Advertisement

ನಮ್ಮಲ್ಲಿ ಜಾತಕ ಹೊಂದಾಣಿಕೆ ಆಗುತ್ತಿಲ್ಲ ಏಕೆ?

04:00 AM Jun 17, 2017 | |

ಭವಿಷ್ಯದತ್ತ ಯೋಚಿಸದೆ, ಹೆಜ್ಜೆ ಇಡುತ್ತಿರುವ ಪ್ರಸ್ತುತ ವರ್ತಮಾನದಲ್ಲಿ ಬಹಳ ತಾಪತ್ರಯಗಳನ್ನು ಎದುರಿಸಬೇಕಾಗಿ ಬರುತ್ತದೆ. ಪವಿತ್ರವಾದ ಗಂಗಾನದಿ ವಿಪರೀತವಾಗಿ ಮಲಿನವಾಗಿದೆ. ಕೈಲಾಸ ಪರ್ವತವು ಹಸಿರು ರಂಜಿತವಾದ ಭಾರತದ ಸ್ಥಿತಿ ಬರಡಾಗಿರುವುದರಿಂದ ತನ್ನ ಅಂತಃಸತ್ವವನ್ನು ಕಳೆದುಕೊಂಡಿದೆ. ಜಗತ್ತಿಗೇ ಮಾದರಿಯಾಗಿದ್ದ ವೈವಾಹಿಕ ಚೌಕಟ್ಟನ್ನು ಹಿಂದಿನ ಬಲಾಡ್ಯತೆಯಿಂದ ಕಾಪಾಡುವಲ್ಲಿ ಶಕ್ತಿ ಹೀನವಾಗುತ್ತಿದೆ. ನಮ್ಮ ಶತಶತಮಾನಗಳ ಕಾಲ ಚಲಾವಣೆಯಲ್ಲಿದ್ದ ಮಾತೃಶಕ್ತಿಗೆ ಪ್ರಕೃತಿ ಹಾಗೂ ಶಿವಶಕ್ತಿಗೆ ಚ್ಯುತಿ ಎದುರಾಗುತ್ತಿದೆ. ಜಾತಕದ ಹೊಂದಾಣಿಕೆಗಳು ಸೋಲುತ್ತಿವೆ.

Advertisement

ಭಾರತದಲ್ಲಿ ವೈವಾಹಿಕ ಜೀವನದ ಸುಭದ್ರತೆಗಾಗಿ ಸಮಾಜ ಬಹಳಷ್ಟು ಕಾಳಜಿ ಪೂರೈಸುತ್ತಿತ್ತು. ಈಗ ಸಮಾಜ ಅವಿಭಾಜ್ಯ ಕುಟುಂಬದ ವ್ಯವಸ್ಥೆಯನ್ನು ಮರೆತಿದೆ. ಮರೆತರೆ ಬೇಸರವಿಲ್ಲ. ಆದರೆ ಪುಟ್ಟ ಕುಟುಂಬದಲ್ಲಿ ವಾಸ್ತವವಾಗಿ ದೊಡ್ಡ ರೀತಿಯ ಶಾಂತಿ, ಸಮಾಧಾನವನ್ನು ಗಂಡ ಹೆಂಡತಿ ಹಾಗೂ ಮಕ್ಕಳು ಪಡೆಯಬಹುದಿತ್ತು. ಇನ್ನೂ ಬಹು ಮಟ್ಟಿಗಿನ ಜೀವನದ ಸಂದರ್ಭದ ಸಾರ್ಥಕತೆಯನ್ನು ಪಡೆಯ ಬಹುದಿತ್ತು. ಅವಿಭಜಿತ ಕುಟುಂಬ ವ್ಯವಸ್ಥೆಯಲ್ಲಿಯೂ ಸೋಲು ಕಾಣುವಂತಾಯ್ತು. ಶಿಕ್ಷಣದ ಮಟ್ಟ ಏರಿದೆ, ಹಣದ ಹರಿದಾಟ ಜಾಸ್ತಿಯಾಗಿದೆ. ಜೀವನದ ಐಷಾರಾಮಕ್ಕಾಗಿ ವ್ಯವಸ್ಥೆಗಳು ಸುಧಾರಿಸಿವೆ. ನನ್ನ ಕುಟುಂಬ ನನ್ನ ಸುಖ ಎಂಬ ಧ್ಯೇಯ ವಾಕ್ಯದೊಡನೆ ಮುಂದುವರೆಯಲು ಯಾವ ಅಡತಡೆಗಳೂ ಇಲ್ಲವಾಗಿದೆ. ಆದರೂ ಏಕೆ ಸಮಾಜ ಸೋಲುತ್ತಿದೆ? ಜನಜೀವನ ಒತ್ತಡದಲ್ಲಿದೆ. ಸುಖ ಇದೆಯೇ? ಎಂದು ಕೇಳಿಕೊಂಡರೆ ಅದು ಇಲ್ಲ ಎಂಬ ಉತ್ತರ ತರುತ್ತದೆಯೇ ವಿನಾ “ಹೌದು’ ಎಂಬ ಉತ್ತರ ಬರುತ್ತಿಲ್ಲ. 

