ಕೊಳ್ಳೇ ಗಾಲ: ಶ್ರೀಮಂತರು ಮತ್ತು ಮಧ್ಯ ಮ ವರ್ಗದ ಭಕ್ತಾದಿಗಳು ದೇವಾಲಯಗಳಿಗೆ ಹರಕೆ ಹೊತ್ತು ವಿಶೇಷ ಪೂಜೆಸಲ್ಲಿಸಲು ಬಂದ ವೇಳೆ ತಮಗೆ ಅನಿಸಿದಷ್ಟು ಕಾಣಿಕೆ ಹುಂಡಿಗೆ ಹಾಕುತ್ತಾರೆ. ಆದರೆ, ಪಟ್ಟ ಣ ದಲ್ಲಿ ಓರ್ವ ಅನಾಮಧೇಯ ಮಹಿಳಾ ಭಕ್ತೆ ದೇವರಿಗೆ ಬರೆದಿರುವ ಪತ್ರ ನಾರಾಯಣ ಸ್ವಾಮಿ ದೇವಾಲ ಯದ ಹುಂಡಿಯಲ್ಲಿ ದೊರೆತಿದ್ದು ಕುತೂಹಲ ಮೂಡಿಸಿದೆ.
ತಹಶೀಲ್ದಾರ್ ಕೆ.ಕು ನಾಲ್ ಅವರ ಆದೇಶದಂತೆ ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ನಾರಾಯಣ ಸ್ವಾಮಿ ದೇಗುಲದ ಹುಂಡಿ ಕಳೆದ 2ವರ್ಷಗಳಿಂದ ಎಣಿಕೆಯಾಗದೆ ವಿಳಂಬವಾಗಿತ್ತು. ಅದನ್ನು ಕೂಡಲೇ ಎಣಿಕೆ ಮಾಡುವಂತೆ ನೀಡಿದ ಆದೇಶದ ಮೇರೆಗೆ ತಾಲೂಕು ಕಚೇರಿ ಸಿಬ್ಬಂದಿ ಹುಂಡಿ ಎಣಿಕೆ ವೇಳೆ ಮಹಿಳಾ ಭಕ್ತೆ ತನ್ನ ಬಳಿ ಕಳುಹಿಸಿ ಕೊಡು ಎಂದು ಬರೆದು ಹುಂಡಿ ಯಲ್ಲಿ ಹಾಕಿರುವ ಪತ್ರ ಅಧಿಕಾರಿಗಳ ಕೈ ಸೇರುತ್ತಿ ದ್ದಂತೆ ಅಚ್ಚ ರಿಗೊಂಡಿದ್ದಾರೆ.
ಹುಂಡಿ: ಹುಂಡಿ ಎಣಿಕೆ ನಡೆದು ಹುಂಡಿ ಯಲ್ಲಿ 179304 ರೂ. ಸಂಗ್ರಹ ವಾಗಿದೆ. ಹುಂಡಿ ಎಣಿಕೆ ವೇಳೆ ದೇವಾಲಯದ ಅಧಿಕಾರಿ ಶ್ರೀಧರ್, ರಾಜಸ್ವ ನಿರೀ ಕ್ಷಕ ರಾಜಶೇಖರ್, ಗ್ರಾಮ ಲೆಕ್ಕಿಗ ರಾಜೇಂದ್ರ ಮತ್ತು ಸಿಬ್ಬಂದಿ ವರ್ಗ ಇದ್ದರು.
ಹುಂಡಿ ಎಣಿಕೆ ವೇಳೆ ಅಚ್ಚರಿ ತಂದ ದೇವರಿಗೆ ಬರೆದ ಪತ್ರ ದೇವರಿಗೆ ಬರೆದ ಪತ್ರದಲ್ಲಿ ಇರೋದೇನು?
ನಿನ್ನ ಮೇರೆ ಭಾರ ಹಾಕಿರುವೆ ದೇವರೇ ನಿನ್ನನ್ನು ನಂಬಿರುವ ನನಗೆ ಜೀವನದಲ್ಲಿ ಕಷ್ಟ ನೋವು ಅನುಭವಿಸಿ ಸಾಕಾಗಿದೆ. ಇನ್ನು ಮುಂದೆ ನನ್ನ ಗಂಡ ಸುಖ ಮತ್ತು ನೆಮ್ಮದಿಯಿಂದ ನೋಡಿಕೊಳ್ಳುವತರ ಮಾಡು, ಜೀವನ ಪೂರ್ತಿ ತಾಯಿ, ಗಂಡ ನನ್ನ ಜೊತೆಯಲ್ಲಿ ನನ್ನ ಕಣ್ಣೆದುರಿಗೆ ಇರುವಂತೆ ಮಾಡು. ನಾನು ನನ್ನ ಗಂಡನನ್ನು ಎಲ್ಲೇ ಕರೆದುಕೊಂಡು ಹೋಗು ಎಂದರೂ ಕರೆದುಕೊಂಡು ಹೋಗಬೇಕು, ನಾ ಏನೇ ತಂದು ಕೊಡು ಎಂದರೂ ತಂದು ಕೊಡುವ ಶಕ್ತಿ ನೀನು ಕೊಡು ದೇವರೆ, ಸಂಸಾರ ಕಲಹ ದಿಂದ ಹೊರ ಹೋಗಿರುವ ಪತಿ ಮರಳಿ ಮನೆಗೆ ಬರುವಂತೆ ಕರುಣಿಸು. ನನ್ನ ಗಂಡನಿಂದ ಇನ್ನು ಮುಂದೆ ನನಗೆ ಸುಖ ಶಾಂತಿ ನೆಮ್ಮದಿ ನೀ ಈ ಕ್ಷಣದಿಂದಲೇ ಕೂಡಲೇ ಕೊಡ ಬೇಕು.