Advertisement

Wild Elephant; ಕನ್ಯಾಡಿ: ಒಂಟಿ ಸಲಗದ ದಾಂಧಲೆ

10:56 AM Mar 07, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಾರ್ಯ ಕಲ್ಕಾಜೆ ಪರಿಸರ ಹಾಗೂ ಕನ್ಯಾಡಿ ಸಮೀಪ ಎರಡು ದಿನಗಳಿಂದ ಒಂಟಿ ಸಲಗವು ಕೃಷಿ ಪ್ರದೇಶಕ್ಕೆ ನುಗ್ಗಿ ತೆಂಗು, ಬಾಳೆ ಗಿಡಗಳನ್ನು ಧ್ವಂಸಗೊಳಿಸುತ್ತಿದೆ.

Advertisement

ಮಾ. 4ರಂದು ಧರ್ಮಸ್ಥಳದ ಪಾಂಗಳ, ಎರ್ಮಾಳ ಮತ್ತು ಅಂಬ್ಯದಲ್ಲಿ ಕಾಣಿಸಿಕೊಂಡಿದ್ದ ಆನೆ ಪಟಾಕಿ ಸಿಡಿಸಿದ ಶಬ್ದಕ್ಕೆ ಭಯಗೊಂಡು ಇತ್ತ ದಾಳಿಯಿಟ್ಟಿದೆ.

ಮಾ. 5ರಂದು ಬೆಳಗ್ಗೆ ನರೇಶ್‌ ಹಾಗೂ ಹರೀಶ್‌ ಗೌಡ ಅವರ ತೋಟದಲ್ಲಿ ಒಂಟಿ ಸಲಗ ಬಾಳೆ ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಹೋಗಿದೆ. ತಡರಾತ್ರಿ 2 ಗಂಟೆ ಹೊತ್ತಿಗೆ ನಾಯಿಗಳ ಬೊಗಳುವಿಕೆಯಿಂದ ಆನೆ ಬಂದಿರುವ ವಿಚಾರ ಗೊತ್ತಾಗಿದ್ದು, ಮನೆಯವರು ಊರಿನವರೆಗೆ ಜಾಗರೂಕತರಾಗಿರುವಂತೆ ಫೋನ್‌ ಕರೆ ಮೂಲಕ ಮತ್ತು ಸಂದೇಶದ ಮೂಲಕ ತಿಳಿಸಿದ್ದಾರೆ.

ಮಾ. 6ರಂದು ಮುಂಜಾನೆ 4ರ ಸುಮಾರಿಗೆ ಕನ್ಯಾಡಿಯಿಂದ ನೀರ ಚಿಲುಮೆ ಪ್ರದೇಶದಲ್ಲಿ ಕಾಣಿಸಿ ಕೊಂಡ ಸಲಗ ಚಂದ್ರಕಾಂತ್‌ ಅವರ ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ತಿಂದು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next