ಜಾತಕದ ಹೊಂದಾಣಿಕೆಗಳು ಸೋಲುತ್ತಿವೆ
ಮೊದಲು ಸ್ತ್ರೀಯರು ಇರುವ ಮನೆಯ ಮಕ್ಕಳ ಉಸ್ತುವಾರಿ ವಹಿಸಿಕೊಳ್ಳುವ ಮಾತೃತ್ವ ಮತ್ತು ರಕ್ಷಣಾತ್ಮಕ, ಧನಾತ್ಮಕ ವಾತಾವರಣ ನಿರ್ಮಿಸುವ, ಒಂದರ್ಥದಲ್ಲಿ ದೈವಾಂಶ ಸಂಭೂತ ಎನ್ನುವ ಪರಾತ್ಪರ ಅಂಶ ಹೊಂದಿರುತ್ತಿದ್ದರು. ಅವಿವೇಕಿಗಳಾದ ಕೆಲವು ಗಂಡಸರು ಸ್ತ್ರೀಯರನ್ನು ನರಳಿಸಿದ ಉದಾಹರಣೆಗಳೇನೂ ಇಲ್ಲವೇ ಇಲ್ಲ ಎಂದಲ್ಲ. ಆದರೆ ಇದೀಗ ಭಾರತವೂ ಒಂದು ರೀತಿಯ ಆಧುನಿಕತೆಗೂ ಪೂರ್ತಿ ತೆರೆದುಕೊಂಡಿರದ ಹಿಂದಿನ ಪರಂಪರೆಯ ಸತ್ವವನ್ನು ಪೂರ್ತಿ ಹಿಡಿದಿರಿಸಿಕೊಂಡಿರಲೂ ಸಾಧ್ಯವಾದ ಘಟ್ಟದಲ್ಲಿದೆ. ಭಾರತದ ಕೆಲವು ಪವಿತ್ರ ಭಾಗಗಳು ಕಲ್ಮಶವನ್ನು ಅಂತರ್ಗತ ಮಾಡಿಕೊಳ್ಳುತ್ತಾ, ಭವಿಷ್ಯದತ್ತ ಯೋಚಿಸದೆ, ಹೆಜ್ಜೆ ಇಡುತ್ತಿರುವ ಪ್ರಸ್ತುತ ವರ್ತಮಾನದಲ್ಲಿ ಬಹಳ ತಾಪತ್ರಯಗಳನ್ನು ಎದುರಿಸಬೇಕಾಗಿ ಬರುತ್ತದೆ. ಪವಿತ್ರವಾದ ಗಂಗಾನದಿ ವಿಪರೀತವಾಗಿ ಮಲಿನವಾಗಿದೆ. ಕೈಲಾಸ ಪರ್ವತವು ಹಸಿರು ರಂಜಿತವಾದ ಭಾರತದ ಸ್ಥಿತಿ ಬರಡಾಗಿರುವುದರಿಂದ ತನ್ನ ಅಂತಃಸತ್ವವನ್ನು ಕಳೆದುಕೊಂಡಿದೆ. ಜಗತ್ತಿಗೇ ಮಾದರಿಯಾಗಿದ್ದ ವೈವಾಹಿಕ ಚೌಕಟ್ಟನ್ನು ಹಿಂದಿನ ಬಲಾಡ್ಯತೆಯಿಂದ ಕಾಪಾಡುವಲ್ಲಿ ಶಕ್ತಿ ಹೀನವಾಗುತ್ತಿದೆ. ನಮ್ಮ ಶತಶತಮಾನಗಳ ಕಾಲ ಚಲಾವಣೆಯಲ್ಲಿದ್ದ ಮಾತೃಶಕ್ತಿಗೆ ಪ್ರಕೃತಿ ಹಾಗೂ ಶಿವಶಕ್ತಿಗೆ ಚ್ಯುತಿ ಎದುರಾಗುತ್ತಿದೆ. ಜಾತಕದ ಹೊಂದಾಣಿಕೆಗಳು ಸೋಲುತ್ತಿದೆ. 

