Advertisement

Congress ವಿಪಕ್ಷದಲ್ಲಿದ್ದಾಗ ಕೋವಿಡ್ ಹಗರಣ ಬಗ್ಗೆ ಸುಮ್ಮನಿದ್ದಿದ್ದೇಕೆ?: ಬಿ.ಸಿ.ಪಾಟೀಲ್‌

08:29 PM Sep 01, 2024 | Team Udayavani |

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 14 ತಿಂಗಳ  ನಂತರ ಈಗ ಕೋವಿಡ್‌  ಸಂದರ್ಭದಲ್ಲಿ ಹಗರಣ ನಡೆದಿದೆ ತನಿಖೆ ಮಾಡುತ್ತೇವೆ ಎಂದರೆ ಏನರ್ಥ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೊನಾ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ಈಗ ಹೇಳುತ್ತಿರುವಂತಹವರೇ ವಿರೋಧ ಪಕ್ಷದಲ್ಲಿದ್ದಾಗ ಪ್ರಶ್ನಿಸಲಿಲ್ಲವೇಕೆ?  ಅವರಿಗೇನಾದರೂ ಪಾಲು ಇತ್ತಾ. ಯಾವ ಕಾರಣಕ್ಕೆ ಇಷ್ಟು ದಿನ ಸುಮ್ಮನಿದ್ದರು. ಬಿಚ್ಚುಡುತ್ತೇನೆ ಎಂದು ಹೇಳುತ್ತಿರುವವರು ಅದೇನು ಬಿಚ್ಚಿಡುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.

ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರಬಲ ಹೋರಾಟ ನಡೆಸಲಾಗುತ್ತಿದೆ. ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್‌ನವರು 136 ಶಾಸಕರಿದ್ದಾರೆ. ಆಪರೇಷನ್ ಕಮಲ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

90 ಶಾಸಕರಿಗೆ 100 ಕೋಟಿ ರೂ. ಸಾಧ್ಯವೇ: 
100 ಕೋಟಿಗೆ ಖರೀದಿ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರೇ ತಮ್ಮ ತಲೆಗೆ ತಾವೇ ಹಣ ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸಬೇಕು ಎನ್ನುವುದೇ ಆದರೆ 90 ಶಾಸಕರು ಬೇಕು. 90 ಶಾಸಕರಿಗೆ 100  ಕೋಟಿ ರೂ. ಇದೆಲ್ಲ ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿನವರಿಗೆ ಹೇಳುವುದಕ್ಕೆ ಯಾವುದೇ ಸರಿಯಾದ ಕೆಲಸ ಇಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next