Advertisement
ಹಾಸನ: ಮಲೆನಾಡಿನ ಜನರಿಗೆ ಕಳೆದೆರಡು ವರ್ಷಗಳಿಂದ ಅತಿವೃಷ್ಠಿಯಿಂದಾದ ಹಾನಿಗಿಂತ ಕಾಡಾನೆಗಳ ಹಾವಳಿಯಿಂದಾಗುತ್ತಿರುವ ಹಾನಿಯೇ ಹೆಚ್ಚು. ಸಕಲೇಶಪುರ, ಆಲೂರು ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದರೆ, ಬೇಲೂರು ಮತ್ತ ಅರಕಲಗೂಡು ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿದೆ ಈ ಬಾರಿಯ ಬಜೆಟ್ ನಲ್ಲಾದರೂ ಸರ್ಕಾರ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಯೋಜನೆ ಅಥವಾ ವಿಶೇಷ ನೆರವು ಘೋಷಣೆ ಮಾಡೀತೆ ಎಂಬ ನಿರೀಕ್ಷೆ ಗರಿಗೆದರಿದೆ.
Related Articles
Advertisement
ವಿಶೇಷವಾಗಿ ಕಾಫಿ, ಏಲಕ್ಕಿ , ಬಾಳೆ, ಭತ್ತದ ಬೆಳೆ ಹಾನಿಗೆ ನ್ಯಾಯಯುತ ಪರಿಹಾರ ನೀಡಬೇಕು. ಏಕೆಂದರೆ ಒಂದು ಕಾಫಿ ಗಿಡ ನೆಟ್ಟು ಫಸಲು ಕೊಡಬೇಕಾದರೆ 5 ವರ್ಷಬೇಕು. ಕಾಡಾನೆಗಳ ದಾಳಿಗೆ ಕಾಫಿ ತೋಟ ನಾಶವಾದಾಗ ಅರಣ್ಯ ಇಲಾಖೆ ನೀಡುವ ಅತ್ಯಲ್ಪ ಪರಿಹಾರದಿಂದ ಕಾಫಿ ಗಿಡಗಳನ್ನು ಬೆಳೆಸಲಾಗುವುದಿಲ್ಲ ಎಂಬುದು ಬೆಳೆಗಾರರ ಅಳಲು. ಬಜೆಟ್‌ನಲ್ಲಿ ಪರಿಹಾರದ ಮೊತ್ತದ ಹೆಚ್ಚಳದ ಘೋಷಣೆಯಾಗಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಬಹುದೆಂಬನಿರೀಕ್ಷೆ ಬೆಳೆಗಾರರದ್ದು.
ಪರಿಹಾರದ ಮೊತ್ತಕ್ಕಿಂತ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಬೆಳೆಗಾರರ ಬಹುದೊಡ್ಡ ಬೇಡಿಕೆ. ರೈಲ್ವೆಕಂಬಿಗಳ ಬೇಲಿಯನ್ನು ನಿರ್ಮಿಸುವ ಮೂಲಕ ಕಾಡಾನೆಗಳು ಹಿಡುವಳಿ ಪ್ರದೇಶದತ್ತ ಬಾರದಂತೆ ತಡೆಯುವುದುಒಂದು ಕ್ರಮ. ಕಳೆದ ಎರಡು ವರ್ಷಗಳಿಂದ ರೈಲ್ವೆಕಂಬಿಗಳ ಬೇಲಿ ನಿರ್ಮಾಣ ನಡೆಯುತ್ತಾ ಬಂದಿದೆ. ಆದರೆ ಹಾಸನ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಬೇಲಿ ನಿರ್ಮಾಣವಾಗಿಲ್ಲ. ಅಂದರೆ ಶೇ. 11 ಮಾತ್ರ ಸಾಧನೆಯಾಗಿದೆ.
