Advertisement

ಕಾಳ್ಗಿಚ್ಚಿಗೆ ಕರಗುತ್ತಿದೆ ಗ್ರೀಸ್‌

11:51 PM Aug 08, 2021 | Team Udayavani |

ಅಥೆನ್ಸ್‌:  ಯುರೋಪ್‌ನ ಗ್ರೀಕ್‌ನಲ್ಲಿ ಬಿಸಿಗಾಳಿ ಹೆಚ್ಚಾದ ಪರಿಣಾಮ ಹಲವು ಕಡೆಗಳಲ್ಲಿ ಕಾಳಿYಚ್ಚು ವ್ಯಾಪಿಸಲಾರಂಭಿಸಿದೆ. ಕಾಳ್ಗಿಚ್ಚು  ದೇಶದ ಮೂರು ಪ್ರಮುಖ ಸ್ಥಳಗಳನ್ನು ಬೆಂಕಿಯ ಕೆನ್ನಾಲಿಗೆಗೆ ನೂಕಿವೆ. ದೇಶದ ಅತ್ಯಂತ ದೊಡ್ಡ ದ್ವೀಪಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇವಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟುಮಾಡಿದೆ. ಸಾವಿರಾರು ಎಕರೆ ಜಾಗ ಬೆಂಕಿಗೆ ತುತ್ತಾಗಿದೆ.

Advertisement

ದಕ್ಷಿಣ ಪೆಲೊಪೋನಿಸ್‌ ಮತ್ತು ಫೋಕಿಡಾದಲ್ಲಿಯೂ ಕಾಳ್ಗಿಚ್ಚು ಹೆಚ್ಚಿದೆ. ಮೊದಲ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆದಿದ್ದ ದಕ್ಷಿಣ ಪೆಲೊಪೋನಿಸ್‌ನಿಂದ ಶನಿವಾರ ಬೆಂಕಿ ಪೂರ್ವ ದಿಕ್ಕಿಗೆ ತಿರುಗಿದ್ದು, ಹತ್ತಿರದ ಹಳ್ಳಿಗಳ ಜನರು ಭಯದೊಂದಿಗೆ ಬದುಕುವಂತಾಗಿದೆ. ಪೆಲೊಪೋನಿಸ್‌ನ ಮಣಿ ಪ್ರದೇಶ ಶೇ.70ರಷ್ಟು ಬೆಂಕಿಗೆ ಆಹುತಿಯಾಗಿದೆ.

ಇವಿಯಾದ ಹಳ್ಳಿಗಳು ಮತ್ತು ಹತ್ತಿರದ ದ್ವೀಪಗಳ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ದ್ವೀಪದ ಉತ್ತರ ಭಾಗವನ್ನು ಬೆಂಕಿ ಬೇರ್ಪಡಿಸಿದೆ. ಆ ಭಾಗದ ಜನರನ್ನು ಹೆಲಿಕಾಪ್ಟರ್‌ ಮೂಲಕ ಸ್ಥಳಾಂತರಿಸಲು ದಟ್ಟ ಹೊಗೆ ಅಡ್ಡವಾಗಿದೆ. ಜಲ ಮಾರ್ಗವೊಂದೇ ಉಳಿದಿದ್ದು, ಹಡಗುಗಳ ಮೂಲಕ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಇವಿಯಾದ ಪೆಫ್ಕಿಯಾ ಕಡಲತೀರದಲ್ಲಿ 10 ಹಡಗುಗಳನ್ನು ಸಿದ್ಧವಾಗಿಟ್ಟುಕೊಂಡಿದ್ದು, ಜನರನ್ನು ಸ್ಥಳಾಂತರಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next