ಜಾತಕದ ಹೊಂದಾಣಿಕೆ ತೀರಾ ಮುಖ್ಯವೇ? 
ಆಧುನಿಕವಾದುದನ್ನು ಪ್ರತಿಹಂತದಲ್ಲಿಯೂ ಸ್ವೀಕರಿಸ ಹೊರಟ ನಾವು ಬದುಕನ್ನು ಸ್ವೀಕರಿಸುವ ದೃಷ್ಟಿಯಿಂದ ಸ್ವೀಕರಿಸಿದ್ದರೆ ಒಳಿತಿರುತ್ತಿತ್ತು. ಭಾರತ ದೇಶ ಮುಖ್ಯವಾಗಿ  ಕರ್ಮಭೂಮಿ. ದೇವಾನುದೇವತೆಗಳು ಭಾರತಕ್ಕೆ ಬಂದಿದ್ದರಿಂದ ಶ್ವೇತವರಾಹ ಕಲ್ಪ ಎಂದು ನಮ್ಮ ಭಾರತ ಅಖಂಡವಾಗಿ ಗುರುತಿಸಿಕೊಂಡಿತ್ತು. ಗಂಗಾ, ಯಮುನಾ ಹಾಗೂ ಸಿಂಧೂ ನದಿಗಳ ಸಂಗಮದ ಭೂಭಾಗದಲ್ಲಿ ಯಜ್ಞಯಾಗಾದಿಗಳನ್ನು ನಡೆಸುತ್ತಿದ್ದರು. ದೇವತೆಗಳನ್ನು ಪ್ರತಿನಿಧಿಸುವ ಗಂಗೆ, ಸೂರ್ಯ ಮಂಡಲವನ್ನು ಪ್ರತಿನಿಧಿಸುವ ಯಮುನೆ ಹಾಗೂ ವಿಶಾಲವಾದ ಮನಸ್ಸಿನೊಂದಿಗೆ ಪ್ರಕೃತಿ ಪುರುಷ ಶಿವ-ಪಾರ್ವತಿ, ವಿಷ್ಣು ಮಹಾಲಕ್ಷಿ$¾, ಬ್ರಹ್ಮ ಮತ್ತು ಶಾರದೆಯರನ್ನು ಗೌರವಿಸಿ ಆರಾಧಿಸುತ್ತಿದ್ದಸಿಂಧೂ ತೀರದ ಜನರು. ಈ ಜನಸಮೂಹ ಭೂಮಿಯ ಉಳಿವಿಗಾಗಿ ಬೇಡಿಕೊಳ್ಳುತ್ತಿದ್ದ ಸಿಂಧೂನದಿ ತಟಗಳ ನಾಗರೀಕತೆ ಮಾನವೀಯ ಮೌಲ್ಯಗಳನ್ನು ಗಹನವಾದ ಪಾಂಡಿತ್ಯದೊಂದಿಗೆ ವೇದ ಉಪನಿಷತ್ತು ಹಾಗೂ ಈ ರೀತಿಯ ಜಾnನ ಸಂಬಂಧಿ ಉಪವೇದಗಳನ್ನು ಗೌರವಾದರಗಳಿಂದ  ಕಾಪಾಡಿಕೊಂಡು ಬಂದಿತ್ತು. ಸಾಮಾನ್ಯರನ್ನು ತಲುಪಲು ಸುಲಭವಾದ ಪುರಾಣಗಳು ಕತೆಯ ರೂಪದಲ್ಲಿ ವಿಶ್ವದ ಬಗೆಗಿನ ಎಲ್ಲಾ ಜಾnನವನ್ನೂ ಒದಗಿಸಿಕೊಡುತ್ತಿತ್ತು. ಆಧುನಿಕ ಜಾnನದ ಬಹುತೇಕ ಸಿದ್ಧಾಂತಗಳೆಲ್ಲಾ ವೇದ ಉಪನಿಷತ್ತುಗಳಲ್ಲಿ, ನಮ್ಮ ಪುರಾಣದ ಕತೆಗಳಲ್ಲಿ ಸರಳವಾಗಿ ಅಡಕಗೊಂಡಿದ್ದನ್ನು ಈಗಲೂ ನಾವು ಅರಿಯಬಹುದಾಗಿದೆ. ಆಧುನಿಕ ಎಂದು ಕರೆಸಿಕೊಳ್ಳುವ ನಮ್ಮ ಮನಸ್ಸು ತಾಳ್ಮೆಯಿಂದ ಇವನ್ನು ಓದಿ ಅರ್ಥೈಸಿಕೊಂಡರೆ ಹಲವು ಸಂಗತಿಗಳನ್ನು ಬಹು ಹಿಂದೆಯೇ ನಾವು ಕಂಡುಕೊಂಡಿದ್ದ ರೀತಿಗೆ ಬೆರಗು ಉಂಟಾಗದೆ ಇರಲಾರದು. ಆದರೆ ವ್ಯವಧಾನದಿಂದ ನಾವು ಓದಬೇಕು.  

