Advertisement

ವನ್ಯಜೀವಿಗಳ ಪುರಪ್ರವೇಶ; ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಘೀಳು

12:24 AM Sep 19, 2022 | Team Udayavani |

ಬೆಂಗಳೂರು: ಕರಾವಳಿಯ ಅಲ್ಲಲ್ಲಿ ಚಿರತೆ, ಕಾಡಾನೆ, ಕಾಡುಕೋಣ ಕಾಟ, ಕೊಡಗಿನಲ್ಲಿ ಹುಲಿ-ಕಾಡಾನೆ ಆತಂಕ, ಬೆಳ ಗಾವಿಯಲ್ಲಿ ಚಿರತೆ ಭೀತಿ, ಕೊಪ್ಪಳದಲ್ಲಿ ಕರಡಿ ದಾಳಿ… ಇಂಥ ಸುದ್ದಿಗಳು ಇತ್ತೀಚೆಗೆ ದಿನವೂ ವರದಿಯಾಗುತ್ತಲೇ ಇವೆ. ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷದ ಸಮಸ್ಯೆಯ ಗಂಭೀರತೆಯನ್ನು ಇದು ತೆರೆದಿಟ್ಟಿದೆ.

Advertisement

ರಾಜ್ಯದ ಹಲವಾರು ಜಿಲ್ಲೆಗಳ ಮಂದಿ ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತಿದ್ದಾರೆ. ಬೆಳೆ, ತೋಟ ಕಳೆದುಕೊಂಡಿದ್ದಾರೆ. 2020-21ರಲ್ಲಿ 40 ಮಂದಿ ಕಾಡು ಪ್ರಾಣಿ ದಾಳಿಯಿಂದ ಸಾವನ್ನಪ್ಪಿದ್ದಾರೆ.

ವನ್ಯ ಪ್ರಾಣಿಗಳ ಆವಾಸನಾಶ, ಅರಣ್ಯಭೂಮಿಗಳ ಒತ್ತುವರಿ, ಅಭಿವೃದ್ಧಿಯ ಹೆಸರಲ್ಲಿ ಕಾಡು ನಾಶ, ನಗರೀ ಕರಣ, ಕೈಗಾರಿಕೀಕರಣ… ಇವೆಲ್ಲದರ ಫ‌ಲ ವೆಂಬಂತೆ “ಕಾಡು-ನಾಡು’ ಎಂಬ ಸಹ ಜೀವನದ ಒಪ್ಪಂದವೇ ಉಲ್ಲಂಘನೆಯಾಗಿ ಬಿಟ್ಟಿದೆ. ಅನಿವಾರ್ಯವಾಗಿ ಕಾಡುಪ್ರಾಣಿಗಳು ನಾಡು ಪ್ರವೇಶಿಸುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಪರಿಸರ ವಾದಿಗಳ ಮಾತು.

ರಾಜ್ಯದ ವಿವಿಧ ಜಿಲ್ಲೆಗಳ ಸದ್ಯದ ಸ್ಥಿತಿಗತಿಯ ಕುರಿತು “ಉದಯವಾಣಿ’ ನಡೆಸಿದ ಸಂಕಲನ
ದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಉ. ಕರ್ನಾಟಕದ ಬಿಸಿಲು ಜಿಲ್ಲೆಗಳಲ್ಲೂ ಕಾಡು ಪ್ರಾಣಿಗಳ ಕಾಟ ಹೆಚ್ಚಿದೆ. ಅದರಲ್ಲೂ ಚಿರತೆಗಳ “ಪುರಪ್ರವೇಶ’ ಇಡಿ ರಾಜ್ಯವನ್ನು ವ್ಯಾಪಿಸಿದೆ. ಕಳೆದ ಎರಡು ವರ್ಷಗಳಲ್ಲಿ ಚಿರತೆ ದಾಳಿಯ ಘಟನೆ ನಡೆಯದ ದಿನವೇ ಇಲ್ಲ. ಕಾಡಾನೆಗಳು, ಹುಲಿ ಕಾಟವೂ ಹೆಚ್ಚಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮ ರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.

