Advertisement
ಅಂತೆಯೇ ತಡ ರಾತ್ರಿ 4 ಗಂಡು, 2 ಹೆಣ್ಣು ಆನೆಗಳು ಗಡಿ ಅರಣ್ಯ ಭಾಗವಾಗದ ಮುತ್ತ್ಯಾಲಮಡುವು ಭಾಗದಿಂದ ಸೋಲೂರು ಬಳಿ ಆನೇಕಲ್ ಗುಮ್ಮಾಳಪುರ ರಸ್ತೆ ದಾಟಿ ವಣಕನಹಳ್ಳಿ ಸುತ್ತಮುತ್ತಲಿನ ರಾಗಿ ಬೆಳೆ ತಿಂದು ಸುತ್ತಾಡಿ ಬೆಳಗಾಗುತ್ತಲೇ ಅದೇ ರಸ್ತೆ ದಾಟುವ ವೇಳೆ ಜನ ಪಟಾಕಿ ಹಚ್ಚಿದ್ದರಿಂದ ಆನೆಗಳು ಗಾಬರಿಗೊಂಡು ಮತ್ತೇ ವಣಕನಹಳ್ಳಿ, ತೆಲಗರಲ್ಲಿ ಕಾಳನಾಯಕನಹಳ್ಳಿ ಭಾಗಗಲ್ಲಿ ಬೀಡು ಬಿಟ್ಟಿದ್ದವು.
Related Articles
Advertisement
ತಮಿಳುನಾಡಿನಿಂದ ಬಂದ ಆನೆಗಳು: ಆನೇಕಲ್ ತಾಲೂಕಿನ ಹಳ್ಳಿಗಳು ಒಂದು ಭಾಗದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಭಾಗ ಮತ್ತು ಕೆಲ ಭಾಗದಲ್ಲಿ ತಮಿಳು ನಾಡಿನ ಜವಳಗೆರೆ ಅರಣ್ಯ ಭಾಗ ಆವರಿಸಿದೆ. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯದಿಂದ ಆನೆಗಳು ಹಳ್ಳಿಗಳತ್ತ ಬಾರದಂತೆ ಅರಣ್ಯ ಸಿಬ್ಬಂದಿ ರಾತ್ರಿ ಹಗಲು ಕಾವಲು ಕಾಯುತ್ತಿದ್ದಾರೆ. ಜತೆಗೆ ರೈಲ್ವೆ ಹಳಿ ಬೇಲಿ ಹಾಕಿದ್ದಾರೆ.
ಈಗ, ಬಂದಿರುವ ಆನೆಗಳು ಜವಳಗೆರೆ ಅರಣ್ಯದಿಂದ ಗುಮ್ಮಾಳಪುರ ಮಾರ್ಗವಾಗಿ ಮುತ್ಯಾಲಮಡುನ ಬಳಿ ಇರುವ ಹ್ಯಾಪಿ ಹೋಮ್ ರೆಸಾರ್ಟ್ ಬಳಿಯಿಂದ ಸೋಲೂರು ಬಳಿ ಹೊಲಗಳತ್ತ ಕಾಡಾನೆಗಳು ಬಂದಿವೆ ಎಂದು ಆನೇಕಲ್ ಪ್ರಾದೇಶಿಕ ಅರಣ್ಯ ವಿಭಾಗದ ಉಪ ವಲಯಅರಣ್ಯಾಧಿಕಾರಿ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿರಾದರ್ ಮತ್ತಿತರರಿದ್ದರು.