ಹಿರೇಕೆರೂರ: ಕವಿ ಸರ್ವಜ್ಞನ ನೆಲೆಬೀಡಾದ ಹಿರೇಕೆರೂರ ವಿಧಾನಸಭೆ ಕ್ಷೇತ್ರದಲ್ಲಿ ಮತದಾನೋತ್ತರ ಲೆಕ್ಕಾಚಾರ ಜೋರಾಗಿ ನಡೆದಿದೆ. ಪ್ರಬಲ ಪೈಪೋಟಿ ಎದುರಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕ್ಷೇತ್ರದಲ್ಲಿ ತಮ್ಮದೇ ಮುನ್ನಡೆ ಎಂದು ಬೀಗುತ್ತಿವೆ.
ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಸಿ. ಪಾಟೀಲ ಶಾಸಕರಾಗಿದ್ದಾರೆ. ಶಾಸಕರ ಪ್ರಭಾವ, ಬಿರುಸಿನ ಪ್ರಚಾರದಿಂದ ಸಹಜವಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿಗರದ್ದಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಸಹ ಸಾಕಷ್ಟು ಪ್ರಭಾವಿ ಗಳಾಗಿದ್ದು ಈ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಯನ್ನು ಕಣಕ್ಕಿಳಿಸಿ ರುವು ದರಿಂದ ಕಾಂಗ್ರೆಸ್‌ಗೆ ವರ ವಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.
ವದಂತಿ ವಾಸ್ತವ ಅಲ್ಲ: ಇವೆಲ್ಲದರ ನಡುವೆ ಶಾಸಕ ಬಿ.ಸಿ. ಪಾಟೀಲ ಅವರು ಬಿಜೆಪಿ ಸೇರುತ್ತಾರೆಂಬ ವದಂತಿ ಈ ಹಿಂದೆ ವ್ಯಾಪಕವಾಗಿ ಹರಡಿತ್ತು. ‘ಬಿಜೆಪಿ ಸೇರ್ಪಡೆ ವಿಚಾರ ಕೇವಲ ವದಂತಿ. ಅದರಲ್ಲಿ ವಾಸ್ತವ ಇಲ್ಲ’ ಎಂದು ಬಿ.ಸಿ. ಪಾಟೀಲರು ಸಾಕಷ್ಟು ಬಾರಿ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡುತ್ತ ಬಂದಿದ್ದಾರೆ. ಆದರೂ ಈ ವಿಚಾರ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಕಲ್ಪಿಸಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ ಆಗಿಯೇ ಆಗುತ್ತದೆ ಎಂಬ ವಿಶ್ವಾಸ ಬಿಜೆಪಿ ಕಾರ್ಯ ಕರ್ತರದ್ದಾಗಿದೆ.
Advertisement
ಮೋದಿ ಅಲೆಯಲ್ಲಿ ಬಿಜೆಪಿ: ಕ್ಷೇತ್ರದಲ್ಲಿ ಮೋದಿ ಅಲೆ ವ್ಯಾಪಕವಾಗಿತ್ತು. ಯುವ ಸಮೂಹ ಬಿಜೆಪಿಯತ್ತ ತೇಲಿ ಬಂದಿದೆ. ನಗರ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಸರ್ಜಿಕಲ್ ಸ್ಟ್ರೈಕ್ ನ ಪ್ರಭಾವ ಬೀರಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಬಿಜೆಪಿಯತ್ತ ಒಲವು ತೋರಿದ್ದಾರೆ. ಮಾಜಿ ಶಾಸಕ ಯು.ಬಿ. ಬಣಕಾರ ಪ್ರಭಾವ, ಪ್ರಚಾರವೂ ಸಾಕಷ್ಟು ಕೆಲಸ ಮಾಡಿದೆ.
Related Articles
Advertisement
ಒಟ್ಟಾರೆ ಮತದಾನದ ನಂತರ ಕ್ಷೇತ್ರದಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಲಿದೆ ಎಂಬ ಕುತೂಹಲದ ಚರ್ಚೆ, ವಾದ ಎಲ್ಲೆಡೆ ನಡೆಯುತ್ತಿದ್ದು ಈ ಕೌತುಕ ತಣಿಯಲು ಮೇ 23ರ ವರೆಗೆ ಕಾಯಲೇ ಬೇಕಾಗಿದೆ.
.ಎಚ್.ಕೆ. ನಟರಾಜ