ಮೈಸೂರು: ರಾಜ್ಯಪಾಲರನ್ನೇಕೆ, ಸಮಯ ಸಿಕ್ಕರೆ ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ, ವಿರೋಧ ಪಕ್ಷಗಳು ಮೊದಲಿಂದ ಚಿಕ್ಕ ಚಿಕ್ಕ ವಿಚಾರಕ್ಕೆ ರಾಜೀನಾಮೆ ಕೇಳುತ್ತಿದ್ದಾರೆ. ಅವರು ಕೇಳಿದ್ದಕ್ಕೆಲ್ಲ ರಾಜೀನಾಮೆ ಕೊಡಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಿರೋಧ ಪಕ್ಷಗಳು ರಾಜ್ಯಪಾಲರ ಭೇಟಿ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಕೇಸ್ ಬೇರೆ, ಆ ಕೇಸ್ ಆದ 7 ತಿಂಗಳ ನಂತರ ಜಾರ್ಜ್ ರಾಜೀನಾಮೆ ಕೊಟ್ಟಿದ್ದರು. ಈ ಕೇಸ್ ನಲ್ಲಿ ನಾವು ಘಟನೆ ನಡೆದ ತಕ್ಷಣ ತನಿಖೆಗೆ ಆದೇಶಿಸಿದ್ದೇವೆ ಎಂದರು.
ಈಶ್ವರಪ್ಪ ರಾಜೀನಾಮೆ ಪಡೆಯುವ ಸ್ಥಿತಿ ಈಗ ನಿರ್ಮಾಣವಾಗಿಲ್ಲ. ತನಿಖೆ ನಡೆಯಲಿ, ಯಾರೇ ತಪ್ಪಿತಸ್ಥರಾದರೂ, ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಕಾನೂನು ಪ್ರಕಾರ ತನಿಖೆ ನಡೆಯುತ್ತದೆ, ನಾವು ಹಸ್ತಕ್ಷೇಪ ಮಾಡಲ್ಲ : ಬಸವರಾಜ್ ಬೊಮ್ಮಾಯಿ
ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ರಾಜೀನಾಮೆ ಸಿಎಂಗೆ ಬಿಟ್ಟ ವಿಚಾರ. ರಾಜ್ಯಾಧಕ್ಷನಾಗಿ ನಾನು ನನ್ನ ಹೇಳಿಕೆ ತಿಳಿಸಿದ್ದೇನೆ. ಸಿಎಂ ಗೆ ಈ ಬಗ್ಗೆ ನಾನು ಏನಾದರೂ ಹೇಳುವುದಿದ್ದರೆ ಅವರನ್ನು ಭೇಟಿ ಮಾಡಿ ಹೇಳುತ್ತೇನೆ ಎಂದರು.