Advertisement

ಬ್ರೆಜಿಲ್‌ ದುರಂತದ ಕರಾಳ ರೂಪದ ಅನಾವರಣ: ಕಾಳ್ಗಿಚ್ಚಿಗೆ 1.70 ಕೋಟಿ ಜೀವಿಗಳು ಭಸ್ಮ 

12:03 AM Dec 31, 2021 | Team Udayavani |

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ 2020ರಲ್ಲಿ ಪದೇ ಪದೆ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ಬಲಿಯಾದ ವನ್ಯಜೀವಿಗಳು ಎಷ್ಟಿರಬಹುದು?

Advertisement

ಬರೋಬ್ಬರಿ 1.70 ಕೋಟಿ. ಈ ಬಗ್ಗೆ ಹೊಸ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಜಗತ್ತಿನ ಹಲವು ಭಾಗಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಉಂಟಾಗುತ್ತಿರುವ ಪ್ರತಿಕೂಲ ಪರಿ ಸ್ಥಿತಿಗಳ ಬಗ್ಗೆ ಅಧ್ಯ ಯನ ನಡೆಸಲಾಗುತ್ತಿದೆ. ಈ ಪೈಕಿ ಬ್ರೆಜಿಲ್‌ನ ಸ್ಥಿತಿ ಭೀಕರವಾಗಿದೆ ಎಂದು ವರದಿ ಹೇಳಿದೆ.

ಮಾನವನಿಂದಲೇ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಹಲವು ಭಾಗಗಳಲ್ಲಿ ಕಾಳ್ಗಿಚ್ಚಿ ಮತ್ತು ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿ ಉಂಟಾಗಿದೆ. ವಿಶೇಷವಾಗಿ ಬ್ರೆಜಿಲ್‌ನ ಉದಾಹರಣೆಯನ್ನು ನೋಡುವುದಿದ್ದರೆ 2020ರಲ್ಲಿ 1.70 ಕೋಟಿ ವಿವಿಧ ತಳಿಗಳ ಪ್ರಾಣಿ- ಪಕ್ಷಿ ಸಂಕುಲಗಳು  ಜೀವ ಕಳೆದುಕೊಂಡಿವೆ ಎಂದು “ಸೈಂಟಿ ಫಿಕ್‌ ರಿಪೋರ್ಟ್‌’ ಎಂಬ ನಿಯತ ಕಾಲಿಕದಲ್ಲಿ ಪ್ರಕಟವಾಗಿರುವ ವರದಿ ಯಲ್ಲಿ ಉಲ್ಲೇಖೀಸಲಾಗಿದೆ.

2019ರಲ್ಲಿ ಕಾಳ್ಗಿಚ್ಚಿನಿಂದಾಗಿ ಬ್ರೆಜಿಲ್‌ನ 16,210 ಚದರ ಕಿಮೀ ವ್ಯಾಪ್ತಿಯ ಪ್ರದೇಶ ಸುಟ್ಟು ಕರಕಲಾಗಿದೆ. 2020ರಲ್ಲಿ ಅದರ ಪ್ರಮಾಣ 39,030 ಚದರ ಕಿಮೀ ವ್ಯಾಪ್ತಿಗೆ ಏರಿಕೆ ಯಾಗಿದೆ. ಹೆಚ್ಚಿದ ತಾಪಮಾನ, ಮಳೆಯ ಪ್ರಮಾಣ ಕಡಿಮೆಯಾದದ್ದು, ಪ್ರತಿಕೂಲ ಹವಾ ಮಾನ ಪರಿಸ್ಥಿತಿಗಳಿಂದಾಗಿಕಾಳ್ಗಿಚ್ಚು ಉಂಟಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next