Advertisement
ಕಾಂಗ್ರೆಸ್ ಅಧಿ ಕಾರದಲ್ಲಿ ಇದ್ದಾಗ ರಾಜ್ಯ ವಾಣಿಜ್ಯ ಆಯೋಗದ ಶಿಫಾರಸ್ಸು ಸೇರಿಸಿ ಶೇ. 25 ಅನ್‌ಟೈಡ್ ಫಂಡ್ ನ್ನು ನಿಗದಿ ಪಡಿಸಲಾಗಿತ್ತು. ಇನ್ನೂ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟತೆ ತಲೆ ಎತ್ತಬಾರದು ಹಾಗೂ ಉತ್ತಮ ಆಡಳಿತ ಒದಗಿಸುವ ಉದ್ದೇಶದಿಂದ ಗ್ರಾಮಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವ ಧಿಯನ್ನು ಮೂವತ್ತು ತಿಂಗಳಿಗೆ ನಿಗದಿ ಮಾಡಲಾಗಿತ್ತು. ಜೊತೆಗೆ ಸದಸ್ಯರ ಭ್ರಷ್ಟಾಚಾರದಲ್ಲಿ ತೊಡಗಿದ್ದು ದಾಖಲೆ ಸಮೇತ ಸಾಬೀತಾದರೆ ಅವರ ಸದಸ್ಯತ್ವ ರದ್ದು ಮಾಡಲು ಅವಕಾಶ ಇತ್ತು. ಆದರೆ ಬಿಜೆಪಿ ಸರ್ಕಾರ ಪಂಚಾಯತ ರಾಜ್ ವಿಧೇಯಕ ಪಾಸ್ ಮಾಡುವ ಮೂಲಕ ಈ ಹಿಂದಿನ ಕಾಯಿದೆ ಜಾರಿಗೊಳಿಸಲು ಬಿಲ್ ಪಾಸ್ ಮಾಡಿದೆ ಎಂದು ವಿವರಿಸಿದರು.
Related Articles
Advertisement
ಬಿಜೆಪಿಯವರಿಗೆ ಚುನಾವಣೆ ಇದ್ದಾಗ ಮಾತ್ರ ಇಂತವೆಲ್ಲ ನೆನಪಿಗೆ ಬರ್ತಿವೆ. ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡದ ಸರ್ಕಾರ ಈ ಭಾಗದ ಅಭಿವೃದ್ಧಿ ಹೇಗೆ ತಾನೆ ಮಾಡುತ್ತದೆ. ಝೆಂಡಾ ಹಾರಿಸಲು ಮಾತ್ರ ಮಂತ್ರಿ ಎನ್ನುವಂತಾಗಿದೆ. ಈ ಭಾಗಕ್ಕೆ ಮಂತ್ರಿ ಇಲ್ಲದಿರುವುದರ ಜತೆಗೆ ಉಸ್ತುವಾರಿ ಸಚಿವರೂ ಇಲ್ಲದೇ ಇರುವುದರಿಂದ ಅಭಿವೃದ್ಧಿ ಬಗೆಗಿನ ಕಾಳಜಿ ನಿರೂಪಿಸುತ್ತದೆ ಎಂದರು. ಬಿಟ್ ಕಾಯಿನ್ ಪ್ರಮುಖ ಸ್ಕಾÂಮ್‌ನ ಪ್ರಮುಖ ಆರೋಪಿ ಶ್ರೀಕಿ ಎಲ್ಲಿದ್ದಾನೆ ಎನ್ನುವುದು ತಿಳಿಯುತ್ತಿಲ್ಲ. ಈಚೆಗೆ ಗೃಹ ಸಚಿವರೇ ಪೊಲೀಸ್ ವ್ಯವಸ್ಥೆ ಬಗ್ಗೆ ನಿಜವಾಗಿ ಹೇಳಿದ್ದಾರೆ. ಒಟ್ಟಾರೆ ಬಿಟ್ ಕ್ವಾಯಿನ್ ಸಂಬಂಧವಾಗಿ ಹತ್ತನೆ ತಾರೀಖೀನ ನಂತರ ಮಾಧ್ಯಮದ ಮುಂದೆ ಬರುತ್ತೇನೆ ಅದು ಭಾಗ ಮೂರು ಆಗಲಿದೆ ಎಂದು ಪ್ರಕಟಿಸಿದರು. ಕೊರೊನಾ ಮುಂದಿನ ಅಲೆಗೆ ಸಿದ್ದತೆಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಚಿವರಾದ ಸುಧಾಕರ್ ಅವರಿಗೆ ಪತ್ರ ಬರೆದು ಜೀನೋಂ ಸಿಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಒತ್ತಾಯಿಸಿದ್ದೇನೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಕ್ಸಿಜನ್ ಸಮರ್ಪಕವಾಗಿ ಸರಬರಾಜು ಮಾಡಿಲ್ಲ. ಯಾವುದೇ ಸಮರ್ಪಕ ತಯಾರಿ ಮಾಡಲು ವಿಫಲವಾಗಿರುವ ಸರ್ಕಾರ ಯುದ್ಧಕಾಲೇ ಶಸ್ತ್ರಭ್ಯಾಸ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂಟು ಶಾಸಕರು ಟೀಕಿಸಿದರು.
ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ಸಂಸದ ಡಾ| ಉಮೇಶ ಜಾಧವ ಅವರೊಬ್ಬ ಸಮಯ ಸಾಧಕ. ಟಿಕೇಟ್ ನೀಡಿ ಪ್ರಚಾರ ಮಾಡಿ ಗೆಲ್ಲಿಸಿದ ನಾಯಕರಾದ ಖರ್ಗೆ ಹಾಗೂ ಧರ್ಮಸಿಂಗ್ ಸಾಹೇಬರ ಬೆನ್ನಿಗೆ ಚೂರಿ ಹಾಕಿರುವ ಅವರಿಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯ ಅಭ್ಯರ್ಥಿ ಶಿವಾನಂದ ಪಾಟೀಲ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ ನೇಲೋಗಿ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ನೀಲಕಂಠರಾವ್ ಮೂಲಗೆ, ಮಾಜಿ ಮೇಯರ್ ಶರಣು ಮೋದಿ, ಈರಣ್ಣ ಝಳಕಿ, ಶಿವಾನಂದ ಹೊನಗುಂಟಿ ಮುಂತಾದವರಿದ್ದರು.
ಸ್ಥಳೀಯ ಶಾಸಕರ ಮೇಲೆ ವಿಶ್ವಾಸವಿಲ್ಲ
ಬಿ.ಜಿ ಪಾಟೀಲ ಅವರಿಗೆ ಸ್ಥಳೀಯ ಶಾಸಕರ ಸಹಕಾರವಿಲ್ಲ, ಜತೆಗೆ ವಿಶ್ವಾಸವಿಲ್ಲ. ಹೀಗಾಗಿ ಹುಬ್ಬಳ್ಳಿ ಮೂಲದ ಖಾಸಗಿ ಸಾರಿಗೆ ಸಂಸ್ಥೆಯ ನೌಕರರನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಕುರಿತು ಜಿಲ್ಲಾ ಧಿಕಾರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು. ನೋಟ್ ದೋ ಓಟ್ ಲೋ ಎನ್ನವ ಉಕ್ತಿಯನ್ನು ಪಾಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಅವರು ತಮ್ಮ ಅನುದಾನವನ್ನು ಹೇಗೆ ಎಲ್ಲಿ ಬಳಸಿಕೊಂಡಿದ್ದಾರೆ? ಎಷ್ಟು ಗ್ರಾಮಪಂಚಾಯತಿಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ತಿಳಿಸಲಿ. ಸ್ಥಳೀಯ ಸಂಸ್ಥೆಯ ಬಲವರ್ಧನೆಗೆ ಶಿವಾನಂದ ಪಾಟೀಲ ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಅವರು ಬಿ.ಜಿ ಪಾಟೀಲ ಅವರನ್ನು ಬಿಜಿನೆಸ್ ಬಿಜಿನೆಸ್ ಮ್ಯಾನ್ ಎಂದಿದ್ದೇವೆ ಹೊರತು ಅವರು ಭ್ರಷ್ಟರು ಎಂಬುದಾಗಿ ಹೇಳಿಲ್ಲ ಎಂದರು.