Advertisement

Belthangady ಧುಂಬೆಟ್ಟು : ಮತ್ತೆ ಕಾಡಾನೆ ಹಾವಳಿ

11:19 PM Sep 25, 2023 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಧುಂಬೆಟ್ಟು ಕಜೆ ಪರಿಸರದಲ್ಲಿ ರವಿವಾರ ಸಂಜೆ 7.30ರ ಸುಮಾರಿಗೆ ಕಾಡಾನೆಗಳ ಹಿಂಡು ಕಂಡು ಬಂದಿದ್ದು ಸ್ಥಳೀಯರಲ್ಲಿ ಭೀತಿ ನೆಲೆಸಿದೆ.

Advertisement

ಆನೆಗಳು ತೋಟಕ್ಕೆ ನುಗ್ಗುತ್ತಿರುವುದನ್ನು ಸ್ಥಳೀಯರು ಗಮನಿಸಿ ಪಟಾಕಿ ಸಿಡಿಸಿ, ಬೆಂಕಿ ಹಾಕಿ ಕಾಡಾನೆಗಳ ಹಿಂಡನ್ನು ಓಡಿಸಿದರು. ಸುಧಾಕರ, ಸುಂದರ ಗೌಡ ಮೊದಲಾದವರ ತೋಟಗಳ ಅಡಿಕೆ ಮರ, ಬಾಳೆ ಗಿಡಗಳನ್ನು ಮುರಿದು ಹಾಕಿ ಕಡಿರುದ್ಯಾವರದ ಪಣಿಕ್ಕಲ್ಲು ಕಾಡಿನತ್ತ ತೆರಳಿವೆ. ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ ಮೂರು ಆನೆಗಳು ಇದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಧುಂಬೆಟ್ಟು ಹಾಗೂ ನಳೀಲು ಸಂಪರ್ಕ ಪ್ರದೇಶದಲ್ಲಿ ಆನೆ ಕಂದಕ ಇದೆ. ಆದರೆ 20ರಿಂದ 30 ಮೀ. ಪ್ರದೇಶದಲ್ಲಿ ನಿರ್ಮಾಣ ನಡೆದಿಲ್ಲ. ಸಮೀಪದಲ್ಲಿ ನದಿ ಇದ್ದು ಅಲ್ಲಿಂದಲೂ ದಾಟಿ ಬರುವ ಸಾಧ್ಯತೆ ಇದೆ. ಅಗತ್ಯ ಇರುವಲ್ಲಿ ಆನೆ ಕಂದಕ ನಿರ್ಮಿಸಿದರೆ ಉಪಟಳ ತಡೆ ಸಾಧ್ಯ ಎಂಬುದು ಸ್ಥಳೀಯರ ಅಭಿಪ್ರಾಯ.

 

Advertisement

Udayavani is now on Telegram. Click here to join our channel and stay updated with the latest news.

Next