Advertisement

ವಾಹನ ಮಾರಾಟ ಇಳಿಕೆ ಯಾಕೆ ?

10:05 AM Aug 03, 2019 | mahesh |

ಮಣಿಪಾಲ: ಆಟೋ ಮೊಬೈಲ್‌ ಮಾರುಕಟ್ಟೆಗಳ ಪಾಲಿಗೆ 2019 ಒಳ್ಳೆಯ ವರ್ಷವಾಗುವ ಲಕ್ಷಣಗಳು ಕಾಣುತ್ತಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಮಾರುಕಟ್ಟೆ ಕುಸಿತಗೊಂಡ ಮಾತುಗಳು ಕೇಳಿಬರುತ್ತಿದೆ. ಇತ್ತೀಚೆಗಿನ ತಿಂಗಳುಗಳಲ್ಲಿ ಬೇಡಿಕೆ ಕುಸಿದಿದೆ. ಈ 3 ವರ್ಷಗಳಲ್ಲಿ ಸುಮಾರು ವ್ಯಾಪಾರಿಗಳು ಹಿನ್ನಡೆ ಅನುಭವಿಸಿದ್ದಾರೆ. ಶೋ ರೂಂ ಮುಚ್ಚಿದ್ದಾರೆ. ಇದರಿಂದ ಸುಮಾರು 32 ಸಾವಿರ ಜನರು ಉದ್ಯೋಗವಿಲ್ಲದೇ ಮನೆಗೆ ತೆರಳಿದ್ದಾರೆ. ಇದರಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.

Advertisement

ಎಲ್ಲೆಲ್ಲಿ ಎಷ್ಟು
ಮಹಾರಾಷ್ಟ್ರದಲ್ಲಿ 84, ತಮಿಳುನಾಡು 35, ದಿಲ್ಲಿ 27, ಬಿಹಾರ 26 ಹಾಗೂ ರಾಜಸ್ಥಾನದಲ್ಲಿ 21 ಡೀಲರ್‌ಗಳು ಇದರ ಪರಿಣಾಮ ಎದುರಿಸಿದ್ದಾರೆ. ಇತರ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ. ಫೆಡರೇಶನ್‌ ಆಫ್ ಆಟೋಮೊಬೈಲ್‌ ಡೀಲರ್ ಅಸೋಶಿಯೇಶನ್‌ (ಊಅಈಅ)ನ ವರದಿ ಪ್ರಕಾರ 18 ತಿಂಗಳುಗಳಲ್ಲಿ ವ್ಯಾಪಾರ ಕ್ಷೀಣಗೊಂಡಿದೆ.

20.55 ಶೇ. ಇಳಿಕೆ
2020ರ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಉತ್ತರ ಪ್ರದೇಶದಲ್ಲಿ 2,93,905, ಮಹಾರಾಷ್ಟ್ರ 1,56,716 ಮತ್ತು ತಮಿಳುನಾಡಿನಲ್ಲಿ 1,49,698 ವಾಹನಗಳು ನೋಂದಣಿ ಮಾಡಿಕೊಂಡಿದೆ. ಸೋಸೈಟಿ ಆಫ್ ಇಂಡಿಯನ್‌ ಅಟೋಮೊಬೈಲ್‌ ಮ್ಯಾನುಫ್ಯಾಕ್ಚರ್ (ಖಐಅM) ವರದಿ ಪ್ರಕಾರ ಮೇ ಮತ್ತು ಜೂನ್‌ ತಿಂಗಳಲ್ಲಿ 20.55 ಶೇ. ಇಳಿಕೆ ಕಂಡಿದೆ. ಇದು ಸಹಜವಾಗಿ ವಾಹನ ತಯಾರಿಕ ಸಂಸ್ಥೆಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಗ್ರಾಹಕರು ಏಕಾಏಕಿ ಈ ನಡೆಯನ್ನು ಅನುಸರಿಸಲು ಏನು ಕಾರಣ ಎಂಬುದರ ಕುರಿತು ಚರ್ಚೆಗಳು ಆಗುತ್ತಿವೆ.

