Advertisement

Goa ಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಎಂಟು ಗಂಟೆ ತಡವಾಗಿದ್ದೇಕೆ?

11:51 AM Jan 17, 2024 | Team Udayavani |

ಪಣಜಿ: ಜನವರಿ 14 ರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣ ದಟ್ಟವಾದ ಮಂಜಿನಿಂದ ಆವರಿಸಿತ್ತು. ಬೆಳಿಗ್ಗೆ 4 ರಿಂದ 9 ಗಂಟೆಯವರೆಗೆ ಗೋಚರತೆ ಶೂನ್ಯವಾಗಿತ್ತು. ಇದರಿಂದಾಗಿ ಅಂದು ಈ 5 ಗಂಟೆಗಳಲ್ಲಿ ಒಂದೇ ಒಂದು ವಿಮಾನವೂ ಇಲ್ಲಿಂದ ಟೇಕಾಫ್ ಆಗದೆ ಕೇವಲ 15 ವಿಮಾನಗಳು ಮಾತ್ರ ಇಳಿಯಲು ಸಾಧ್ಯವಾಗಿತ್ತು.

Advertisement

ಆದಾಗ್ಯೂ, ಜನವರಿ 14 ರಂದು ಮಂಜು ತೆರವುಗೊಂಡ ತಕ್ಷಣ ವಿಮಾನ ಬೆಳಿಗ್ಗೆ 9 ಗಂಟೆಯ ನಂತರ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಪ್ರಾರಂಭಿಸಿತು. ಹೀಗಿರುವಾಗ ದೆಹಲಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 8.40ಕ್ಕೆ ಗೋವಾಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಎಂಟು ಗಂಟೆ ತಡವಾಗಿದ್ದೇಕೆ? ಎಂಬ ಪ್ರಶ್ನೆ ಈಗ ಎದ್ದಿದೆ.

ಹವಾಮಾನ ಅನುಕೂಲಕರವಾಗಿದ್ದಾಗ ವಿಮಾನ ಏಕೆ ಟೇಕಾಫ್ ಆಗಲಿಲ್ಲ ಎಂಬುದು ತನಿಖೆಯ ನಿಜವಾದ ವಿಷಯವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಇಂಡಿಗೋ ವಿಮಾನ 8 ಗಂಟೆಗಳ ಕಾಲ ಏಕೆ ವಿಳಂಬ ಮಾಡಿದೆ ಎಂದು ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 9 ಗಂಟೆಗೆ ಹವಾಮಾನ ಶುಭ್ರವಾಗಿತ್ತು. ಸಾಮಾನ್ಯವಾಗಿ ಅಂತಹ ಸಂದರ್ಭಗಳಲ್ಲಿ ವಿಮಾನ ಯಾನ ಸಂಸ್ಥೆಗಳು ತಮ್ಮ ಹಾರಾಟದ ಟೇಕ್ ಆಫ್ ಮಾಡಲು ಬಯಸುತ್ತವೆ. ಈ ಅವಧಿಯಲ್ಲಿ, ಪೈಲಟ್‍ಗಳು 8 ಗಂಟೆಗಳಿಗಿಂತ ಹೆಚ್ಚು ಕಾಲ ಕರ್ತವ್ಯದಲ್ಲಿ ಇರುವಂತಿಲ್ಲ ಎಂದು ಏರ್ ಟ್ರಾಫಿಕ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ವಿಮಾನ ವಿಳಂಬವಾದರೆ ಕರ್ತವ್ಯದ ಅವಧಿ ಮುಗಿಯುವ ಭೀತಿಯಿಂದ ಇತರೆ ಸಿಬ್ಬಂದಿಯನ್ನು ಕರೆಸಬೇಕಾಗಿದೆ. ಇಂಧನ ಕೊರತೆಯು ಸಹ ಒಂದು ಅಂಶವಾಗಿದೆ. ಇದು ಆಗಾಗ್ಗೆ ವಿಮಾನಗಳನ್ನು ವಿಳಂಬಗೊಳಿಸುತ್ತದೆ ಎಂದು ಕೂಡ ಹೇಳಲಾಗುತ್ತಿದ್ದು, ವಿಳಂಬಕ್ಕೆ ನಿಖರ ಕಾರಣ ತಿಳಿದು ಬರಬೇಕಿದೆ.

Advertisement

ದೆಹಲಿಯಿಂದ ಗೋವಾಕ್ಕೆ ಆಗಮಿಸಬೇಕಿದ್ದ ವಿಮಾನ ತಡವಾದ ಹಿನ್ನೆಲೆ ಪ್ರಯಾಣಿಕರೊಬ್ಬರು ಪೈಲಟ್ ಮೇಲೆ ಹರಿಹಾಯ್ದಿದ್ದಾರೆ.

ಈ ಘಟನೆಯನ್ನು ಗಮನಿಸಿ, ಪ್ರಯಾಣಿಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಯಿತು ಮತ್ತು ನಂತರ ತಕ್ಷಣದ ಜಾಮೀನು ಮೇಲೆ ಅವರು ಬಿಡುಗಡೆಗೊಂಡಿದ್ದಾರೆ.

ಅಲ್ಲದೆ, ಜನವರಿ 14 ರಂದು ಗೋವಾದಿಂದ ದೆಹಲಿಗೆ ಇಂಡಿಗೋ ವಿಮಾನ ಸುಮಾರು 16 ಗಂಟೆಗಳ ನಂತರ ದೆಹಲಿಗೆ ಬಂದಿತು. ಪ್ರತಿಕೂಲ ಹವಾಮಾನದ ಕಾರಣ ನೀಡಿ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ರನ್‍ವೇ ಬಳಿ ಕುಳಿತು ಊಟ ಮಾಡುತ್ತಿರುವ ವೀಡಿಯೊ ಕೂಡ ವೈರಲ್ ಆಗಿದ್ದು, ಶುಭ್ರ ವಾತಾವರಣದಲ್ಲಿಯೂ ಇಂಡಿಗೋ ವಿಮಾನ ಏಕೆ ತಡವಾಯಿತು ಎಂಬುದು ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next