ನಮ್ಮ ನಮ್ಮ ಮಿತಿಗಳ ಅರಿವಿರದೇ ಹೋದರೆ ಕಾದಾಟ ಅನಿವಾರ್ಯ
 ಹೊಸ ಮಾರ್ಗ ಬೇಕು, ಹಳತು ನಾಶವಾಗಬಾರದು. ಆಧುನಿಕತೆ ಮೊಟಕು ಗೊಳ್ಳಬಾರದು. ನಮ್ಮ ಮಕ್ಕಳು ಒಂದು ತೆರೆನಾದ ವಿದ್ಯಾಭ್ಯಾಸ ಹಾಗೂ ಅರಿವಿನ ದಾರಿಗೆ ತೆರೆದುಕೊಳ್ಳುತ್ತಿದ್ದಾರೆ. ಆದರೆ ಸಾತ್ವಿಕವಾದುದು, ಸಂಸ್ಕೃತಿಯ ನೆಲೆಯಲ್ಲಿ ಸಿಗಬೇಕಾದದ್ದು ಅನಿವಾರ್ಯವಿದೆ. ಅದು ಸಮತೋಲನ ಕಳೆದುಕೊಳ್ಳುತ್ತಿದೆ. ಬೆಳಗ್ಗೆ ಗಂಡ ಹೆಂಡತಿ ಇಬ್ಬರೂ ಅವರವರ ಕೆಲಸಕ್ಕೆ ಹೋಗುವ ಅವಸರ. ಒಂದನ್ನೇ ಗಮನಿಸಿ. ನಮ್ಮ ಭಾರತೀಯ ಪರಂಪರೆಯ ಗಟ್ಟಿನೆಲೆ ಶಿಥಿಲಗೊಳ್ಳುತ್ತಿರುವ ವಿಚಾರದ ಸುಳಿವು ಬೆಳಗಿನ ವೇಳೆ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕಾಗಿ ಹೊರಗೆ ಹೊರಡಬೇಕಾದ ತರಾತುರಿಯ ಹಿನ್ನೆಲೆಯಲ್ಲಿ ಸಿಗುತ್ತದೆ.

