Advertisement

ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಅಗತ್ಯ

04:59 PM Oct 10, 2020 | Suhan S |

ಭಾಲ್ಕಿ: ಪರಿಸರ ಸಮತೋಲನಕ್ಕಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿಅಭಿಪ್ರಾಯಪಟ್ಟರು.

Advertisement

ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆಡಳಿತಸಂಯುಕ್ತಾಶ್ರಯದಲ್ಲಿ ಇಲ್ಲಿನ ಉಪನ್ಯಾಸಕರಬಡಾವಣೆಯಲ್ಲಿರುವ ಪ್ರಾದೇಶಿಕ ಅರಣ್ಯ ವಲಯ ಕಚೇರಿ ಆವರಣದಲ್ಲಿ ಹಮ್ಮಿಕೊಂಡ 66ನೇ ವನ್ಯಜೀವಿ ಸಪ್ತಾಹ-2020 ಭವಿಷ್ಯಕ್ಕಾಗಿರಣಹದ್ದುಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯ ಆಹಾರ, ಮನರಂಜನೆ, ಔಷಧಿ  ಮತ್ತು ವಾಣಿಜ್ಯಕ್ಕಾಗಿ ಪ್ರಾಣಿಗಳನ್ನು ಬೇಟೆ ಆಡುವುರಿಂದ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಔದ್ಯೋಗಿಕರಣ, ಜನಸಂಖ್ಯೆ ಹೆಚ್ಚಳದಿಂದ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆ. ಈ ದಿಶೆಯಲ್ಲಿ ಅರಣ್ಯ ಇಲಾಖೆವನ್ಯಜೀವಿ ಸಪ್ತಾಹದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ ಎಂದರು.

ಕಿರಿಯ ಶ್ರೇಣಿ ನ್ಯಾಯಾಧೀಸ ಪ್ರಶಾಂತ ಬಾದವಾಡಗಿ ಮಾತನಾಡಿ, ಆಯುರ್ವೇದ ಸಸ್ಯಗಳಿಂದ ನಾವು ರೋಗಮುಕ್ತ ಜೀವನ ನಡೆಸಬಹುದು. ಸತ್ತ ಪ್ರಾಣಿಗಳನ್ನು ತಿಂದುಬದುಕುವ ರಣಹದ್ದುಗಳನ್ನು ಉಳಿಸುವುದು ಅವಶ್ಯಕವಾಗಿದೆ ಎಂದರು.

ಸರ್ಕಾರಿ ಸಹಾಯಕ ಅಭಿಯೋಜಕ ಶಿವರಾಜ ಶೆಟಕಾರ ಮಾತನಾಡಿದರು. ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ನರಸಪ್ಪ, ಕೇತ್ರ ಶಿಕ್ಷಣಾಧಿಕಾರಿ ಮನೋಹರ ಹೋಳ್ಕರ್‌,ಪ್ರಾಚಾರ್ಯ ಅಶೋಕ ರಾಜೋಳೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ ವನ್ಯಜೀವಿ ಸಪ್ತಾಹದ ಪ್ರಾಮುಖ್ಯತೆ ಕುರಿತು ಮಾತನಾಡಿದರು. ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ಪ್ರಾಸ್ತಾವಿಕ ಮಾತನಾಡಿದರು.

ಸಾಮಾಜಿಕ ವಲಯ ಅರಣ್ಯಾ ಧಿಕಾರಿ ಕರಿಯಪ್ಪ ಪೂಜಾರಿ, ಉಪ ವಲಯ ಅರಣ್ಯಾಧಿಕಾರಿ ಸಂಜೀವ, ಉಮಾಕಾಂತ, ಶಿವಾನಂದ ಬಿರಾದಾರ, ವೈಜಿನಾಥ ಮತ್ತು ಅರಣ್ಯ ರಕ್ಷಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next