ಹೊಸದಿಲ್ಲಿ: ಮುಂಬರುವ ಏಕದಿನ ವಿಶ್ವಕಪ್ ಗೆ ಬಿಸಿಸಿಐ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ 15 ಜನರ ತಂಡವನ್ನು ಪ್ರಕಟಿಸಲಾಗಿದೆ. ತಂಡದ ಆಯ್ಕೆಯ ಬಗ್ಗೆ ಹಲವರು ತಮ್ಮ ಪರ- ವಿರೋಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ಬೌಲರ್ ಮುತ್ತಯ್ಯ ಮುರಳೀಧರನ್ ಅವರು ಈ ಬಗ್ಗೆ ಮಾತನಾಡಿದ್ದು, ವಿಶ್ವಕಪ್ ನಲ್ಲಿ ಭಾರತಕ್ಕೆ ಇಬ್ಬರು ಸ್ಪಿನ್ನರ್ ಗಳು ಸಾಕು ಎಂದಿದ್ದಾರೆ.
“ಕೇವಲ ವೇರಿಯೇಶನ್ ಗಾಗಿ ನೀವು ತಂಡದಲ್ಲಿ ಮೂರು ಸ್ಪಿನ್ನರ್ ಗಳನ್ನು ಆಡಿಸಲು ಸಾಧ್ಯವಿಲ್ಲ. ನೀವು ಇಬ್ಬರನ್ನು ಮಾತ್ರ ಆಡಿಸಬಹುದು. ಜಡೇಜಾ ಆಲ್‌ರೌಂಡರ್ ಆಗಿ ಆಡುತ್ತಾರೆ ಮತ್ತು ಮತ್ತೊಬ್ಬರು ಆಡಬಹುದು” ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಭಾರತದ ವಿಶ್ವಕಪ್ ತಂಡದಲ್ಲಿ ಮೂವರು ಸ್ಪಿನ್ನರ್ ಗಳನ್ನು ಆಯ್ಕೆ ಮಾಡಲಾಗಿದೆ. ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು : ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್
ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಕಳಬಿಸಿದ ಮುತ್ತಯ್ಯ ಅವರು, ಭಾರತದ ಆಡುವ ಬಳಗದಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಆಡುವುದು ಉತ್ತಮ’ ಎಂದಿದ್ದಾರೆ.
ಯುಜುವೇಂದ್ರ ಚಾಹಲ್ ಅವರನ್ನು ಹೊರಗಿಟ್ಟ ಬಗ್ಗೆಯು ಮುತ್ತಯ್ಯ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಾಹಲ್ ಗೆ ಹೋಲಿಸಿದರೆ ಕುಲದೀಪ್ ಮತ್ತು ಮೀಸಲು ಸ್ಪಿನ್ನರ್ ಅಕ್ಷರ್ ಪಟೇಲ್ ಇಬ್ಬರೂ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸರಿಯಾದ ನಿರ್ಧಾರ ಎಂದು ಮುರಳೀಧರನ್ ಹೇಳಿದ್ದಾರೆ.