Advertisement

Maharashtra;ಪತ್ನಿ ಮೇಲೆ ಹಲ್ಲೆ ನಡೆಸಿ, ಪತಿ ಆತ್ಮಹತ್ಯೆ

11:36 PM Jul 15, 2023 | Team Udayavani |

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶನಿವಾರ 41 ವರ್ಷದ ವ್ಯಕ್ತಿಯೊಬ್ಬ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಥಾಣೆಯ ಬದ್ಲಾಪುರ್‌ದಲ್ಲಿ ಈ ಘಟನೆ ನಡೆದಿದೆ.

Advertisement

ಸುನಿಲ್‌ ಮತ್ತು ಅರ್ಚನ ಎಂಬ ದಂಪತಿ ನಡುವೆ ಜಗಳವಾಗಿದೆ. ಸುನಿಲ್‌ ಅಹೆರ್‌ ತನ್ನ ಪತ್ನಿ ಅರ್ಚನ ಅವರನ್ನು ದೊಣ್ಣೆಯಿಂದ ಹಿಗ್ಗಾ-ಮುಗ್ಗಾ ಬಾರಿಸಿದ್ದಾನೆ. ಆಕೆಯ ತಲೆಗೆ ತೀವ್ರವಾದ ಗಾಯಗಳಾಗಿವೆ. ಅನಂತರ ಸುನಿಲ್‌ ತನ್ನ ಪತ್ನಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಬಳಿಕ ವಾಪಸು ಮನೆಗೆ ಬಂದು ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ದಂಪತಿಯ ಇಬ್ಬರು ಸಣ್ಣ ಪ್ರಾಯದ ಪುತ್ರರು ಮನೆಯಲ್ಲೇ ಇದ್ದರು. ಮಕ್ಕಳು ನೆರೆಹೊರೆಯವರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next