Advertisement

ತಪ್ಪಿಸಿಕೊಂಡ ಹುಲಿ; ಮುಗಿಯದ ಆತಂಕ
ಶನಿವಾರವಷ್ಟೇ ಮಡಿಕೇರಿಯ ಚೆನ್ನಂಗಿ ಬಸವನಹಳ್ಳಿಯ ಕಾಫಿ ತೋಟದಲ್ಲಿ ಹಾದು ಹೋಗಿರುವ ಹುಲಿ ಇನ್ನೂ ಪತ್ತೆಯಾಗಿಲ್ಲ. ಬಾಡಗ, ಬಾಣಂಗಾಲ, ಘಟ್ಟದಳ್ಳ ಭಾಗದಲ್ಲೂ ಹುಲಿ ಸಂಚರಿಸಿದ್ದು, ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದರೂ ತಪ್ಪಿಸಿಕೊಂಡಿದೆ. ಸತತ 5 ದಿನಗಳಿಂದ ಹುಲಿ ಹಿಡಿಯಲು ನಡೆಸಿರುವ ಪ್ರಯತ್ನಗಳೆಲ್ಲ ವಿಫ‌ಲವಾಗಿವೆ. ಬೆಳಗಾವಿ ನಗರದ ಹೊರವಲಯದಲ್ಲಿ ಇತ್ತೀಚೆಗೆ ಚಿರತೆಯೊಂದು ಆಗಾಗ್ಗೆ ಕಾಣಿಸಿಕೊಂಡು ಕಣ್ಣಾಮುಚ್ಚಾಲೆ ಆಟ ಆಡಿತ್ತು. ಚಿರತೆ ದಾಳಿಯ ಭೀತಿಯಿಂದ ಹಲವು ದಿನಗಳ ಕಾಲ ಜನರು ಗೃಹಬಂಧನಕ್ಕೆ ಒಳಗಾಗಿದ್ದರು. ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು. ಸತತ ಪ್ರಯತ್ನಗಳನ್ನು ನಡೆಸಿದರೂ ಕೊನೆಗೂ ಚಿರತೆ ಪತ್ತೆಯಾಗದೆ ಅರಣ್ಯ ಇಲಾಖೆ ಶೋಧ ಕಾರ್ಯವನ್ನೇ ಸ್ಥಗಿತಗೊಳಿಸಿತ್ತು.

ಯಾವ ಜಿಲ್ಲೆಗಳಲ್ಲಿ
ಯಾವ ಪ್ರಾಣಿಗಳ ಕಾಟ?
1. ದಕ್ಷಿಣ ಕನ್ನಡ- ಚಿರತೆ, ಕಾಡಾನೆ, ಕಾಡುಕೋಣ
2. ಚಾಮರಾಜನಗರ- ಕಾಡಾನೆ, ಹುಲಿ, ಚಿರತೆ, ಕೃಷ್ಣಮೃಗ
3. ಚಿಕ್ಕಬಳ್ಳಾಪುರ- ಚಿರತೆ
4. ಹಾಸನ- ಚಿರತೆ, ಕಾಡಾನೆ
5. ಉಡುಪಿ- ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ
6. ಕೊಪ್ಪಳ- ಚಿರತೆ, ಕರಡಿ
7. ಬೆಳಗಾವಿ- ಚಿರತೆ, ಕತ್ತೆಕಿರುಬ, ಕರಡಿ
8. ವಿಜಯಪುರ -ಚಿರತೆ, ಮೊಸಳೆ, ಕತ್ತೆಕಿರುಬ
9. ಚಿಕ್ಕಮಗಳೂರು- ಚಿರತೆ, ಕಾಡಾನೆ
10. ಶಿವಮೊಗ್ಗ – ಚಿರತೆ, ಕಾಡಾನೆ, ಕಾಡೆಮ್ಮೆ, ಕಾಡುಕೋಣ
11. ಬಾಗಲಕೋಟೆ- ಮೊಸಳೆ
12. ರಾಯಚೂರು- ಚಿರತೆ
13. ಕೊಡಗು- ಹುಲಿ, ಚಿರತೆ, ಕಾಡಾನೆ
14. ದಾವಣಗೆರೆ- ಚಿರತೆ
15. ಮೈಸೂರು- ಹುಲಿ, ಚಿರತೆ, ಕಾಡಾನೆ
16. ರಾಮನಗರ- ಕಾಡಾನೆ
17. ಹಾವೇರಿ- ಚಿರತೆ
18. ತುಮಕೂರು- ಚಿರತೆ

Advertisement

Udayavani is now on Telegram. Click here to join our channel and stay updated with the latest news.

Next