ಆಲೂರು: ಮಲೆನಾಡಿನಲ್ಲಿ ಜೀವ, ಬೆಳೆಹಾನಿಯಲ್ಲಿ ತೊಡಗಿರುವ ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸುವ ಕಾರ್ಯಾಚರಣೆ ಅರಣ್ಯ ಇಲಾಖೆ ಅಧಿಕಾರಿಗಳು 5ನೇ ದಿನವೂ ಮುಂದುವರಿಸಿದ್ದು, ಈಗಾಗಲೇ ಎರಡು ಹೆಣ್ಣಾನೆಗಳಿಗೆ ಕಾಲರ್
ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಹೆಣ್ಣಾನೆ, ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಸಲುವಾಗಿ ಕಾರ್ಯಾಚರಣೆಯ ನಾಲ್ಕನೇ ದಿನವಾದ ಸೋಮವಾರ ದೊಡ್ಡಬೆಟ್ಟ ಸುತ್ತಮುತ್ತ ಸಿಸಿಎಫ್ ಡಾ.ಶೇಖರ್, ಜಿಲ್ಲಾ ಅರಣ್ಯಾಧಿಕಾರಿ ಡಾ.ಕೆ.ಎನ್. ಬಸವರಾಜ್, ವಲಯ ಅರಣ್ಯಾಧಿಕಾರಿ ವಿನಯಚಂದ್ರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಟ ನಡೆಸಿದರು.
ದೊಡ್ಡಬೆಟ್ಟ, ಚಿಕ್ಕ ಬೆಟ್ಟ ದಟ್ಟವಾದ ಕಾಡಿನಿಂದ ಕೂಡಿರುವುದರಿಂದ ಕಾಡಾನೆಗಳು ಅದರೊಳಗೆ ಸೇರಿಕೊಂಡಿವೆ. ಇದರಿಂದಾಗಿ ಕಾರ್ಯಾಚರಣೆಗೆ ತೊಡಕಾಗಿದ್ದು, ಮಂಗಳವಾರ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಈಗಾಗಲೇ ಮತ್ತಿಗೋಡು ಆನೆ ಶಿಬಿರದಿಂದ “ಎಲಿಫೆಂಟ್ ಹಂಟರ್’ ಚಾಣಾಕ್ಷನೆನಿಸಿರುವ ಅಭಿಮನ್ಯು, ಗಣೇಶ್, ಗೋಪಾಲಕೃಷ್ಣ ಹಾಗೂ ದುಬಾರೆ ಆನೆ ಶಿಬಿರದಿಂದ ಧನಂಜಯ, ಸುಗ್ರೀವ ಸಾಕಾನೆಗಳನ್ನು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ಆದರೆ,
ಕಾರ್ಯಾಚರಣೆಗೆ ಪದೇಪದೆ ತೊಡಕಾಗುತ್ತಿರುವ ಕಾರಣ, ಮತ್ತಿಗೋಡು ಆನೆ ಶಿಬಿರದಿಂದ ಮತ್ತೂಂದು ಆನೆ ಕೃಷ್ಣನನ್ನು ಕರೆತರಲಾಗಿದೆ.
ಇದನ್ನೂ ಓದಿ:ರೈತರೇ ಕೈ ಮುಗಿದು ಕೇಳುವೆ ಪ್ರತಿಭಟನೆ ಕೈಬಿಡಿ: ಡಿಸಿಎಂ ಗೋವಿಂದ ಕಾರಜೋಳ
ದೊಡ್ಡ ಹಾಗೂ ಚಿಕ್ಕ ಬೆಟ್ಟಗಳಲ್ಲಿ ದಟ್ಟವಾದ ಅರಣ್ಯ ಇರುವುದರಿಂದ 25 ರಿಂದ 30 ಕಾಡಾನೆಗಳ ಹಿಂಡಿನಲ್ಲಿ ಪುಂಡಾನೆ ಸೇರಿಕೊಂಡಿದೆ ಎನ್ನಲಾಗಿದೆ. ಅರವಳಿಕೆ ತಜ್ಞರಾದ ಡಾ.ಮುಜೀಬ್, ಡಾ.ಮುರಳಿ, ಡಾ.ಸನತ್‌ಕುಮಾರ್, ಗುರಿಕಾರ ವೆಂಕಟೇಶ್ ಸೇರಿ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಆನೆ ಬಯಲಿನಲ್ಲಿದ್ದಾಗ ಮಾತ್ರ ಬಂದೂಕಿನಿಂದ ಅರವಳಿಕೆ ಮದ್ದನ್ನು ಇಂಜಕ್ಟ್ ಮಾಡಲು ಸಾಧ್ಯವಾಗುತ್ತದೆ. ಆದರೆ, ಇಲ್ಲಿ ದಟ್ಟವಾದ ಅರಣ್ಯ ಇದೆ. 1500 ಎಕರೆ ಪ್ರದೇಶ ಹೊಂದಿರುವ ದಟ್ಟವಾದ ಅರಣ್ಯದಲ್ಲಿ ಸೋಮವಾರ ಸಂಜೆ 5.30ರವರೆಗೂ ಕಾರ್ಯಾಚರಣೆ ಮಾಡಿದ್ರೂ ಕಾಡಾನೆಗಳ ಹಿಂಡು ಗೋಚರವಾಗಿಲ್ಲ.
ಅಧಿಕಾರಿಗಳ ಮಾಹಿತಿ ಪ್ರಕಾರ ಸಂಜೆ 6 ರವರೆಗೆ ಕಾರ್ಯಾಚರಣೆ ನಡೆಸಿ ನಂತರ ಸ್ಥಗಿತಗೊಳಿಸಿ, ಮಂಗಳವಾರ ಬೆಳಗ್ಗೆ 6.30ಕ್ಕೆ ಮುಂದುವರಿಸ ಲಾಗುತ್ತದೆ ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.