ಆನೇಕಲ್: ರಾತ್ರಿ ವೇಳೆ ಬಂದ ಕಾಡಾನೆಗಳು ಸೀಮೆ ಬದನೆಕಾಯಿ ತೋಟಕ್ಕೆ ನುಗ್ಗಿದ್ದರಿಂದ ಸೀಮೆ ಬದನೆಕಾಯಿ, ಚಪ್ಪರ ಸಂಪೂರ್ಣ ನೆಲ ಕಚ್ಚಿದ್ದು, ರೈತರ ಕೈ ಸೇರಬೇಕಿದ್ದ ತರಕಾರಿ ಬೆಳೆ, ರಾಗಿ ಬೆಳೆ ನಷ್ಟವಾಗಿರುವುದರಿಂದ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ತಾಲೂಕಿನ ಬನ್ನೇರುಘಟ್ಟ ಸಮೀಪದ ಬೂತಾನಹಳ್ಳಿ ಯಲ್ಲಿ ಜರುಗಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಬೂತಾನಹಳ್ಳಿಯ ವೆಂಕಟೇಶ್ ಎಂಬುವರ ಸೀಮೆ ಬದನೆ ತೋಟಕ್ಕೆ ನುಗ್ಗಿದ್ದ ಆನೆಗಳು ಅಲ್ಲಿದ್ದ ತೆಂಗಿನ ಸಸಿ, ಪರಂಗಿ ಗಿಡಗಳು ತಿಂದು ತುಳಿದು ಹಾನಿ ಮಾಡಿ, ಪಕ್ಕದಲ್ಲಿದ್ದ ಐದಾರು ರೈತರ ರಾಗೀ ಕುಪ್ಪೆ ಗಳನ್ನು ಚೆಲ್ಲಾಡಿ, ಒಂದಷ್ಟು ತಿಂದು ತುಳಿದು ಹಾನಿ ಮಾಡಿ ರೈತರಿಗೆ ನಷ್ಟ ಉಂಟು ಮಾಡಿದ್ದು, ಇದರಿಂದ ರೈತರಿಗೆ ತೀವ್ರ ನಷ್ಟವಾಗಿದ್ದರಿಂದ ಅರಣ್ಯ ಇಲಾಖೆ ವಿರುದ್ಧ ರೈತರು ಕಿಡಿ ಕಾರಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮುಂಜಾನೆ ಕಾಡಿನ ಮುಖ್ಯರಸ್ತೆಯಲ್ಲಿ ಆನೆಗಳು ಸಂಚರಿಸುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಪ್ರತಿ ದಿನ ಡೇರಿಗೆ ಹಾಲು ಹಾಕಲು ಕಷ್ಟವಾಗಿದೆ. ಈ ಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿದೆ.
ಯಾವುದೇ ಅನುಕೂಲ ಆಗುತ್ತಿಲ್ಲ: ರೈತ ವೆಂಕಟೇಶ್ ಮಾತನಾಡಿ, ಹತ್ತಾರು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದೇವೆ. ತರಕಾರಿ, ರಾಗಿ, ಭತ್ತದ ಬೆಳೆ ಕೈಸೇರುವ ಹಂತದಲ್ಲಿ ಆನೆಗಳು ದಾಳಿ ಮಾಡಿ ಕೈ ಸೇರಿ ಬೇಕಿದ್ದ ಬೆಳೆ ಸಿಗದೆ ಬದುಕು ಸಂಕಷ್ಟಕ್ಕೆ ಸಿಲುಕ ಬೇಕಾಗಿದೆ. ಈ ಬಗ್ಗೆ ಪ್ರತಿ ಸಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಅನು ಕೂಲ ವಾಗುತ್ತಿಲ್ಲ ಎಂದು ಅರಣ್ಯಾಧಿಕಾರಿ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಸ್ಪಷ್ಟನೆ: ಕಾಡಾನೆಗಳು ಹಳ್ಳಿಗಳತ್ತ ತಡೆಗೆ ಪ್ರಮುಖವಾಗಿ ರೈಲ್ವೆ ಬ್ಯಾರಿ ಕೇಡ್ ಪರಿಹಾರವಾಗಿದೆ. ಕೆಲ ಭಾಗದಲ್ಲಿ ಇನ್ನು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಿಲ್ಲ ದಿರುವುದರಿಂದ ಕಾಡಾ®ೆಗಳು ಹಳ್ಳಿಗಳತ್ತ ಬಂದು ಹೋಗು ತ್ತಿವೆ. ಆದಷ್ಟು ಬೇಗ ಉಳಿದ ಕಾಡಂಚಿ ನಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಿದರೆ ಆನೆಗಳ ಹಾವಳಿ ತಡೆಯ ಬಹುದು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾ ನವನದ ಉಪ ಅರಣ್ಯ ಸಂರಕ್ಷಣ್ಯಾಧಿಕಾರಿ ಪ್ರಭಾಕರ್ ಸ್ಪಷ್ಟನೆ ನೀಡಿದರು.