ಮಂಡ್ಯ: ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಭೀಮನ ಕಿಂಡಿ ಬೆಟ್ಟದ ಅರಣ್ಯ ಪ್ರದೇಶದಿಂದ ಬಂದ 4 ಕಾಡಾನೆಗಳು ಶಾಗ್ಯ ಗ್ರಾಮದ ರೈತರ ಜಮೀನಿಗೆ ದಾಳಿ ಮಾಡಿ ಬೆಳೆಯನ್ನು ನಾಶಪಡಿಸಿವೆ.
ಶಾಗ್ಯ ಗ್ರಾಮದ ಬಳಿ ಇರುವ ಶಿಂಷಾ ನದಿಯಲ್ಲಿ ಬೆಳಗಿನ ಜಾವ ಶಿಂಷಾ ನದಿಯಲ್ಲಿ ಈಜುತ್ತಿದ್ದ ಆನೆಗಳನ್ನು ಕಂಡ ಗ್ರಾಮಸ್ಥರು, ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.
ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಆನೆಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬೆಳ್ತೂರು ಗ್ರಾಮದ ರೈತ ಗೋಪಾಲ್ ಮಾತನಾಡಿ, ಭೀಮನ ಕಿಂಡಿ ಬೆಟ್ಟದಿಂದ 4 ಕಾಡಾನೆಗಳು ಬೆನಮನಹಳ್ಳಿ, ನಿಟ್ಟೂರು, ಶಾಗ್ಯ, ಯತ್ತಂಬಾಡಿ ಮಾರ್ಗವಾಗಿ ಬಂದ ಕಾಡಾನೆಗಳು ಶಿಂಷಾ ನದಿಯಲ್ಲಿ ನೀರು ಕುಡಿದು ಈಜಿ ರೈತರ ಬೆಳೆಗಳನ್ನು ತುಳಿದು ನಾಶ ಮಾಡಿವೆ. ಆದ್ದರಿಂದ ಅರಣ್ಯ ಇಲಾಖೆಯವರು ಅತಿ ಶೀಘ್ರದಲ್ಲೇ ಫಸಲು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ತನಿಖಾಧಿಕಾರಿಗಳ ಸೋಗಿನಲ್ಲಿ ವಾಹನ ಅಡ್ಡಗಟ್ಟಿ ವ್ಯಾಪಾರಿಯಿಂದ 14 ಲಕ್ಷ ರೂ ಅಪಹರಿಸಿದ ತಂಡ