Advertisement
ಮೀನುಗಾರರು ಹರಡಿದ್ದ ಬಲೆಗೆ ಸಿಲುಕಿದ್ದ ಆನೆಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಮಂಗಳವಾರ ಬೆಳಗ್ಗೆ ನುಗು ಜಲಾಶಯದ ಸಿಬ್ಬಂದಿ ಜಲಾಶಯದ ಲೈಟ್‌ಆಫ್ ಮಾಡಲು ಬಂದಾಗ ಈ ದೃಶ್ಯ ಕಂಡು ಬಂದಿದ್ದು, ನಂತರ ಡ್ಯಾಂನ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿ ತಕ್ಷಣ ಹೆಡಿಯಾಲ ವನ್ಯಜೀವಿ ವಲಯದ ಎಸಿಎಫ್ ರವಿಶಂಕರ್ ನೇತೃತ್ವದಲ್ಲಿ ಬೋಟ್ ತರಿಸಿ, ಮೀನು ಬಲೆಗೆ ಸಿಲುಕಿದ್ದ ಗಂಡು ಕಾಡಾನೆ ಸಂರಕ್ಷಣೆಗೆ ಮುಂದಾದರೂ, ಬೋಟ್ ಮೂಲಕ ಬಲೆ ಬಿಡಿಸಲು ಪ್ರಯತ್ನ ನಡೆಸಲಾಯಿತು. ಬಳಿಕ ಅನೆ ವೈದ್ಯರು, ಅರ್ಜುನ ಆನೆ ಕರೆಸಿ ಕಾರ್ಯಾಚರಣೆ ಮಾಡಲು ತಯಾರಿ ನಡೆಸುತ್ತಿರುವಾಗ ಬೋಟ್ ಶಬ್ದಕ್ಕೆ ಮೀನಿನ ಬಲೆಗೆ ಸಿಲುಕಿದ್ದ ಕಾಡಾನೆ
ಬೆಲೆಯಿಂದ ತಾನೇ ಬಿಡಿಸಿಕೊಂಡು ದಡ ಸೇರಿತು.
Related Articles
Advertisement
10 ವರ್ಷದ ಹಿಂದಿನ ಪ್ರಕರಣ ನೆನಪಿಸಿದ ಘಟನೆಸೋಮವಾರ ರಾತ್ರಿ ನುಗು ಜಲಾಶಯದ ಹಿನ್ನೀರಿಗೆ ನೀರು ಕುಡಿಯಲು ಬಂದು ಮೀನಿನ ಬಲೆಗೆ ಸಿಲುಕಿ ನದಿಯಿಂದ ಮೇಲೆ ಬಾರಲಾಗದೆ ನಿತ್ರಾಣಗೊಂಡಿದ್ದ ಕಾಡಾನೆಯಂತೆ ಕಳೆದ 10 ವರ್ಷಗಳ ಹಿಂದೆ ಕೂಡ ಕಾಡಾನೆಯೊಂದು ಮೀನಿನ ಬಲೆಗೆ ಸಿಲುಕಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದನ್ನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಯೊಬ್ಬರು ಸ್ಮರಿಸಿದರು. ಈ ಭಾಗದಲ್ಲಿ ಆಗಾಗ ಮೀನಿನ ಬಲೆಗೆ ಸಿಲುಕಿ ಕೆಲ ಪ್ರಾಣಿಗಳು ನರಳಾಡಿ ಕಷ್ಟಪಟ್ಟು ಬದುಕುಳಿದಿರುವ ಘಟನೆಗಳು ಜರಗುತ್ತಿದ್ದು, ನುಗು ಹಿನ್ನೀರಿನಲ್ಲಿ ಮೀನು ಶಿಕಾರಿಗೆ ಸಂಪೂರ್ಣ ತಡೆ ನೀಡಬೇಕಿದೆ ಎಂದು ಪ್ರಾಣಿ ಪ್ರೀಯರು ಆಗ್ರಹಿಸಿದ್ದಾರೆ.