Advertisement

Wildlife week: ವನ್ಯಜೀವಿ ಸಪ್ತಾಹ; ನಾಗರಹೊಳೆಯಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

10:42 AM Oct 07, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಪರಿಸರಯುಕ್ತ ಕಾರ್ಯಕ್ರಮಗಳನ್ನು ನಡೆಸಲಾಯಿತು.

Advertisement

ನಾಗರಹೊಳೆ ವನ್ಯಜೀವಿ ವಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಂಗವಾಗಿ ನಾಗರಹೊಳೆ ಸರ್ಕಾರಿ ಆಶ್ರಮ ಶಾಲಾ ಮಕ್ಕಳಿಂದ ಉದ್ಯಾನದೊಳಗೆ ಮೊದಲ ಎರಡು ದಿನ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು.

ಮಕ್ಕಳಿಗೆ ಪ್ಲಾಸ್ಟಿಕ್‌ನಿಂದ ವನ್ಯಜೀವಿಗಳಿಗೆ ಆಗುವ ಅನಾಹುತಗಳು, ವನ್ಯಜೀವಿ-ಅರಣ್ಯ ಸಂರಕ್ಷಣೆ, ಜೀವ ವೈವಿದ್ಯತೆ ಕುರಿತು ಜಾಗೃತಿ ಮೂಡಿಸಲಾಯಿತು. ಅಲ್ಲದೆ ನಾಗರಹೊಳೆ ಜೀವ ವೈವಿದ್ಯತೆ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಸಪ್ತಾಹದ ಅಂಗವಾಗಿ ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಉದ್ಯಾನಕ್ಕೆ ಭೇಟಿ ಇತ್ತು. ಅಡವಿಯೊಳಗೆ ಸಿಬ್ಬಂದಿಗಳು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ತಿಳಿದುಕೊಂಡರು.

843 ಚ.ಕಿ.ಮೀ. ಇರುವ ನಾಗರಹೊಳೆ ಉದ್ಯಾನವನವು ಒಂದೆಡೆ ಬಂಡೀಪುರ ಮತ್ತೊಂದೆಡೆ ಕೇರಳದ ವಯನಾಡು ಅರಣ್ಯಕ್ಕೆ ಅಂಟಿಕೊಂಡಿದ್ದು, ಕೆಲ ಭಾಗ ಪಶ್ಚಿಮ ಘಟ್ಟಗಳ ಸಾಲಿನಲ್ಲೂ ಬರಲಿದ್ದು, ಇಲ್ಲಿ  ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಹಳಿ ಬೇಲಿ, ಸೋಲಾರ್ ಫೆನ್ಸಿಂಗ್ ವ್ಯವಸ್ಥೆ, ಆನೆ ಕಂದಕ ನಿರ್ವಹಣೆ, ಕಾವಲು ಸಿಬ್ಬಂದಿ ಹೀಗೆ ಅನೇಕ ಕ್ರಮಗಳ ಮೂಲಕ ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟುವ ಕ್ರಮಗಳ ಬಗ್ಗೆ ಡಿ.ಆರ್.ಎಫ್.ಓ. ನವೀನ್‌ ರಾವತ್ ತಿಳಿಸಿಕೊಟ್ಟರು.

Advertisement

ಹುಲ್ಲುಗಾವಲು ನಿರ್ವಹಣೆ, ವನ್ಯಜೀವಿ ಸಂರಕ್ಷಣೆಯ ಮಹತ್ವ, ಉದ್ಯಾನ ನಿರ್ವಹಣೆ ಮತ್ತು ಅರಣ್ಯ ಇಲಾಖೆ ಕಾರ್ಯಕ್ರಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಅರಣ್ಯ ಇಲಾಖೆ ಕಾಲೇಜು ವಿದ್ಯಾರ್ಥಿಗಳಿಗೆ ನಾಗರಹೊಳೆ ಜೀವ ವೈವಿದ್ಯತೆ, ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಸಿಎಫ್ ಅನುಷಾ, ಆರ್.ಎಫ್.ಓ. ಮಹಮದ್ ಜೀಷಾ ಮಾರ್ಗದರ್ಶನ ನೀಡಿದರು.

ಎಲ್ಲಾ ಉಪ ವಿಭಾಗಗಳಲ್ಲೂ ಕಾರ್ಯಕ್ರಮ:

ಉದ್ಯಾನದ ಅಂತರಸಂತೆ, ನಾಗರಹೊಳೆ, ಹುಣಸೂರು ಉಪ ವಿಭಾಗಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next