Advertisement

ಹುಣಸೂರು: ಕಾಡಿಗಟ್ಟುವ ವೇಳೆ ಊರೊಳಗೆ ಓಡಿದ ಕಾಡಾನೆಗಳು; ಗ್ರಾಮಸ್ಥರು ಹೈರಾಣು

11:52 AM Apr 26, 2022 | Team Udayavani |

ಹುಣಸೂರು: ಬೇಸಿಗೆ ಬಂತೆಂದರೆ ಉದ್ಯಾನದಂಚಿನಲ್ಲಿ ನಿತ್ಯ ವನ್ಯಪ್ರಾಣಿ ಮಾನವ ಸಂಘರ್ಷ  ಇದ್ದದ್ದೆ. ಕಾಡಂಚಿನ ಜನರು ತಮ್ಮ ಬೆಳೆ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ.

Advertisement

ಆದರೂ ಆನೆಗಳು ಲಕ್ಷ್ಮಣತೀರ್ಥ ನದಿ ದಾಟಿ ಅಥವಾ ರೈಲ್ವೆ ಹಳಿ ತಡೆಗೋಡೆ ದಾಟಿ ಹೊರಬಂದು ಸಾಕಷ್ಟು ಬೆಳೆ ತಿಂದು, ತುಳಿದು ನಾಶ ಪಡೆಸುವುದು ಮಾಮೂಲಾಗಿದೆ. ಭಾನುವಾರ ರಾತ್ರಿ ನದಿ ದಾಟಿ ಹೊರಬಂದಿದ್ದ ಎರಡು  ಸಲಗಗಳನ್ನು ಸೋಮವಾರ ಮರಳಿ ಕಾಡಿಗಟ್ಟುವ ವೇಳೆ ವೀರನಹೊಸಹಳ್ಳಿ  ಊರೊಳಗೆ ಓಡಾಡಿದ್ದರಿಂದಾಗಿ ಕೆಲ ಕಾಲ ಆತಂತ ಸೃಷ್ಟಿಯಾಗಿತ್ತಾದರೂ, ಗ್ರಾಮಸ್ಥರ ಸಹಕಾರದಿಂದ ಅರಣ್ಯ ಸಿಬ್ಬಂದಿಗಳು ಮರಳಿ ಕಾಡಿಗಟ್ಟಿದ್ದಾರೆ.

ಅಪೂರ್ಣಗೊಂಡ ತಡೆಗೋಡೆ :

ಉದ್ಯಾನವನದಂಚಿನಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಿದಲ್ಲಿ ಕಾಡಾನೆಗಳ ಉಪಟಳ ಕಡಿಮೆಯಾಗಲಿದೆ ಎಂಬ ತಜ್ಞರ ಅಭಿಪ್ರಾಯ ಪಡೆದು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದ ಐದು ಉದ್ಯಾನವನದಂಚಿನಲ್ಲಿ ಸಿದ್ದರಾಮಯ್ಯರ ಅವಧಿಯಲ್ಲಿ 200 ಕೋಟಿರೂ ಯೋಜನೆಯೇನೋ ಆರಂಭಿಸಲಾಯಿತು.

Advertisement

ಅಂದಿನ ಅರಣ್ಯ ಸಚಿವ ರಮನಾಥ ರೈ ಯೋಜನೆಗೆ ಚಾಲನೆ ನೀಡಿದ್ದರು. ಸರಕಾರದ ಯೋಜನೆ ಆಮೆ ವೇಗದಲ್ಲಿ ಕಾರ್ಯಾಂಭಿಸಿದ್ದರಿಂದಾಗಿ ಇನ್ನೂ ಸಹ ಪೂರ್ಣಗೊಳ್ಳದ ಕಾರಣ ಯೋಜನೆಯ ವೆಚ್ಚವೂ ಹೆಚ್ಚಿದೆ.

ವೀರನಹೊಸಹಳ್ಳಿ ವಲಯದ ಎಚ್.ಡಿ.ಕೋಟೆ ತಾಲೂಕಿನ ಸೊಳ್ಳೆಪುರ ಹಾಗೂ ಆನೆಚೌಕೂರು ವಲಯದ ಕೆಲ ಬಾಗದಲ್ಲಿ ಇನ್ನೂ ತಡೆಗೋಡೆ  ನಿರ್ಮಾಣವಾಗಬೇಕಿದ್ದು. ಈ ಭಾಗದಿಂದ ಕಾಡಾನೆಗಳು ಹೊರ ದಾಟಿ ಬಂದು ಫಸಲು ನಾಶ ಪಡಿಸುತ್ತಿವೆ. ರಾತ್ರಿ ವೇಳೆ ಅಟ್ಟಣೆ ನಿರ್ಮಿಸಿ ಕಾವಲು ಕಾದರೂ ಪ್ರಯೋಜನಕ್ಕೆ ಬರುತ್ತಿಲ್ಲ.

ಮಂಗಳವಾರವೂ ಕಾಡಾನೆ ಉಪಟಳ ಮುಂದುವರೆದಿದ್ದು ಪೆಂಜಳ್ಳಿ ಗ್ರಾಮದ ಬಾಳೆ ತೋಟದಲ್ಲಿ ಮೇವು ತಿಂದು ಪಕ್ಕದ  ಜಮೀನಿನಲ್ಲಿ ಮೂರು ಸಲಗಗಳು ಬೀಡು ಬಿಟ್ಟಿದ್ದು. ಸಂಜೆ ನಂತರ ಕಾಡಿಗಟ್ಟಲಾಗುವುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಡಿಆರ್ ಎಫ್ ಓ ದ್ವಾರಕಾನಾಥ್ ನೇತೃತ್ವದ ತಂಡ ಆನೆ ಜಮೀನಿನಿಂದ ಹೊರ ದಾಟದಂತೆ ಕಾವಲು ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next