Advertisement

ನಿಜ, ಆದಾಯದ ಮಟ್ಟ ಏರಿದೆ. ಬದುಕಿನ ಅರ್ಥವಂತಿಕೆಯ ಮಟ್ಟ ಕುಸಿದಿದೆ. ಅರ್ಥಸ್ಥಿತಿ  ಸುಧಾರಿಸಿದರೂ ಜೀವನದ ಅರ್ಥಕ್ಕೆ ಸವಕಳಿ ಬಂದಿದೆ . ಅರ್ಥವಿರದ ಜೀವನ ಅರ್ಥದ ಬಲ ಒದಗಿಯೂ ಸೋತಿದೆ. 
ಹಾಗಾದರೆ ಆಖೈರಾಗಿ ನಮ್ಮ ಸಮಾಜದ ವ್ಯವಸ್ಥೆಯನ್ನು ನಾವು ಹೇಗೆ ಸುವ್ಯವಸ್ಥಿತ ಹಂತಕ್ಕೆ ಒಯ್ಯಬಹುದು? ಕುಟುಂಬದ ವ್ಯವಸ್ಥೆ ಸರಿಯಾದಾಗ ಸಮಾಜದ ವ್ಯವಸ್ಥೆ ಸರಿ ಹೋಗುತ್ತದೆ. ನಮ್ಮ ಶಕ್ತಿಯೇ ಯಾವ ಬಾಹ್ಯ ಆಕ್ರಮಣ, ಸುಲಿಗೆ ದಗಾಕೋರತನಗಳ ನಡುವೆಯೂ ಭಾರತೀಯತೆಯನ್ನು ಒಂದು ಆತ್ಮಶಕ್ತಿಯನ್ನಾಗಿ ರೂಪಿಸಿಕೊಂಡು ಬಂದದ್ದು. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬ ಧ್ಯೇಯ ವಾಕ್ಯದೊಂದಿಗೆ. ಈ ವಾಕ್ಯದ ನೆಲೆಯಲ್ಲಿ ನಮಗೆ ದೊರೆತ ಸಂಸ್ಕಾರದ ನಿಕ್ಷೇಪ ಈಗ ಕರಗುತ್ತಾ ಹೋಗಿದೆ. ಯಾವ ದಾಳಿಗೂ ಘಾಸಿಗೊಂಡಿರದಿದ್ದ ಭಾರತೀಯರ ಸಂಸ್ಕಾರ ಈಗ ಜಾಗತೀಕರಣದ ಸಂದರ್ಭದಲ್ಲಿ ಕರಗುತ್ತಿದೆ ಯಾಕೆ?

