Advertisement

ಹಣೆಗೆ ತಿಲಕ ಏಕೆ ?

09:00 AM May 19, 2019 | Vishnu Das |

 

Advertisement

ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು, ಹೆಂಗಸರು ಎಂಬ ಭೇದವಿಲ್ಲದೆ ಹಿಂದೂಗಳು ತಿಲಕ ಇರಿಸಿಕೊಳ್ಳುವುದು ರೂಢಿ.

ಎರಡೂ ಹುಬ್ಬಿನ ಮದ್ಯದಿಂದ ಹಣೆಯ ಮಧ್ಯದವರೆಗೆ ಬೊಟ್ಟು ಇಟ್ಟುಕೊಳ್ಳ ಬಹುದು. ಯೋಗಶಾಸ್ತ್ರದ ಪ್ರಕಾರ ಈ ಭಾಗ ಶತಚಕ್ರಗಳಲ್ಲಿ ಒಂದಾದ ಆಜ್ಞಾ ಚಕ್ರವಿರುವ ಜಾಗ. ಈ ಸಿದ್ದಿಯ ಸಾಧನೆಗಾಗಿಯೋ ಎಂಬಂತೆ ಅಥವಾ ನಿರಂತರ ಈ ಭಾಗದ ಸ್ಪರ್ಶದಿಂದ ಸದಾ ಈ ವಿಷಯ ಜ್ಞಾಪಕದಲ್ಲಿ ಇರುವಂತೆ ಮತ್ತು ಅದರಿಂದ ಸಿದ್ಧಿಸುವಂತೆ ತಿಲಕ ಧರಿಸುವ ಕ್ರಮವನ್ನು ಹಿರಿಯರು ಮಾಡಿದ್ದಾರೆ.

ತಿಲಕಖರಣೆ ಮಂಗಳ ಸೂಚಕ. ಮುಖ ನೋಡಿ ಆಯಾ ಮನೆಯಲ್ಲಿ ಮಂಗಲವೋ ಅಮಂಗಲವೋ ತಿಳಿಯಬಹುದು. ಮನೆಯಲ್ಲಿ ದುಃಖದ ಸಂದರ್ಭ ಇದ್ದಾಗ, ಅಂಥ ಕಾರ್ಯಗಳು ನಡೆಯುವಾಗ ತಿಲಕವನ್ನು ಧರಿಸುವುದಿಲ್ಲ. ಬೇರೆ ಬೇರೆ ಸಂಪ್ರದಾಯದವರು ಆಯಾ ಸಂಪ್ರದಾಯಕ್ಕನುಸಾರವಾಗಿ ಉದ್ದವೋ, ಅದ್ದವೋ , ಮತ್ತಿತರ ರೀತಿಗಳಲ್ಲಿ ಬೊಟ್ಟು ಇಡುತ್ತಾರೆ. ದೇಹಗಳಲ್ಲಿ ಮುದ್ರೆಗಳನ್ನು ಧರಿಸುವುದಾಗಲಿ, ವಿವಿಧ ತಿಲಕಗಳನ್ನಿರಿಸುವುದಾಗಲಿ ವ್ಯವಹಾರದಲ್ಲಿ ಒಂದು ಪಂಥದ ಸೂಚಕವಾದರೂ, ಮೂಲದಲ್ಲಿ ವಿಶೇಷ ಅರ್ಥಗಳನ್ನು ಹೊಂದಿತ್ತು. ಆಯಾ ಪಂಥ ಸ್ಥಾಪಕರಿಗೆ ಇಂತಹ ಅನಿವಾರ್ಯತೆಗಳಿತ್ತೋ, ಇಲ್ಲವೋ ಗೊತ್ತಿಲ್ಲ. ದೇಹದ ಮೇಲೆ ಮುದ್ರೆ ಗುರುತುಗಳನ್ನು ನಾಮಗಳನ್ನು ಕಂಡಾಗ ಭಗವಂತನ ಸ್ಮರಣೆ ವ್ಯಕ್ತಿಗಾಗಬೇಕು. ಆತನ ಭಕ್ತನಾಗಿ, ಆತನಿಗಾಗಿ ನನ್ನ ಕರ್ತವ್ಯಗಳನ್ನು ನೆನಪಿಸಿಕೊಳ್ಳಲಿಗೊಸುಕರ ಈ ನಮ ಮುದ್ರೆಗಳನ್ನು ಧರಿಸಿ¨ªಾನೆ. ನಿಜವಾದ ಭಕ್ತ ನಾನಾಗಬೇಕು ಎಂದು ಅನಿಸಬೇಕು. ಭಸ್ಮ ಧಾರಣೆ ಮಾಡಿದವರಿಗೆ ಕಾಮನನ್ನು ಸುತ್ತು ಭಸ್ಮ ಮಡಿದ ಮುರಾರಿಯಾ ನೆನಪಾಗಿ ತಾವೂ ಕಾಮನೆಗಳನ್ನು ಜಯಿಸಲು ಯತ್ನಿಸಬೇಕು. ಶರೀರವು ಭಸ್ಮವಾಗತಕ್ಕ ಅಶಾಶ್ವತ ವಸ್ತು, ಶಾಶ್ವತವಾದ ಆತ್ಮಜ್ಞಾನ ನಮ್ಮ ಗುರಿ ಎಂಬರಿವು ಬರಬೇಕು ಎನ್ನುವುದು ಇದರ ಮರ್ಮ ಎಂದೆನಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next