Advertisement

ಸಿರಾಜ್ ಫಿಟ್ ಇರುವಾಗ ಉಮೇಶ್ ಯಾದವ್ ಯಾಕೆ?:ರೋಹಿತ್ ಶರ್ಮಾ ಹೇಳಿದ್ದೇನು?

10:44 PM Sep 18, 2022 | Team Udayavani |

ಮೊಹಾಲಿ: ಕೋವಿಡ್ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯಿಂದ ವೇಗಿ ಮೊಹಮ್ಮದ್ ಶಮಿ ಹೊರಗುಳಿಯುವುದರೊಂದಿಗೆ, 34 ವರ್ಷದ ಉಮೇಶ್ ಯಾದವ್ ಬದಲಿ ಆಟಗಾರನಾಗಿ ತಂಡಕ್ಕೆ ಅಚ್ಚರಿಯ ಕರೆಯನ್ನು ಪಡೆದಿರುವುದಕ್ಕೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಉಮೇಶ್ ಯಾದವ್ ಕೇವಲ ಏಳು ಟಿ 20 ಗಳನ್ನು ಆಡಿದ್ದಾರೆ, 2019 ರಲ್ಲಿ ಭಾರತಕ್ಕಾಗಿ ಕೊನೆಯ ಬಾರಿಗೆ ಆಡಿದ್ದರು. ಹಲವಾರು ಯುವ ಆಯ್ಕೆಗಳು ಮತ್ತು ಮೊಹಮ್ಮದ್ ಸಿರಾಜ್ ಅವರಂತಹವರು ಫಿಟ್ ಮತ್ತು ಲಭ್ಯವಿದ್ದು, ಉಮೇಶ್ ಅವರ ಆಯ್ಕೆಯು ಹಲವರ ಹುಬ್ಬುಗಳನ್ನು ಮೇಲೇರಿಸುವಂತೆ ಮಾಡಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅನುಭವಿ ವೇಗಿಯ ಪರ ಮಾತನಾಡಿದ್ದು, ಉಮೇಶ್ ಯಾದವ್ ಅವರ ಐಪಿಎಲ್ 2022 ರ ಪ್ರದರ್ಶನವನ್ನು ಉಲ್ಲೇಖಿಸಿದರು. ಸಿರಾಜ್ ಅವರನ್ನು ತಂಡಕ್ಕೆ ಏಕೆ ಕರೆಯಲಿಲ್ಲ ಎಂಬುದನ್ನು ಅವರು ಬಹಿರಂಗಪಡಿಸಿದರು.

“ಕೆಲವು ಆಯ್ಕೆಗಳಿದ್ದವು, ಆದರೆ ಅವರಲ್ಲಿ ಪ್ರಸಿದ್ಧ್ ಕೃಷ್ಣ ನಂತಹ ಕೆಲವರು ಗಾಯಗೊಂಡಿದ್ದಾರೆ” ಎಂದು ರೋಹಿತ್ ಮೊಹಾಲಿಯಲ್ಲಿ ಮಂಗಳವಾರ ಮೊದಲ ಟಿ 20 ಪಂದ್ಯ ಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ಸಿರಾಜ್ ಕೌಂಟಿ ಆಡುತ್ತಿದ್ದಾರೆ, ಅವರನ್ನು ವಾಪಾಸ್ ಕರೆಯಲು ಬಯಸುವುದಿಲ್ಲ, ಬಹುಶಃ ಒಂದು ಅಥವಾ ಎರಡು ಕೌಂಟಿ ಪಂದ್ಯಗಳನ್ನು ಆಡಬಹುದು. ಅವರನ್ನು ಕರೆಯುವುದು ನ್ಯಾಯೋಚಿತವಲ್ಲ” ಎಂದು ರೋಹಿತ್ ವಿವರಿಸಿದರು.

Advertisement

ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಟೀಮ್ ಇಂಡಿಯಾ ವೇಗಿ ವಾರ್ವಿಕ್‌ಶೈರ್ ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

ಸರಣಿಗೆ ಮುಂಚೆಯೇ ಶಮಿ ಕೋವಿಡ್‌ಗೆ ತುತ್ತಾಗಿರುವುದು “ದುರದೃಷ್ಟಕರ” ಎಂದು ಹೇಳಿದ ಶರ್ಮಾ , ಈ ತಿಂಗಳ ಆರಂಭದಲ್ಲಿ ಏಷ್ಯಾ ಕಪ್‌ನಲ್ಲಿ ಅನಾರೋಗ್ಯಕ್ಕೆ ಒಳಗಾದ ನಂತರ ಅವೇಶ್ ಖಾನ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಫಿಟ್‌ನೆಸ್ ದೃಷ್ಟಿಕೋನದಿಂದ, ಅವರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದರು.

ಉಮೇಶ್ ಯಾದವ್ ಭಾರತಕ್ಕಾಗಿ ಸಾಕಷ್ಟು ಟಿ20 ಕ್ರಿಕೆಟ್ ಆಡಿಲ್ಲ ಎಂಬ ಆತಂಕವನ್ನು ರೋಹಿತ್ ದೂರ ಮಾಡಿ, ದೀರ್ಘ ಕಾಲದಿಂದ ಬೌಲಿಂಗ್ ಮಾಡುತ್ತಿರುವ ಉಮೇಶ್, ಶಮಿಯಂತಹ ವೇಗಿಗಳನ್ನು ಪರಿಗಣಿಸಲು ಯಾವುದೇ ಸ್ವರೂಪದಲ್ಲಿ ಆಡುವ ಅಗತ್ಯವಿಲ್ಲ ಎಂದರು.

ನಾವು ಗುಣಮಟ್ಟವನ್ನು ಅರ್ಥಮಾಡಿಕೊಂಡಿದ್ದೇವೆ, ಅವರು ಈ ಸ್ವರೂಪವನ್ನು ಆಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಹೊಸ ಹುಡುಗರಿಗೆ ಅವಲಂಬಿಸಿರುತ್ತದೆ. ಆದರೆ ಉಮೇಶ್ ಮತ್ತು ಶಮಿಯಂತಹವರು ಫಿಟ್ ಆಗಿದ್ದರೆ  ಸರಿ, ಅವರನ್ನು ಮರಳಿ ಕರೆಯಲಾಗುವುದು. ಅವರ ಫಾರ್ಮ್ ನೋಡುವ ಅಗತ್ಯವಿಲ್ಲ, ಐಪಿಎಲ್‌ನಲ್ಲಿ ಉಮೇಶ್ ಹೇಗೆ ಬೌಲಿಂಗ್ ಮಾಡಿದರು ಎಂಬುದನ್ನು ನಾವು ನೋಡಿದ್ದೇವೆ ಎಂದು ರೋಹಿತ್ ಹೇಳಿದರು.

ವಿಶ್ವಕಪ್ ಗಮನದಲ್ಲಿಟ್ಟುಕೊಂಡು ನಾವು ಪ್ರಯತ್ನಿಸಿದ್ದೇವೆ. ನಮ್ಮ ಚಿಂತನೆಯ ಪ್ರಕ್ರಿಯೆಯಲ್ಲಿ ನಾವು ತುಂಬಾ ಸ್ಪಷ್ಟವಾಗಿರುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next