ಹೊಂದಾಣಿಕೆ ಇಲ್ಲದ ಮದುವೆಗಳು, ಅಹಂಗಳು
ಜಾತಕ ಪರೀಕ್ಷೆಗಳನ್ನು ಅಪ್ಪ ಅಮ್ಮ ತಮ್ಮ ಮಕ್ಕಳಿಗಾಗಿ ನಡೆಸುತ್ತಲೇ ಇಲ್ಲ ಎಂದೇನೂ ಅರ್ಥವಲ್ಲ. ಕುಂಡಲಿ ಜೋಡಿಸಿ, ಕುಂಡಲಿಗಳ ಹೊಂದಾಣಿಕೆಗಾಗಿ ಜೋತಿಷಿಗಳನ್ನು ಸಂಪರ್ಕಿಸುತ್ತಲೇ ಇರುತ್ತಾರೆ. ಆದರೆ ಈ ಹೊಂದಾಣಿಕೆ ತಾರ್ಕಿಕ ಚೌಕಟ್ಟುಗಳನ್ನು ಹೊಸಕಾಲದ ವ್ಯಾಪ್ತಿಯ ಆಕೃತಿಯೋ, ಕೃತಿಯೋ ಈ ನೆಲೆಯನ್ನು ಗಮನಿಸಿ. ಈ ನೆಲೆಯ ಆಧಾರದ ಮೇಲೆ ಹೆಣ್ಣುಗಂಡಿನ ಅಹಂಗಳನ್ನು ಲೆಕ್ಕಹಾಕಿ ನಂತರ ಉಳಿಯುವ ಶಾಂತಿ ಸಮಾಧಾನದ ಬದುಕಿನ ಅಸಲೀ ಸಂಗತಿಗಳೇನು ಎಂಬುದನ್ನು ಸೂಕ್ತವಾಗಿ ತಿಳಿಯಬೇಕು.
  ಆ ಕೆಲಸಕ್ಕೆ ಸೇರಬೇಕು ಎಂದೋ ಒಂದು ದಿನ ಗಂಡ ಕೆಲಸ ಬಿಡುವಂತಾದಾಗ ಕೆಲಸದಲ್ಲಿರುವ ಹೆಂಡತಿ ಗಂಡನಿಗೆ ಸಾಲ ನೀಡುವ ಸಂದರ್ಭ ಬರಬಾರದು. ಹೆಂಡತಿ ಕೆಲಸದಲ್ಲಿ ಇರದಿರುವಾಗ ನಿನ್ನ ಗಳಿಕೆಯೇನು ಎಂಬ ಪ್ರಶ್ನೆ ಎದ್ದೇಳಬಾರದು. ಲಗ್ನಗಳು ಸ್ವರ್ಗದಲ್ಲಿ ನಿಶ್ಚಿತಗೊಂಡಿರುತ್ತದೆ ಎಂಬ ನಂಬಿಕೆ ಇರಬೇಕು. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವ ಕಾಲ ಈಗಿಲ್ಲ. ಒಂದೇ ಸುಳ್ಳು ಕೂಡಾ ಬದುಕನ್ನು ಹಾಳು ಮಾಡುವ ದಿನಗಳಿವು.
ಈಗ ಗಂಡ ಹೆಂಡತಿ ಮಕ್ಕಳು ಅಷ್ಟೇ ಕುಟುಂಬವಾಗಿರುವುದರಿಂದ ಮಕ್ಕಳ ಎದುರೇ ಕಾದಾಡುತ್ತಾರೆ. ಮಕ್ಕಳೂ ಗೊಂದಲಗೊಳ್ಳುತ್ತಾರೆ. ಈ ವಿಚಾರದಲ್ಲಿ ಜಾತಕ ಹೊಂದಾಣಿಕೆ ಮಾಡುವ ಜ್ಯೋತಿಷಿಗಳು‡, ಜಾತಕ ಹೊಂದಾಣಿಕೆಯನ್ನು ಹೇಗೋ ಮಾಡಿ ಮುಗಿಸಿಕೊಂಡು ಬರುವ ತಂದೆತಾಯಂದಿರು ಹೆಚ್ಚು ಜವಾಬ್ದಾರಿ ನಿರ್ವಹಿಸಬೇಕು. 

ಅನಂತ ಶಾಸ್ತ್ರೀ   

Advertisement

Udayavani is now on Telegram. Click here to join our channel and stay updated with the latest news.

Next