Advertisement

ಜನರಿಗೆ ಚೆಲ್ಲಾಟ; ಕಾಡಾನೆಗಳಿಗೆ ಪ್ರಾಣ ಸಂಕಟ

01:35 PM Jul 12, 2023 | Team Udayavani |

ಆನೇಕಲ್‌: ಆಹಾರ ಹರಸಿ ಬಂದ ಕಾಡಾನೆಗಳ ಹಿಂಡು ರೈತರ ನೀಲಗಿರಿ ತೋಪಿನಲ್ಲಿ ಮೊಕ್ಕಾಂ ಹೂಡಿದ್ದರಿಂದ ಜನರಿಗೆ ಆನೆಗಳನ್ನು ನೋಡುವ ಕುತೂ ಹಲದ ಚೆಲ್ಲಾಟವಾದರೆ ಕಾಡಾನೆಗಳಿಗೆ ಪ್ರಾಣ ಸಂಕಟ. ಇದು ವಣಕನಹಳ್ಳಿ ಮತ್ತು ಸೋಲೂರು ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ.

Advertisement

ರಾತ್ರಿ ಕಾಡಿನಿಂದ ಬಂದ ಹಳ್ಳಿಗಳತ್ತ ಬಂದಿದ್ದ ಐದು ಕಾಡಾನೆಗಳು ರಾತ್ರಿ ಹಿಡಿ ರೈತರ ಹೊಲ, ತೋಟಗಳಿಗೆ ಬಂದಿದ್ದು, ಬೆಳಗಾಗುತ್ತಲೆ ಕಾಡಿನತ್ತ ಹಿಂದಿರುವುದು ತಡವಾಗಿ ವಾಹನ ಜನರ ಸಂಚಾರ ಹೆಚ್ಚಾಗುತ್ತಿದ್ದಂತೆ ಸೋಲೂರು ಬಳಿಯ ನೀಲಗಿರಿ ತೋಪಿನಲ್ಲಿ ಆಶ್ರಯ ಪಡೆದು ಕೊಂಡಿದ್ದವು. ಪಕ್ಕದ ತೋಟದ ರೈತರಿಗೆ ಕಾಡಾನೆಗಳಿರುವುದು ತಿಳಿಯುತಿದ್ದಂತೆ ವಿಷಯ ಹಳ್ಳಿಗರಿಗೆ ತಿಳಿಯುತ್ತಿದ್ದ ಗುಂಪು ಗುಂಪು ಜನರು ಆನೆಗಳ ನೋಡಲು ಆಗಮಿಸಿ ನೀಲಗಿರಿ ತೋಪಿ ನ ಸುತ್ತಲು ಸುತ್ತುವರೆದು ಶಿಳ್ಳೆ, ಕೇಕೆ, ಹಾಕಿ ಪಟಾಕಿ ಸಿಡಿಸಿ ಆನೆಗಳನ್ನು ನೋಡಿ ಸಂಭ್ರಮಸಿ ಆನೆಗಳೊಂದಿಗೆ ಚೆಲ್ಲಾಟ ವಾಡ ತೊಡಗಿದರು. ಅತ್ತ ಕಾಡಾನೆಗಳು ಜನರ ಚೆಲ್ಲಾಟದಿಂದ ಹಿಂಸೆ ಪಡು ವಂತಾಯಿತು.

ಸೋಲೂರು ಕೆರೆಯಿಂದ ವಣಕನಹಳ್ಳಿ ಕೆರೆಗೆ, ವಣಕನಹಳ್ಳಿ ಕೆರೆಯಿಂದ ಸೋಲೂರು ಕಡೆ ಓಡಾಡಿ ಓಡಾಡಿ ದಣಿದು ನೀಲಗಿರಿ ತೋಪಿನಲ್ಲೇ ಉಳಿದುಕೊಂಡಿದ್ದವು. ತಮಿಳುನಾಡಿನ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ಇಲಾಖೆಯ ಸಿಬ್ಬಂದಿ ಜನರನ್ನು ನಿಯಂ ತ್ರಿಸಲು ಹರಸಾಹಸ ಪಡ ಬೇಕಾಯಿತು. ಬೆಳಗಿನ ಸಮಯದಲ್ಲಿ ಕಾಡಿ ನತ್ತ ಆನೆ ಗಳನ್ನು ಓಡಿಸಲು ಸಾಧ್ಯ ವಾಗ ದ ಕಾರಣ, ಸಂಜೆ ವೇಳೆಗೆ ಕಾಡಾನೆ ಗಳನ್ನು ಅರಣ್ಯದತ್ತ ಓಡಿಸಲು ಯಶಸ್ವಿ ಯಾದರು.

ಶಿವರಾತ್ರೇಶ್ವರ ಸ್ವಾಮೀಜಿ, ಡಿಆರ್‌ಎಫ್ಓ ಪ್ರಶಾಂತ್‌, ಟಿ.ವೈ. ಜನಗೇರಿ, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next