Advertisement

Kolkata Doctor Case:ತಡರಾತ್ರಿ ಎಫ್‌ ಐಆರ್‌ ದಾಖಲಿಸಿದ್ದೇಕೆ? ಸುಪ್ರೀಂಕೋರ್ಟ್‌ ಕೆಂಡಾಮಂಡಲ

12:27 PM Aug 20, 2024 | Team Udayavani |

ನವದೆಹಲಿ: ಕೋಲ್ಕತಾದ ಪ್ರತಿಷ್ಠಿತ ಆರ್‌ ಜಿ ಕರ್‌(RG Kar Hospital) ಆಸ್ಪತ್ರೆಯಲ್ಲಿ ಸಂಭವಿಸಿದ ವೈದ್ಯೆ ಮೇಲಿನ ಅ*ತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌(Supreme court) ಸೋಮವಾರ ವಿಚಾರಣೆ ನಡೆಸಿದ್ದು, ಸಿಜೆಐ( CJI) ಡಿವೈ ಚಂದ್ರಚೂಡ್‌, ಜಸ್ಟೀಸ್‌ ಜೆಬಿ ಪರ್ಡಿವಾಲಾ, ಜಸ್ಟೀಸ್‌ ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ, ಆರ್‌ ಜಿ ಕರ್‌ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ವಿಫಲವಾದ ಪಶ್ಚಿಮಬಂಗಾಳ ಸರ್ಕಾರಕ್ಕೆ ಚಾಟಿ ಬೀಸಿ, ಮಹಿಳಾ ವೈದ್ಯರ ರಕ್ಷಣೆ ಕುರಿತು ಕಳವಳ ವ್ಯಕ್ತಪಡಿಸಿದೆ.

Advertisement

ಆರ್‌ ಜಿ ಕರ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್‌, ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲರು ಏನು ಮಾಡುತ್ತಿದ್ದರು? ವೈದ್ಯೆಯ ಘಟನೆಯನ್ನು ಆತ್ಮಹತ್ಯೆ ಎಂದು ಹೇಗೆ ಹೇಳಿದ್ದರು? ತಡರಾತ್ರಿವರೆಗೂ ಎಫ್‌ ಐಆರ್‌ ದಾಖಲಿಸಲಿಲ್ಲ ಯಾಕೆ? ಎಂದು ಪ್ರಶ್ನಿಸಿದೆ.

ಕೋಲ್ಕತಾ ಆರ್‌ ಜಿ ಕರ್‌ ಆಸ್ಪತ್ರೆಗೆ ಸಾವಿರಾರು ಜನರು ನುಗ್ಗಿ ದಾಂಧಲೆ ನಡೆಸಿರುವುದರ ಹಿಂದೆ ಅಪರಾಧ ಕೃತ್ಯದ ಸ್ಥಳದ ಕುರುಹುಗಳನ್ನು ನಾಶಗೊಳಿಸುವ ಪ್ರಯತ್ನ ಇದಾಗಿದೆ ಎಂದು ಸುಪ್ರೀಂಕೋರ್ಟ್‌ ಅನುಮಾನ ವ್ಯಕ್ತಪಡಿಸಿದೆ.

ವೈದ್ಯರು ಪ್ರತಿಭಟನಾ ನಿರತರಾದ ಸಂದರ್ಭದಲ್ಲಿ ಸಾವಿರಾರು ಜನರು ಆಸ್ಪತ್ರೆಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಸಂದರ್ಭದಲ್ಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಸುಪ್ರೀಂಕೋರ್ಟ್‌ ಪೀಠ ಪ್ರಶ್ನಿಸಿದೆ.

Advertisement

ಕೋಲ್ಕತಾದ ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭವಿಸಿದ ತರಬೇತಿಯಲ್ಲಿದ್ದ ವೈದ್ಯೆ ಮೇಲಿನ ಅ*ತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ Suo motu(ಸ್ವಯಂ ಆಗಿ) ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜಿನ ಸೆಮಿನಾರ್‌ ಕೋಣೆಯಲ್ಲಿ ಆಗಸ್ಟ್‌ 9ರಂದು ಅ*ತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ವೈದ್ಯೆಯ ಮೃತದೇಹ ಪತ್ತೆಯಾದ ನಂತರ ತೀವ್ರ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗತೊಡಗಿತ್ತು. ಮರುದಿನ ಕೋಲ್ಕತಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಸೇವಕನೊಬ್ಬನನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next