Advertisement

Chikkamagaluru: ಬೈನೇ ಮರದ ಆಸೆ; ಮನೆ ಮೇಲೆ ಮರ ಬೀಳಿಸಿದ ಕಾಡಾನೆ

03:03 PM Dec 12, 2023 | Team Udayavani |

ಚಿಕ್ಕಮಗಳೂರು: ಬೈನೇ ಮರದ ಆಸೆಗೆ ಕಾಡಾನೆ ಮರವನ್ನು ಮನೆ ಮೇಲೆ ಬೀಳಿಸಿದ ಘಟನೆ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ನಡೆದಿದೆ. ಬೈನೇ ಮರ ಎಂದರೆ ಕಾಡಾನೆಗಳಿಗೆ ಅಚ್ಚುಮೆಚ್ಚು.

Advertisement

ಮಲೆನಾಡಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು, ಮನೆ ಬಾಗಿಲಿಗೆ ಆನೆಗಳು ಬರ್ತಿವೆ ಎನ್ನಲಾಗುತ್ತಿದೆ. ಪ್ರಶಾಂತ್ ಎಂಬವರ ಮನೆ ಮೇಲೆ ಮರ ಬೀಳಿಸಿದ ಕಾಡಾನೆ, ರಾತ್ರಿಯಿಡಿ ಮನೆ ಬಾಗಿಲಲ್ಲೇ ಬೈನೇ ಮರ ತಿನ್ನುತ್ತಿತ್ತು.

ಮರ ಮನೆ ಮೇಲೆ ಬಿದ್ದ ಪರಿಣಾಮ ಮನೆಯ ಸೀಮೆಂಟ್ ಶೀಟುಗಳು ಪುಡಿ ಪುಡಿಯಾಗಿವೆ. ಆನೆ ಕಂಡು ಮನೆ ಮೇಲೆ ಮರ ಬಿದ್ದರೂ ಪ್ರಶಾಂತ್ ಮನೆಯವರು ಹೊರಬಾರದ ಮನೆಯೊಳಗಡೆಯೇ ಇದ್ದರು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next