Advertisement

ವಿಮಾನದಲ್ಲಿ ವೈಫೈ: ಅರ್ಜಿ ಆಹ್ವಾನ

06:30 AM Dec 16, 2018 | Team Udayavani |

ಹೊಸದಿಲ್ಲಿ: ವಿಮಾನಗಳಲ್ಲಿ ವೈಫೈ ಒದಗಿಸು ವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಅಂತಿಮಗೊಳಿಸಿದ್ದು, ಸೇವೆ ಒದಗಿಸುವ ಕಂಪನಿಗಳು ಇನ್ನು ಅನುಮತಿ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಟೆಲಿಕಾಂ ಇಲಾಖೆಯು ಸೇವೆ ಪೂರೈಕೆ ದಾರರಿಗೆ ಅನುಮತಿ ನೀಡಲಿದ್ದು, ಈ ಕಂಪನಿಗಳು ವಿಮಾನಯಾನ ಸಂಸ್ಥೆಗಳಿಗೆ ವೈಫೈ ಸೇವೆಯನ್ನು ಒದಗಿಸಲಿವೆ. ಏರ್‌ಟೆಲ್‌, ಜಿಯೋ ಸೇರಿದಂತೆ ಬಹುತೇಕ ಎಲ್ಲ ಬೃಹತ್‌ ಟೆಲಿಕಾಂ ಕಂಪನಿಗಳು ಈ ಸೇವೆ ಒದಗಿಸಲು ಆಸಕ್ತಿ ವಹಿಸಿವೆ ಎನ್ನಲಾಗಿದೆ.  ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವೈಫೈ ಒದಗಿಸಲು ಇನ್ನಷ್ಟೇ ಸೂಕ್ತ ಸೌಲಭ್ಯವನ್ನು ಕಲ್ಪಿಸಬೇಕಿದ್ದು, ಹೊಸದಾಗಿ ಖರೀದಿ ಮಾಡಲಾಗುತ್ತಿರುವ ವಿಮಾನಗಳಲ್ಲಿ ಈಗಾಗಲೇ ವೈಫೈ ಸಂಕೇತಗಳನ್ನು ಸ್ವೀಕರಿಸುವ ಮತ್ತು ಬಿತ್ತರಿಸುವ ಸೌಲಭ್ಯವಿದೆ. 

Advertisement

Udayavani is now on Telegram. Click here to join our channel and stay updated with the latest news.

Next