ಕಮರ್ಷಿಯಲ್‌
ಕಮರ್ಷಿಯಲ್‌ ವಾಹನಗಳ ಮೇಲೂ ಇದು ಪರಿಣಾಮ ಬೀರಿದೆ. 60,378ರಿಂದ 48,752ಕ್ಕೆ ಇಳಿದಿದೆ. ಅಂದರೆ ಕುಸಿತ 19.3 ಶೇಕಡ ಕುಸಿತ.

ಬೈಕ್‌ಗಳು
ಇತರ ವಾಹನಗಳಿಗೆ ಹೋಲಿಸಿದರೆ ದ್ವಿ ಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಅಲ್ಪ ಕುಸಿತ ಕಾಣಿಸಿಕೊಂಡಿದೆ. 13,94,770ರಿಂದ 13,24,822ಕ್ಕೆ ಇಳಿದಿದೆ. ಅಂದರೆ ಶೇ. 5 ಕುಸಿತ.

Advertisement

ಪ್ಯಾಸೆಂಜರ್‌
ಪ್ಯಾಸೆಂಜರ್‌ವಾಹನ ಗಳಾದ, ಕಾರುಗಳು ಮತ್ತು ಜೀಪ್‌ಗ್ಳ ವ್ಯಾಪರದಲ್ಲಿ 4.6ರಷ್ಟು ಕುಸಿತ ಕಂಡಿದೆ. 2,35,539ರಷ್ಟಿದ್ದ ಮಾರುಕಟ್ಟೆ 2,24,755ಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಆಟೋ ರಿಕ್ಷಾ
ಸಾರಿಗೆಯ ಮುಖ್ಯ ಕೀಲಿ ಕೈಯಾಗಿ ಕೆಲಸ ಮಾಡುತ್ತಿರುವ ಆಟೋ ರಿಕ್ಷಾ ಮಾರುಕಟ್ಟೆಯಲ್ಲೂ 2.8 ಶೇ. ಕುಸಿತ ಕಂಡಿದೆ. 51,133ರಿಂದ 48,447ಕ್ಕೆ ಇಳಿಕೆಯಾಗಿದೆ.

ಏನಿರಬಹುದು ಕಾರಣ?
ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬರಲಿದ್ದು, ಇದಕ್ಕೆ ಸರಕಾರ ಜಿಎಸ್‌ಟಿಯಿಂದ ವಿನಾಯಿತಿ ನೀಡಿದೆ. ಆದರೆ ಇಂಧನ ಕಾರುಗಳ ಜಿಎಸ್‌ಟಿಯಲ್ಲಿ ಯಾವುದೇ ರಿಯಾಯಿತಿಗಳು ಇಳಿಯಾಗಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕಾರು ಉದ್ಯಮಗಳಿಗೆ ಪೆಟ್ಟು ಬೀಳಲಾರಂಭವಾಗಿದೆ. ಗ್ರಾಹಕರು ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಿಲ್ಲ. ದರ ಇಳಿಕೆಗೆ ಗ್ರಾಹಕರು ಕಾಯುತ್ತಿದ್ದಾರೆ.

18 ವರ್ಷಗಳ ಬಳಿಕ ಇಷ್ಟೊಂದು ಇಳಿಕೆ
2001ರಲ್ಲಿ ಶೇ. 21.91 ಇಳಿಕೆ ಕಂಡಿದ್ದ ಮಾರುಕಟ್ಟೆ ಬಳಿಕ ಚೇತರಿಕೆ ಹಾದಿ ಕಂಡು ಕೊಂಡಿತ್ತು. ತನ್ನ 18 ವರ್ಷಗಳ ಭರ್ಜರಿ ಭರಾಟೆಯ ಬಳಿಕ ಏಕಾಏಕಿ ಇಳಿದಿದೆ.

·  2018ರ ಮಾರುಕಟ್ಟೆ 17,81,341 ಯುನಿಟ್‌

·  2019ರ ಮಾರುಕಟ್ಟೆ 16,46,776 ಯುನಿಟ್‌

(ಮಾಹಿತಿ: ಇಂಟರ್‌ನೆಟ್‌)

Advertisement

Udayavani is now on Telegram. Click here to join our channel and stay updated with the latest news.

Next