Advertisement

ಮೂಡಿಗೆರೆ: ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡಿನ ದಾಂಧಲೆ

10:29 AM Feb 16, 2023 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡಿನ ದಾಂಧಲೆ ಹೆಚ್ಚಾಗಿದ್ದು, ಮೂಡಿಗೆರೆ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಆರಕ್ಕೂ ಹೆಚ್ಚು ಕಾಡಾನೆಗಳು ರಂಪಾಟ ಆರಂಭಿಸಿದೆ.

Advertisement

ಕುಂಬರಡಿ ಗ್ರಾಮಕ್ಕೆ‌ ಲಗ್ಗೆ ಇಟ್ಟಿದ್ದ ಆರಕ್ಕೂ ಅಧಿಕವಿರುವ ಕಾಡಾನೆ ಹಿಂಡು ಅಡಕೆ ಸೇರಿದಂತೆ ಕೃಷಿಗೆ ಹಾನಿ ಮಾಡುತ್ತಿವೆ. ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಹರಸಾಹಸ ಪಡುತ್ತಿದ್ದು, ಆನೆ ಓಡಿಸುವುದೇ ದುಸ್ಥರವಾಗಿದೆ.

ಇದನ್ನೂ ಓದಿ:ಮುಖ್ಯಮಂತ್ರಿಗೆ ಕಾಯುತ್ತಿದೆ ಪುತ್ತೂರು ಸರಕಾರಿ ಬಸ್‌ ನಿಲ್ದಾಣ

ಪಟಾಕಿ ಸಿಡಿಸಿ, ಗುಂಡು ಹಾರಿಸಿ ಕಾಡಾನೆಗಳನ್ನು ಓಡಿಸಲು ಯತ್ನಿಸಲಾಗುತ್ತಿದ್ದು, ಪಟಾಕಿಯ ಸದ್ದು ಕೇಳಿ ಓಡುವ ಆನೆಗಳು ಮತ್ತೆ ಊರಿಗೆ ದಾಳಿ ಮಾಡುತ್ತಿವೆ. ಇದರಿಂದ ಮಲೆನಾಡ ಕಾಡಂಚಿನ ಗ್ರಾಮಗಳ ಜನತೆ ಕಾಡಾನೆ ಭಯದಿಂದ ಬದುಕಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next