ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.
ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಡಾನೆ ಕಾಣಿಸಿಕೊಂಡಿದೆ. ಆನೆಯನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪಟಾಕಿ ಸಿಡಿಸಿ ಅರಣ್ಯಾಧಿಕಾರಿಗಳು ಆನೆಯನ್ನು ಪುನಃ ಕಾಡಿಗೆ ಓಡಿಸಿದ್ದಾರೆ.
ಇದನ್ನೂ ಓದಿ:ಇಂಧನ ಬೆಲೆ ಏರಿಕೆ: ಬೆಂಗಳೂರಿನಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ,ಡೀಸೆಲ್ 100ರ ಸನಿಹ
ವನ್ಯಜೀವಿಗಳು ಕಾಡಿನಿಂದ ಹೊರಗೆ ಬಾರದಂತೆ ಟ್ರೆಂಚ್ ಹೊಡೆಯಲಾಗಿದೆ. ಟ್ರೆಂಚ್ ಬಳಿಯಲ್ಲೇ ಇದ್ದ ಕಾಡಾನೆ, ಪಟಾಕಿ ಸದ್ದಿಗೆ ಹೆದರಿ ಹಿಂದಕ್ಕೆ ಹೋಗಿದೆ. ಈ ಭಾಗದಲ್ಲಿ ಹುಲಿ, ಚಿರತೆಗಳು ಆಗಾಗ ಕಾಣಸುತ್ತವೆ. ಆದರೆ ಇದೆ ಮೊದಲ ಬಾರಿಗೆ ಕಾಡಾನೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಆನೆ ಜೊತೆಗೆ ಮರಿ ಇತ್ತು ಎಂದು ಹೇಳಲಾಗುತ್ತಿದೆ.
ಉಂಬ್ಳೆಬೈಲು ವಲಯದ ಅರಣ್ಯದಲ್ಲಿರುವ ಆನೆಗಳೆ ಗೋಣಿಬೀಡು ಬಳಿ ಪ್ರತ್ಯಕ್ಷವಾಗಿವೆ. ಕೆಲವು ತಿಂಗಳ ಹಿಂದೆ ಇದೆ ಆನೆಗಳು ಲಕ್ಕಿನಕೊಪ್ಪ ಬಳಿ ಪ್ರತ್ಯಕ್ಷವಾಗಿದ್ದವು. ತೋಟ, ಗದ್ದೆಯಲ್ಲಿ ಓಡಾಡಿದ್ದವು. ಇವುಗಳನ್ನು ಭದ್ರಾ ಅಭಯಾರಣ್ಯದೊಳಗೆ ಓಡಿಸಲು ಸಕ್ರೆಬೈಲು ಬಿಡಾರದ ಆನೆಗಳನ್ನು ಕರೆತಂದು ಕಾರ್ಯಾಚರಣೆ ನಡೆಸಲಾಗಿತ್ತು.