ಕಾಡಾನೆಗಳ ಹಾವಳಿ ತಡೆಯ ಮತ್ತೂಂದು ಶಾಶ್ವತಕ್ರಮ ಆನೆ ಕಾರಿಡಾರ್ ನಿರ್ಮಾಣ. ಸಕಲೇಶಪುರತಾಲೂಕಿನ ಹೆತ್ತೂರು ಹೋಬಳಿಯಲ್ಲಿ ಕಾಡಾನೆಗಳಹಾವಳಿ ತಡೆಯಲಾರದೆ ತಮ್ಮ ಹಿಡುವಳಿಭೂಮಿಯನ್ನೂ ಅರಣ್ಯ ಇಲಾಖೆಗೆ ಬಿಟ್ಟುಕೊಡಲುರೈತರು ಮುಂದೆ ಬಂದಿದ್ದಾರೆ. ನ್ಯಾಯಯುತಪರಿಹಾರ ನೀಡಿದರೆ ಅರಣ್ಯ ಇಲಾಖೆ ತಮ್ಮ ಭೂಮಿನೀಡಲು ಸಿದ್ಧರಿರುವ ರೈತರ ಬೇಡಿಕೆಯ ಬಗ್ಗೆ ಸರ್ಕಾರಸ್ಪಂದಿಸುತ್ತಿಲ್ಲ. ಈ ಬೇಡಿಕೆಗೆ ಸರ್ಕಾರ ಸ್ಪಂದಿಸಿದರೆಸಾವಿರಾರು ಎಕರೆ ಆನೆ ಕಾರಿಡಾರ್ ನಿರ್ಮಾಣವಾದರೆಕಾಡಾನೆಗಳು ಆಹಾರ , ನೀರು ಅರಸಿ ಹಿಡುವಳಿ ಪ್ರದೇಶದತ್ತ ಬರುವುದಿಲ್ಲ ಎಂಬುದು ರೈತರ ಸಲಹೆ .
ರಾಜ್ಯ ಸರ್ಕಾರದ ಪಾತ್ರ ದೊಡ್ಡದು :
ಕಾಡಾನೆಗಳ ಹಾವಳಿ ತಡೆಗೆ ಕೇಂದ್ರ ಸರ್ಕಾರದ ಕ್ಯಾಂಪ್ಕೊ ಯೋಜನೆಯಡಿ ಅನುದಾನ ಪಡೆಯುವ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದೇನೆ. ಆದರೆ ರಾಜ್ಯ ಸರ್ಕಾರವು ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಒತ್ತಡ ತರಬೇಕು. ಈಅನುದಾನ ಪಡೆಯುವುದಕ್ಕೆ ಸುದೀರ್ಘ ಪ್ರಕ್ರಿಯೆನಡೆಯಬೇಕು. ಹಾಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ಹೆಚ್ಚು ಅನುದಾನಘೋಷಣೆ ಮಾಡಬೇಕು. 2-3 ವರ್ಷದಲ್ಲಿ ಬೇಲಿನಿರ್ಮಾಣ ಪೂರ್ಣಗೊಳಿಸಿದರೆ ಕಾಡಾನೆಗಳ ಹಾವಳಿ ಯನ್ನು ತಕ್ಕ ಮಟ್ಟಿಗೆ ತಡೆಯಬಹುದಾಗಿದೆ ಎಂದು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಹೇಳುತ್ತಾರೆ.
ಮುಖ್ಯಮಂತ್ರಿ ಗಮನ ಸೆಳೆದಿರುವೆ :
ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಯ ಶಾಶ್ವತ ಕ್ರಮವಾಗಿ ಆನೆ ಕಾರಿಡಾರ್ ನಿರ್ಮಾಣ, ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ ,ಸೋಲಾರ್ ತೂಗು ಬೇಲಿ ನಿರ್ಮಾಣ ಆಗ ಬೇಕು . ಈ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸ ಬೇಕು ಎಂದು ಮುಖ್ಯಮಂತ್ರಿಯವರ ಗಮನವನ್ನು ನಿರಂತರವಾಗಿ ಸೆಳೆಯುತ್ತಾ ಬಂದಿದ್ದೆನೆ. ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಲಿಖೀತ ಮನವಿಯನ್ನೂ ಸಲ್ಲಿಸಿ ಕನಿಷ್ಠ 300 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡ ಬೇಕುಎಂದು ಮನವಿ ಮಾಡಿದ್ದೇನೆ. ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು.