್ಗೆ ಊಹಾಪೋಹಗಳಿವೆ. ಆದರೆ ಅವರ ಜೊತೆ ಒಳ್ಳೆಯ ಬಾಂಧವ್ಯವಿದೆ. ಅವರು ಅಭ್ಯರ್ಥಿ ಆಗಲಿ. ಅವರು ನಿಲ್ಲದೆ ಹೋದರೆ ನಾನು ಅಭ್ಯರ್ಥಿ ಆಗುವೆ. ಮೋದಿ, ದೇವೇಗೌಡರ, ಅನಂತ ಕುಮಾರ್ ಅಭಿಮಾನಿಗಳು ಜೆಡಿಎಸ್ ಬೆಂಬಲಿಸಲಿದ್ದಾರೆ. ಈ ಸಲ ಲೋಕಸಭೆಯಲ್ಲಿ ಕೆನರಾ ಕ್ಷೇತ್ರದಿಂದ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕಿ ವಿರುದ್ಧ ಭ್ರಷ್ಟಾಚಾರದ ಆರೋಪವಿತ್ತು. ಹಾಗಾಗಿ ಸ್ಥಳೀಯವಾಗಿ ಸತೀಶ್ ಸೈಲ್, ಹಳಿಯಾಳದಲ್ಲಿ ದೇಶಪಾಂಡೆ ಅವರಿಗೆ ಬೆಂಬಲ ನೀಡಿದ್ದೆ. ಆ ಸಂದರ್ಭದಲ್ಲಿ ನಾನು ಸ್ವತಂತ್ರವಾಗಿದ್ದೆ. ಈಗ ರಾಜಕೀಯ ನಿಲುವು ಬದಲಾಗಿದೆ. ಕುಮಾರಸ್ವಾಮಿ ಎಲ್ಲಿದ್ದಾರೋ ಅಲ್ಲಿ ನಾನು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಜೆಡಿಎಸ್ ನಿರ್ಧಾರ ದಿಂದ ನಾನು ಜೆಡಿಎಸ್ ನಲ್ಲಿ ಉಳಿದಿದ್ದೇನೆ. ಈಗ ಜೆಡಿಎಸ್, ಬಿಜೆಪಿಯವರು ಈಗ ಒಂದೇ ಮನೆಯ ಸದಸ್ಯರು. ಅನಂತ ಕುಮಾರ್ ಸೀನಿಯರ್. ಅವರು ಈ ಸಲ ಗೆದ್ದರೆ, ಮಂತ್ರಿಯಾಗುತ್ತಾರೆ. ಹಾಗಾಗಿ ಅವರನ್ನು ಬೆಂಬಲ ನೀಡುವೆ. ಬಿಜೆಪಿ ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಅಸ್ನೋಟಿಕರ್ ಹೇಳಿದರು.
ಮೋದಿಗಾಗಿ ನಾನು ಸ್ಥಳೀಯವಾಗಿ ದ್ವೇಷ ಮಾಡಲ್ಲ. ಕಳೆದ ಸಲ ಅನಂತ ಕುಮಾರ್ ಮತ್ತು ನನ್ನ ವಿರುದ್ಧ ಚುನಾವಣೆ ಅಲ್ಲ. ಅದು ಮೋದಿ ಹಾಗೂ ನನ್ನ ನಡುವಿನ ಚುನಾವಣೆ ಅದಾಗಿತ್ತು. ಐದು ಲಕ್ಷ ಮತ ತೆಗೆದುಕೊಂಡಿದ್ದೆ ಎಂದರು.
ರೂಪಾಲಿ ನಾಯ್ಕ ಭ್ರಷ್ಟ ಶಾಸಕಿ. ಆಕಿಯಿಂದ ಬಿಜೆಪಿಗೆ ಫೋರ್ಟಿ ಪರಸೆಂಟ್ ಎಂಬ ಹೆಸರು ಬಂತು. ಕಾರವಾರ ರಾಜಕೀಯ ಇತಿಹಾಸದಲ್ಲಿ ಎಂದು ಖರ್ಚು ಮಾಡದ ಹಣ. 30 ಕೋಟಿ ಹಣ ಎಲೆಕ್ಷನ್ ನಲ್ಲಿ ಖರ್ಚಾಗಿದೆ. ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.