Advertisement

ಆಸ್ಟ್ರೇಲಿಯನ್‌ ಓಪನ್‌ಗೆ ಕಾಡ್ಗಿಚ್ಚಿನ ಕಂಟಕ

11:17 PM Jan 11, 2020 | Sriram |

ಮೆಲ್ಬರ್ನ್: ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಕೂಟಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಇದಕ್ಕೆ ಕಾಡ್ಗಿಚ್ಚಿನ ಬಿಸಿ ತಟ್ಟಿದೆ. ವಾತಾವರಣ ತಿಳಿಯಾಗದೇ ಹೋದರೆ ಈ ಪ್ರತಿಷ್ಠಿತ ಕೂಟವನ್ನೇ ಸಂಘಟಕರು ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸೀಸ್‌ ಮಾಧ್ಯಮಗಳಲ್ಲಿ ಇಂಥದೊಂದು ಸುದ್ದಿ ಬಿತ್ತರಗೊಂಡಿದೆ.

Advertisement

ಸದ್ಯದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯದ ವಾತಾವರಣವಿಡೀ ಕಲುಷಿತ ಗೊಂಡಿದೆ. ಉಸಿರಾಟಕ್ಕೆ ತೀವ್ರ ತೊಂದರೆ ಯಾಗುತ್ತಿದೆ. ಹೀಗಿರುವಾಗ ಜ. 20ರಿಂದ ಟೆನಿಸ್‌ ಕೂಟವನ್ನು ಆಯೋಜಿಸುವುದು ಅಸಾಧ್ಯ ಎನ್ನಲಾಗಿದೆ. ಸದ್ಯ ಕಾಡ್ಗಿಚ್ಚಿಗೆ 26 ಮಂದಿ ಬಲಿಯಾಗಿದ್ದಾರೆ. 80 ಸಾವಿರಕ್ಕೂ ಹೆಚ್ಚು ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶ ಸುಟ್ಟು ಹೋಗಿದೆ. ಲಕ್ಷಾಂತರ ವನ್ಯ ಜೀವಿಗಳು ಸುಟ್ಟು ಕರಕಲಾಗಿವೆ.

ಶುದ್ಧ ಗಾಳಿ ಇಲ್ಲ…
ಆಸ್ಟ್ರೇಲಿಯದ ವಾತಾವರಣದಲ್ಲಿ ಈಗ ಉಸಿರಾಡಲು ಬೇಕಾಗಿರುವ ಶುದ್ಧ ಗಾಳಿ ಇಲ್ಲ. ಇದು ಆಟಗಾರರಿಗೆ, ಸಿಬಂದಿಗೆ ಹಾಗೂ ಕೂಟವನ್ನು ವೀಕ್ಷಿಸಲು ಬರುವ ವೀಕ್ಷಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಸಿಡ್ನಿ ಹಾಗೂ ಕ್ಯಾನ್‌ಬೆರಾದಲ್ಲಿ ಉಂಟಾಗಿರುವ ಮಾಲಿನ್ಯದ ತೀವ್ರತೆ, ಕೂಟದ ತಾಣವಾದ ಮೆಲ್ಬರ್ನ್ನಲ್ಲಿ ಇಲ್ಲವಾದರೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸಂಘಟಕರು ಚಿಂತನೆ ನಡೆಸಿದ್ದಾರೆ.

“ವಿಕ್ಟೋರಿಯಾದಲ್ಲಿ ಇನ್ನೂ ಕಾಡ್ಗಿಚ್ಚು ನಂದಿಲ್ಲ. ಇನ್ನೂ ಒಂದು ವಾರದ ಕಾಲಾವಕಾಶ ಇದೆ. ಬೆಂಕಿಯ ತೀವ್ರತೆ ಕ್ರಮೇಣ ಕಡಿಮೆಯಾಗುವ, ವಾತಾವರಣ ತಿಳಿಯಾಗುವ ನಿರೀಕ್ಷೆ ಇದೆ. ಕೂಟವನ್ನು ಆಯೋಜಿಸುವ ವಿಶ್ವಾಸವಿದೆ’ ಎಂಬುದು ಆಸ್ಟ್ರೇಲಿಯನ್‌ ಓಪನ್‌ ಸಿಇಒ ಗ್ರೆಗ್‌ ಟಿಲ್ಲೆ ಅವರ ಹೇಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next