Advertisement

IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?

10:16 AM May 20, 2024 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಧೋನಿ ಐಪಿಎಲ್‌ನಲ್ಲಿ ಮತ್ತಷ್ಟು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ.

Advertisement

ಶನಿವಾರ ಆರ್‌ಸಿಬಿ ವಿರುದ್ಧ ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು, “ಧೋನಿ ಅವರಿಗೆ ಇದು ಕೊನೆ ಪಂದ್ಯ ಎಂದು ನನಗನ್ನಿಸುವುದಿಲ್ಲ. ಔಟಾದ ಬಳಿಕ ಧೋನಿ ನಿರಾಶೆಗೊಂಡಂತೆ ಕಂಡರು. ಇದು ಸಾಧಾರಣವಾಗಿ ಧೋನಿ ಅವರ ವರ್ತನೆಯಲ್ಲ. ತಂಡವನ್ನು ಪ್ಲೇಆಫ್ಗೆ ಕೊಂಡೊಯ್ಯಲಾಗದೇ ಇದ್ದದ್ದು ಅವರಿಗೆ ನೋವು ಉಂಟು ಮಾಡಿದೆ. ಮುಂದಿನ ವರ್ಷ ಅವರು ಕಮ್‌ಬ್ಯಾಕ್‌ ಮಾಡಲಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್‌ ಆಗಿಯಾದರೂ ಧೋನಿ ಆಡಬಹುದು ಎಂದು ಹೇಳಿದ್ದಾರೆ.

ಆರ್ ಸಿಬಿ ವಿರುದ್ಧದ ಶನಿವಾರದ ಪಂದ್ಯದಲ್ಲಿ ಎಂ.ಎಸ್ ಧೋನಿ ಅವರು 13 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಧೋನಿ ಅವರು ಮುಂದಿನ ಎಸೆತದಲ್ಲಿ ಔಟಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next