Advertisement

2020ರಲ್ಲಿ ಇಸವಿಯನ್ನು ಶಾರ್ಟ್ ಕಟ್ ಆಗಿ ಬರೆಯುವ ಮುನ್ನ ಇದನ್ನೊಮ್ಮೆ ಓದಿ!

10:16 AM Dec 28, 2019 | Hari Prasad |

ನವದೆಹಲಿ: 2019ನೇ ಕ್ಯಾಲೆಂಡರ್ ವರ್ಷ ಮುಗಿಯುತ್ತಾ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ 2020 ಹೊಸ ವರ್ಷದ ಆಗಮನವಾಗಿಲಿದೆ. 21ನೇ ಶತಮಾನದಲ್ಲಿ ನಾವು 20 ವರ್ಷಗಳನ್ನು ಈಗಾಗಲೇ ಕ್ರಮಿಸಿಯಾಗಿದೆ ಎನ್ನುವಲ್ಲಿಗೆ 2020 ಮಹತ್ವದ್ದಾಗುತ್ತದೆ. ಆದರೆ ವ್ಯಾವಹಾರಿಕವಾಗಿ ನೋಡುವುದಾದಲ್ಲಿ 2020 ನಾವೆಲ್ಲರೂ ಬಹಳ ಜಾಗರೂಕತೆಯಿಂದ ಇರಬೇಕಾದ ವರ್ಷವೂ ಹೌದು. ಇದು ಹೇಗೆ ಅನ್ನುತ್ತೀರೋ, ಹಾಗಾದರೆ ಮುಂದೆ ಓದಿ…

Advertisement

ಸಾಮಾನ್ಯವಾಗಿ ನಾವು ದಾಖಲೆಗಳಲ್ಲಿ ಅಥವಾ ಇನ್ಯಾವುದೋ ಸ್ಲಿಪ್ ಗಳಲ್ಲಿ ದಿನಾಂಕ/ತಿಂಗಳು/ಇಸವಿ ಬರೆಯುವಾಗ ಸಾಮಾನ್ಯವಾಗಿ ಒಂದು ವಿಧಾನವನ್ನು ಅನುಸರಿಸುತ್ತೇವೆ ಉದಾಹರಣೆಗೆ 27-12-19 ಇಲ್ಲಿ 19 ಎನ್ನುವುದು 2019ರ ಶಾರ್ಟ್ ಕಟ್ ಆಗಿದೆ. ಆದರೆ ವಿಚಿತ್ರವೆಂದರೆ ಮುಂದಿನ ವರ್ಷ ನೀವು ಈ ರೀತಿಯಾಗಿ ಬರೆಯುವ ಮುನ್ನ ಒಮ್ಮೆ ಆಲೋಚಿಸಬೇಕಾಗುತ್ತದೆ.

ಯಾಕೆಂದರೆ ಒಂದುವೇಳೆ ನೀವು 01-01-20 ಎಂದು ಬರೆದಿರಿ ಎಂದಿಟ್ಟುಕೊಳ್ಳಿ ಆವಾಗ 20ರ ಎದುರು ಯಾವ ಇಸವಿಯನ್ನಾದರೂ ನಮೂದಿಸಲು ಸಾಧ್ಯವಿರುತ್ತದೆ! 01-01-20ನ್ನು ತಿದ್ದಿ 2000 ನೇ ಇಸವಿಯಿಂದ 2019ರವರೆಗೆ ಅಥವಾ 2020ರಿಂದ 2099ರವರೆಗೆ ಯಾವ ಇಸವಿಯನ್ನು ಬೇಕಾದರೂ ಬರೆದುಕೊಳ್ಳಲು ಅವಕಾಶವಿರುತ್ತದೆ!

ಹಾಗಾಗಿ ಚೆಕ್ ಗಳಲ್ಲಿ, ಒಪ್ಪಂದ ಪತ್ರಗಳಲ್ಲಿ ಅಥವಾ ಇನ್ಯಾವುದೇ ಪ್ರಮುಖ ದಾಖಲೆಗಳಲ್ಲಿ ಮುಂದಿನ ವರ್ಷ ಇಸವಿ ಬರೆಯುವಾಗ ಎಚ್ಚರಿಕೆಯಿಂದಿರಿ ಮತ್ತು ಪೂರ್ಣ ಇಸವಿಯನ್ನು ಬರೆಯುವುದು ಕಾನೂನು ಸಹಿತ ಎಲ್ಲಾ ದೃಷ್ಟಿಯಿಂದಲೂ ಸುರಕ್ಷಿತ.

Advertisement

Udayavani is now on Telegram. Click here to join our channel and stay updated with the latest news.

Next